Advertisement

Rambo Circus: ರ್‍ಯಾಂಬೋ ಸರ್ಕಸ್‌… ಮನೋರಂಜನೆ, ಸಾಹಸದಲ್ಲಿ ಹೊಸ ಪ್ರಯೋಗ

01:07 PM Apr 08, 2024 | Team Udayavani |

ಮಹಾನಗರ: ಐದು ಚಾಕುಗಳನ್ನು ನುಂಗಬಲ್ಲ ಯುವಕ…, ಕುಡಿದ ಅಷ್ಟೂ ನೀರನ್ನು ಉಗುಳುವ ವ್ಯಕ್ತಿ… ಟೇಬಲ್‌ ಮೇಲೆಯೇ ಸ್ಕೇಟಿಂಗ್‌, ಗೋಳದೊಳಗೆ ಬೈಕ್‌ ಸ್ಟಂಟ್‌… ಹೀಗೆ ಹಲವಾರು ಸಾಹಸಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಮಂಗಳೂರಿನ ಕೂಳೂರು ಸಮೀಪದ ರ್‍ಯಾಂಬೋ ಸರ್ಕಸ್‌ನಲ್ಲಿ!

Advertisement

ಮೈ ನವಿರೇಳಿಸುವ ಹೊಸ ಪ್ರಯೋಗಗಳೊಂದಿಗೆ ದಿಲ್ಲಿ, ಮುಂಬಯಿ, ಬೆಂಗಳೂರು, ಗೋವಾ ಹಾಗೂ ಇನ್ನೂ ಹಲವಾರು ಮಹಾನಗರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿರುವ ರ್‍ಯಾಂಬೋ ಸರ್ಕಸ್‌ ಇದೀಗ ಮಂಗಳೂರಿನ ಬಂಗ್ರ ಕೂಳೂರು ಗೋಲ್ಡ್‌ಫಿಂಚ್‌ ಸಿಟಿ ಎದುರು ಗಡೆಯ ಡೆಲ್ಟಾಗ್ರೌಂಡ್‌ನ‌ಲ್ಲಿ ಪ್ರದರ್ಶನ ಆರಂಭಿಸಿದೆ. ಕುಟುಂಬ ಸಹಿತವಾಗಿ ಮನೋರಂಜನೆ ಪಡೆಯಲು ಸಕಾಲ.

120 ನಿಮಿಷಗಳ ಪ್ರದರ್ಶನದಲ್ಲಿ ಒಂದಕ್ಕೊಂದು ಸಾಹಸಗಳು ಭಿನ್ನವಾಗಿ ಸಾಹಸಮಯವೆಂಬಂತೆ ಭಾಸವಾಗುತ್ತವೆ. ಒಮ್ಮೆ ಗ್ಯಾಲರಿಗೆ ಹೊಕ್ಕ ಬಳಿಕ ಪ್ರದರ್ಶನ ಕೊನೆಯಾಗುವುದೇ ತಿಳಿಯದು. ವೇದಿಕೆಯತ್ತ ನೆಟ್ಟ ದೃಷ್ಟಿ ಬೇರೆಡೆ ಹಾಯಿಸಲು ಅವಕಾಶವೇ ಇಲ್ಲ. ಒಂದರ ಬೆನ್ನಲ್ಲೊಂದು ವಿಭಿನ್ನ ಪ್ರದರ್ಶನಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ.

ರ್‍ಯಾಂಬೊ ತಂಡವು ಬಬಲ್‌ ಶೋ, ಸ್ಕೇಟಿಂಗ್‌, ಲ್ಯಾಡರ್‌ ಬ್ಯಾಲೆನ್ಸ್‌, ಸೋÌರ್ಡ್‌ ಆಕ್ಟ್, ಕ್ಯೂಬ್‌ ಜಗ್ಲಿಂಗ್‌, ರೊಲ್ಲಾ ಬೊಲ್ಲಾ, ಹುಲಾ ಹೂಪ್‌ ಮತ್ತು ಏರಿಯಲ್‌ ರೋಪ್‌ ಜತೆಗೆ ಅನೇಕ ಮನೋರಂಜನ ಆಟಗಳನ್ನು ಒಳಗೊಂಡಿದೆ. ಬಾಲ್ಯದಲ್ಲಿ ಆನಂದಿಸಿದ ನಗು ತುಂಬಿದ ಜೋಕರ್‌ ವೇದಿಕೆಯಲ್ಲಿ ಕಂಡಾಗ ಮತ್ತೂಮ್ಮೆ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ.

