Advertisement

Mangaluru: ಸಂತ ಅಲೋಶಿಯಸ್‌ ವಿ.ವಿ. ಪ್ರಥಮ ಕುಲಪತಿಯಾಗಿ ಡಾ| ಪ್ರವೀಣ್‌ ಮಾರ್ಟಿಸ್‌

10:35 AM Mar 20, 2024 | Team Udayavani |

ಮಂಗಳೂರು: ಸಂತ ಅಲೋಶಿಯಸ್‌ ಪರಿಗಣಿತ ವಿಶ್ವ ವಿದ್ಯಾನಿಲಯದ ಮೊದಲ ಕುಲಪತಿಯಾಗಿ ಪ್ರಾಂಶುಪಾಲ ರಾಗಿದ್ದ ವಂ| ಡಾ| ಪ್ರವೀಣ್‌ ಮಾರ್ಟಿಸ್‌ ಎಸ್‌.ಜೆ. ಅವರನ್ನು ನೇಮಿಸಲಾಗಿದೆ ಎಂದು ಕರ್ನಾಟಕ ಜೆಸ್ವಿಟ್‌ ಪ್ರಾಂತದ ಪ್ರೊವಿನ್ಶಿಯಲ್‌ ಹಾಗೂ ಕುಲಾಧಿಪತಿ ವಂ| ಡಯನೀಶಿಯಸ್‌ ವಾಜ್‌ ಘೋಷಿಸಿದರು.

Advertisement

1974ರ ಮೇ 20ರಂದು ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಜನಿಸಿದ ವಂ| ಡಾ| ಪ್ರವೀಣ್‌ ಮಾರ್ಟಿಸ್‌, ಶಂಕರಪುರದ ಸಂತ ಜಾನ್ಸ್‌ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದರು. ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ವಿಜ್ಞಾನ ಪದವಿ, ಬೆಂಗಳೂರಿನ ಸಂತ ಜೋಸೆಫ್‌ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಬೆಲ್ಜಿಯಂನ ನೆಮ್ಯೂರ್‌ ವಿ.ವಿ.ಯಿಂದ ನ್ಯಾನೊ ಸೈನ್ಸ್‌ನಲ್ಲಿ ಡಾಕ್ಟರೆಟ್‌ ಪದವಿ ಪಡೆದರು.

ಅವರು ಬೆಂಗಳೂರಿನ ಸಂತ ಜೋಸೆಫ್ಸ್ ಸಂಧ್ಯಾ ಕಾಲೇಜಿನಲ್ಲಿ ಕರೆಸ್ಪಾಂಡೆಂಟ್‌ ಮತ್ತು ವಿದ್ಯಾರ್ಥಿ ಸಲಹೆಗಾರರಾಗಿ, ಸಂತ ಜೋಸೆಫ್‌ ಕಾಲೇಜಿನಲ್ಲಿ (ಪ್ರಸ್ತುತ ವಿ.ವಿ.) ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ, ಸಂತ ಜೋಸೆಫ್ಸ್ನಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯ ನಿರ್ದೇಶಕರಾಗಿ, ಕಾಲೇಜಿನ ರೆಕ್ಟರ್‌ ಮತ್ತು ಪ್ರಾಂಶುಪಾಲರಾಗಿ, ಸಂತ ಅಲೋಶಿಯಸ್‌ ಸ್ವಾಯತ್ತ ಕಾಲೇಜಿನ ಡಿಡಿಯು, ಕೌಶಲ್‌ ಕೇಂದ್ರದ ನಿರ್ದೇಶಕ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರು ಭಾರತದಲ್ಲಿನ ಸ್ವಾಯತ್ತ ಕಾಲೇಜುಗಳ ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಕೌನ್ಸಿಲ್‌ನಿಂದ ಅನುಮೋದಿತ ಮೌಲ್ಯಮಾಪಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next