ಪಣಜಿ : ಗೋವಾ-ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಳಗಾವಿ-ಗೋವಾ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆಯಲ್ಲಿ ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ : ನೀವು ದಲಿತರನ್ನು ಸಿಎಂ ಮಾಡಿ ನೋಡೋಣ : ಕಟೀಲ್ ಗೆ ಸವಾಲ್ ಹಾಕಿದ ಸಿದ್ದರಾಮಯ್ಯ
ಚೋರ್ಲಾ ಘಾಟ್ ರಸ್ತೆಯಲ್ಲಿ ಹಲವೆಡೆ ಮರ ಮತ್ತು ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿರುವುದರಿಂದ ತೆರವುಗೊಳಿಸಲು ಹೆಚ್ಚಿನ ಸಮಯ ಹಿಡಿಯಲಿದೆ ಎಂದೇ ಹೇಳಲಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಅನಮೋಡ ಘಾಟ್ ರಸ್ತೆಯ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಬೆಳಗಾವಿ ಭಾಗಕ್ಕೆ ತೆರಳುವ ಎಲ್ಲ ವಾಹನಗಳನ್ನು ಚೋರ್ಲಾ ಘಾಟ್ ಮೂಲಕ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಮತ್ತು ಭಾರಿ ವಾಹನಗಳನ್ನು ಕಾರವಾರ ಮಾರ್ಗವಾಗಿ ತೆರಳಲು ಜಿಲ್ಲಾಡಳಿತ ಸೂಚನೆ ಹೊರಡಿಸಿತ್ತು. ಇದೀಗ ಚೋರ್ಲಾ ಘಾಟ್ ರಸ್ತೆ ಬಂದ್ ಆಗಿದೆ.
ಇದನ್ನೂ ಓದಿ : ವರುಣನಾರ್ಭಟ : ಶಿವಮೊಗ್ಗದ ಮೂರು ಜಲಾಶಯಗಳ ಒಳ ಹರಿವು ಹೆಚ್ಚಳ