Advertisement

ಚಾಕ್ಲೆಟ್‌: ಏಕ್‌ ಪ್ರೇಮ್‌ ಕಥಾ!

11:57 AM Sep 26, 2017 | |

ಮೋಡ ಕವಿದ ವಾತಾವರಣ. ಮಳೆ ಹನಿಗಳು ಒಂದೊಂದಾಗಿ ಇಳೆಗೆ ಜಾರುತ್ತಿದ್ದವು. ವಿಶ್ವವಿದ್ಯಾಲಯದ ವನದಲ್ಲಿ ಅರಳಿದ್ದ ಕೆಂಡಸಂಪಿಗೆಯ ಸುಗಂಧ ಘಮ್‌ ಎಂದು ಮೂಗಿಗೆ ತಾಕುತ್ತಿತ್ತು. ನಾನು ರಾಣಿ ಚನ್ನಮ್ಮ ವಿವಿಯ ಬಸ್‌ ತಂಗುದಾಣದಲ್ಲಿ ನಮ್ಮೂರ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದೆ. ಬಸ್‌ ಬೇಗ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಆಗಲೇ, ಒಂದು ಹಳೆಯ ಹಾಡಿನ ಮಾಧುರ್ಯದಂತೆ ನಡೆದು ಬಂದೆ ನೀನು! ನಿನ್ನನ್ನು ನೋಡಿದ್ದೇ- ಹೃದಯದ ಬಡಿತದಲ್ಲಿ ಏರಿಳಿತ ಆಗತೊಡಗಿತ್ತು ಆವತ್ತು ಗಿಳಿಬಣ್ಣದ ಸಲ್ವಾರ್‌ ಕಮೀಜ್‌ ಧರಿಸಿದ್ದ, ನಂದಬಟ್ಟಲು ಹೂವಿನ ಮೊಗದ ಹುಡುಗಿ ನೀನು! ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡು ಹಂಸದ ನಡಿಗೆಯಲ್ಲಿ ಬಳುಕುತ್ತಾ ಬರುತ್ತಿದ್ದೆ.

Advertisement

ಬಸ್‌ ಬಂದಾಗ ನನ್ನ ಪಕ್ಕದ ಸೀಟಿನಲ್ಲೇ ಕುಳಿತುಕೊಂಡು, ಮಧುರ ಕಂಠದಲ್ಲಿ, “ಸ್ವಲ್ಪ ನಿಮ್ಮ ಫೋನ್‌ ಕೊಡುತ್ತೀರಾ ಪ್ಲೀಜ್‌?’ ಎಂದು ಕೇಳಿದೆ. ಯಾರಿಗೋ ಕರೆ ಮಾಡಿ, “ನಾನು ಬರುತ್ತಿದ್ದೇನೆ. ನನ್ನ ಫೋನ್‌ ಸ್ವಿಚ್ಡ್ ಆಫ್ ಆಗಿದೆ’ ಎಂದೆ. ನಂತರ ಬ್ಯಾಗ್‌ನಿಂದ ಡೈರಿಮಿಲ್ಕ್ ಚಾಕ್ಲೆಟ್‌ ತೆಗೆದು “ತಗೊಳ್ಳಿ’ ಎಂದೆ. ನಾನು ಬೇಡ ಅಂತ ನಿರಾಕರಿಸಿದರೆ, ತಗೊಳೆಬೇಕು ಅಂತ ಮುದ್ದು ಕಂದಮ್ಮನ ಹಾಗೆ ಹಟಕ್ಕೆ ಬಿದ್ದೆ ನೋಡು: ಆಗಲೇ, ಆಗಲೇ ಈ ದಿಲ್‌ ಅನ್ನೋದು ನಿನಗೆ ಫಿದಾ ಆಗಿಬಿಡು¤. ಮನಸ್ಸು ರಾಜಿಯಾಯಿತು. ಪದೇಪದೆ ಮುಂಗುರುಳನ್ನು ಸರಿ ಮಾಡುತ್ತಾ ಮಾತಿಗೆ ಇಳಿಯುತ್ತಿದ್ದ ನಿನ್ನ ಸಲುಗೆಯ ಮಾತುಗಳನ್ನು ಕೇಳುತ್ತಲೇ ಇರಬೇಕು ಅಂತನ್ನಿಸುತ್ತಿರುವಾಗಲೇ, ಹಾಳಾದ ನಮ್ಮೂರಿನ ಸ್ಟಾಪ್‌ ಬಂತು. ಬಸ್‌ ಇಳಿದು, ಮನಸ್ಸಿಲ್ಲದ ಮನಸ್ಸಿನಿಂದಲೇ ಮನಗೆ ಹೋದೆ. ಆದರೆ ಮನಸ್ಸನ್ನು ಕದ್ದ ಮಹಾರಾಣೀ… ಹೇಳು, ನಾಳೆ ಸಿಕ್ತೀಯ? ಆಗಲೂ ಚಾಕ್ಲೆಟ್‌ ತರ್ತಿಯಾ?

ನಿನಗಾಗಿ ಕಾಯುತ್ತಿರುವ
ಚಾಕ್ಲೆಟ್‌ ಬಾಯ್‌
ಆರೀಫ್ ವಾಲೀಕಾರ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next