ಗಮನ ಸೆಳೆಯುವ ವಾಟರ್‌ ಯೋಗ
ದೇಶದಲ್ಲಿ ಪ್ರಚಲಿತದಲ್ಲಿರುವ ಯೋಗವೂ ಈಗ ಸರ್ಕಸ್‌ನಲ್ಲಿದೆ. ವ್ಯಕ್ತಿಯೊಬ್ಬ ಲೋಟದ ಮೂಲಕ ಬಕೆಟ್‌ವೊಂದರಲ್ಲಿದ್ದ ಅರ್ಧ ನೀರನ್ನು ಕುಡಿಯುತ್ತಾನೆ. ಬಳಿಕ ಕುಡಿದ ಅಷ್ಟೂ ನೀರನ್ನು ಉಗುಳುವ ಸಾಹಸ ಮಾಡುತ್ತಾನೆ. ಎರಡು ಬಣ್ಣದ ನೀರನ್ನು ಕುಡಿದು ಒಂದೊಂದೇ ಬಣ್ಣದ ನೀರನ್ನು ಪ್ರತ್ಯೇಕವಾಗಿ ಉಗುಳುವುದು ನೆರೆದವರ ವಿಸ್ಮಯಕ್ಕೆ ಕಾರಣವಾಗಿದೆ.

Advertisement

ಗೋಳದೊಳಗೆ ಬೈಕ್‌ ಸ್ಟಂಟ್‌
ಬೈಕ್‌ನಲ್ಲಿ ಸಾಹಸ ಮಾಡುವವರನ್ನು ಕಂಡಿದ್ದೇವೆ. ಆದರೆ ರ್‍ಯಾಂಬೋ ಸರ್ಕಸ್‌ನಲ್ಲಿ ಗೋಳದೊಳಗೆ ಇಬ್ಬರು ಬೈಕ್‌ ಸವಾರರು ಮಾಡುವ ಸಾಹಸ ಕಂಡಾಗ ಮೈನವಿರೇಳುತ್ತದೆ. ಎರ್ರಾಬಿರ್ರಿ ಚಲಿಸಿದರೂ ಒಂದಕ್ಕೊಂದು ಢಿಕ್ಕಿಯಾಗದು. ಎಷ್ಟೇ ವೇಗವಾಗಿ ಚಲಿಸಿದರೂ ಪಥ ಬದಲಾದರೂ ಯಾವುದೇ ಅಪಾಯ ಎದುರಾಗದು.

ಫ್ಲೈಯಿಂಗ್, ಸೈಕ್ಲಿಂಗ್‌ ನಯನ ಮನೋಹರ
ವಿವಿಧ ಭಂಗಿಗಳಲ್ಲಿ ಯುವಕ ಯುವತಿ ಯರು ಹಾರಾಡುವುದು.. ಎತ್ತರದಿಂದ ಜಿಗಿಯುವುದು, ಒಂದು ಬದಿಯಿಂದ ಹಗ್ಗದ ಮೂಲಕ ಮತ್ತೂಂದೆಡೆ ಜಿಗಿಯುವುದು ಮನೋಹರ ದೃಶ್ಯ ಸೃಷ್ಟಿಸುತ್ತದೆ. ಮತ್ತೂಂದಡೆ ಬ್ರೇಕ್‌ ಇಲ್ಲದ ಸೈಕಲ್‌ ಬ್ಯಾಲೆನ್ಸ್‌, ಏಕ ಚಕ್ರದ ಸಾಹಸವೂ ಚಕಿತ ಮೂಡಿಸುತ್ತವೆ. ಕಾರ್ಯ ಕ್ರಮದ ಕೊನೆಯಲ್ಲಿ ರಾಷ್ಟ್ರ ಧ್ವಜ ಹಿಡಿದು ಭಾರತಾಂಬೆಗೆ ಪ್ರಣಾಮ ಸಲ್ಲಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌
ಪ್ರದರ್ಶನದ ಸಮಯದಲ್ಲಿ ಟಿಕೆಟ್ಸ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಮುಂಗಡ ಟಿಕೆಟ್‌ ಕಾಯ್ದಿರಿಸಿಕೊಳ್ಳಲು //www.rambocircus.in ಲಾಗ್‌ ಇನ್‌ ಮಾಡಿ. ಬುಕ್‌ ಮೈ ಶೋ ಆ್ಯಪ್‌ನ ಮೂಲಕ ಸಹ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಪ್ರದರ್ಶನ ಸಮಯ: ವಾರದ ದಿನಗಳು 2 ಶೋ(ಸಂಜೆ 4.30, 7.30 ಗಂಟೆಗೆ). ಶನಿವಾರ, ರವಿವಾರ, ರಜಾದಿನಗಳಲ್ಲಿ 3 ಶೋಗಳು (ಮಧ್ಯಾಹ್ನ 1:30, ಸಂಜೆ 4.30, 7.30 ಗಂಟೆಗೆ).

ಇದನ್ನೂ ಓದಿ: Awareness: ಯಕ್ಷಗಾನ ಕಲೆಯ ಮೂಲಕ ಐಎಎಸ್,‌ ಐಪಿಎಸ್,‌ ಕೆಎಎಸ್ ಅಧಿಕಾರಿಗಳಿಂದ ಮತ ಜಾಗೃತಿ

Advertisement

Udayavani is now on Telegram. Click here to join our channel and stay updated with the latest news.

Next