ಸುರತ್ಕಲ್: ಒಂದು ಸಾವಿರ ಇತಿಹಾಸ ಹೊಂದಿರುವ, ಸಪ್ತ ದುರ್ಗಾಕ್ಷೇತ್ರಗಳಲ್ಲಿ ಒಂದೆಂಬ ಐತಿಹ್ಯವಿರುವ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವು ಸೋಮವಾರ ನಡೆಯಲಿದ್ದು, ರವಿವಾರ ಕಲಶಪೂರಣ ಧಾರ್ಮಿಕ ಕಾರ್ಯಕ್ರಮವು ವೇ|ಮೂ| ಕುಡುಪು ನರಸಿಂಹ ತಂತ್ರಿ ಅವರ ಮುಂದಾಳತ್ವದಲ್ಲಿ ರಾತ್ರಿ ನಡೆಯಿತು.
Advertisement
ಸೋಮವಾರ ಬೆಳಗ್ಗೆ 10.30ಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಿಗೆ 1,001 ಕಲಶ ಸಹಿತ ಬ್ರಹ್ಮಕಲಶ ನೆರವೇರಲಿದೆ. ಸಂಜೆ 5ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.