Advertisement

Vijayapura; ಮಹಿಳಾ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಮತ್ತೊಂದು ದೂರು

03:05 PM Mar 22, 2024 | keerthan |

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಮತ್ತೊಂದು ದೂರು ಕೇಳಿ ಬಂದಿದೆ. ಈ ಬಾರಿ ಮಹಿಳಾ ಸಿಬ್ಬಂದಿ ಮೇಲೆ ವಿಶ್ವವಿದ್ಯಾಲಯದ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಇದಲ್ಲದೇ ಪತಿಯ ಅನುಮಾನಾಸ್ಪ ಸಾವು, ಕಾರ್ಮಿಕ ಭವಿಷ್ಯ ನಿಧಿಯೂ ಬಾರದೆ ಮಾನಸಿಕವಾಗಿ ನೊಂದ ಮಹಿಳಾ ಸಿಬ್ಬಂದಿ ತನ್ನ ಇಬ್ಬರು ಮಕ್ಕಳೊಂದಿಗೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಮೇಲೆ ಮಹಿಳಾ ವಿಶ್ವವಿದ್ಯಾಲಯದ ಶ್ರೀಶೈಲ ದೊಡಮನಿ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದು, ಫೆಬ್ರವರಿ 14 ರಂದೆ ಬಾಧಿತ ಮಹಿಳಾ ಸಿಬ್ಬಂದಿ ದೂರು ನೀಡಿದ್ದು, ಆಂತರಿಕ ದೂರು ಸಲಹಾ ಸಮಿತಿ ಈವರೆಗೂ ಪ್ರಕರಣದ ಕುರಿತು ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾಳೆ.

ಇದಲ್ಲದೆ ತನ್ನ ಪತಿ ಕೂಡಾ ಇದೇ ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತ ವಿಶ್ವವಿದ್ಯಾಲಯದ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳ ತಾಳದೇ ವಿಶ್ವವಿದ್ಯಾಲಯದ ಆವರಣದಲ್ಲೇ 2015 ಮಾರ್ಚ 30 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲೂ ಸಂಶಯ ಇದೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.

ಪತಿ ಸಾವಿನ ಬಳಿಕ ಕಾರ್ಮಿಕ ಭವಿಷ್ಯ ನಿಧಿ (ಪಿಎಫ್) ಕುರಿತು ನಾನು ಅರ್ಜಿ ಸಲ್ಲಿಸಿದ್ದರೂ ವಿಶ್ವವಿದ್ಯಾಲಯದಿಂದ ನನಗೆ ಬರಬೇಕಿರುವ ಪಿಎಫ್ ಕ್ಲೇಮಿಗಾಗಿ ಕಚೇರಿಗೆ ರವಾನಿಸಿರಲಿಲ್ಲ ಎಂಬುದು ಖುದ್ದು ಕಲಬುರಗಿ ಪ್ರಾದೇಶಿಕ ಭೇಟಿ ನೀಡಿದಾಗ ಬೆಳಕಿಗೆ ಬಂದಿದೆ. ಈ ಬಗ್ಗೆ ಕೇಳಿದರೆ ವಿಶ್ವವಿದ್ಯಾಲಯದ ಎಸ್ಸಿ ಎಸ್ಟಿ ನೌಕರರ ಸಂಘದ ಸುಭಾಸ ಕಾಂಬಳೆ ಹಾಗೂ ಹಣಕಾಸು ವಿಭಾಗದ ಅಧಿಕಾರಿಗಳು ನನ್ನನ್ನು ಕೆಲಸದಿಂದ ಕಿತ್ತು ಹಾಕುವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ದಲಿತ ಸಂಘಟನೆಗಳ ಮೂಲಕ ಬೇಡಿಕೆ ಸಲ್ಲಿಸಿದ್ದರಿಂದ ದಲಿತ ಸಂಘಟನೆ ಮೂಲಕವೇ ಪಿಎಫ್ ಪಡೆಯುವಂತೆ ನನ್ನ ಸಂಕಷ್ಟವನ್ನು ಮತ್ತಷ್ಟು ಕೆದಕುವ ಕೆಲಸ ಮಾಡುತ್ತಿದ್ದಾರೆ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ಸಂಕಷ್ಟ ವಿವರಿಸಿದ್ದಾಳೆ.

ಹೀಗಾಗಿ ಪತಿಯ ಅನುಮಾಸ್ಪದ ಸಾವು, ಕಾರ್ಮಿಕ ಭವಿಷ್ಯ ನಿಧಿ ಬಿಡುಗಡೆ ಮಾಡದೇ ವಿಳಂಬ ನೀತಿ ಅನುಸರಣೆ ಹಾಗೂ ಲೈಂಗಿಕ ಕಿರುಕುಳದ ದೌರ್ಜನ್ಯ ಎಸಗಿದ ಕಾರಣ ತನ್ನ ಎರಡು ಮಕ್ಕಳೊಂದಿಗೆ ಬದುಕುವುದು ಕಷ್ಟವಾಗಿದೆ. ಹೀಗಾಗಿ ತನಗೆ ದಯಾ ಮರಣಕ್ಕೆ ಅವಕಾಶ ಕಲ್ಪಿಸುವಂತೆ ವಿಶ್ವವಿದ್ಯಾಲಯದ ಮಹಿಳಾ ಸಿಬ್ಬಂದಿ ನೀಡಿದ ದೂರು ಜಿಲ್ಲಾಡಳಿತ ಸ್ವೀಕೃತಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next