Advertisement

ಕುಕ್ಕೆ ಜಲಸಂಗ್ರಹ ಘಟಕದಲ್ಲಿ ಕ್ಲೋರಿನ್‌ ಸೋರಿಕೆ, ಆತಂಕ

11:21 PM Oct 29, 2019 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕಲ್ಲಪಣೆಯ ಜಲಸಂಗ್ರಹ ಘಟಕದಲ್ಲಿ ಕ್ಲೋರಿನ್‌ ಸೋರಿಕೆಯಾಗಿ ಉಸಿರಾಟದ ತೊಂದರೆ ಕಂಡುಬಂದು ದರಿಂದ ಸ್ಥಳೀಯರು ಮನೆ ತೊರೆದು ಹೊರಬಂದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

Advertisement

ತಡರಾತ್ರಿ 1 ಗಂಟೆ ವೇಳೆಗೆ ಕ್ಲೋರಿನ್‌ ಸೋರಿಕೆಯಾಗುತ್ತಿದ್ದಂತೆ ಪರಿಸರದಲ್ಲಿ ದುರ್ವಾಸನೆ ಪಸರಿಸಿತು. ಉಸಿರಾಟದ ತೊಂದರೆಗೊಳಗಾದ ಜನರು ಭಯದಿಂದ ರಾತೋರಾತ್ರಿ ಮನೆ ತೊರೆದು ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ ಆಶ್ರಯ ಪಡೆದರು.

ಘಟನೆ ವೇಳೆ ಘಟಕದಲ್ಲಿ ಇಬ್ಬರು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದರು. ಕೂಡಲೇ ದೇವಸ್ಥಾನ ಹಾಗೂ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸುಳ್ಯದಿಂದ ಅಗ್ನಿಶಾಮಕ ದವರು ಬಂದು ಮುಂಜಾನೆ 5ರ ಹೊತ್ತಿಗೆ ಸೋರಿಕೆ ತಡೆಗಟ್ಟಿದರು.

50 ಕುಟುಂಬಗಳಲ್ಲಿ ಭೀತಿ: ದೀಪಾವಳಿ ಸಂಭ್ರಮಾಚರಿಸಿ ನಿದ್ರೆಗೆ ಜಾರಿದ್ದ 50ಕ್ಕೂ ಅಧಿಕ ಕುಟುಂಬಗಳ ಜನರು ಏಕಾಏಕಿ ನಡೆದ ಘಟನೆಯಿಂದ ಆತಂಕಕ್ಕೊಳಗಾಗಿದ್ದರು. ಸ್ಥಳೀಯರೆಲ್ಲರೂ ಬೆಳಗಿನ ತನಕವೂ ಭಯದಲ್ಲೇ ಇರುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next