Advertisement

ಸರಳವಾಗಿ ಮದುವೆಯಾದ ಅಂತಾರಾಷ್ಟ್ರೀಯ ಕುಸ್ತಿಪಟು

05:50 PM Apr 23, 2020 | Naveen |

ಚಿತ್ರದುರ್ಗ: ಅಂತಾರಾಷ್ಟ್ರೀಯ ಕುಸ್ತಿಪಟು ಮಹಮ್ಮದ್‌ ರಫಿಕ್‌ ಹೋಳಿ ಅವರು ಬುಧವಾರ ಚಿತ್ರದುರ್ಗದಲ್ಲಿ ಸರಳ ವಿವಾಹವಾದರು. ಧಾರವಾಡ ಮೂಲದ ಮಹಮ್ಮದ್‌ ರಫಿಕ್‌ ಹೋಳಿ, ಚಿತ್ರದುರ್ಗದ ಯುವತಿ ಹೀನಾ ಕೌಸರ್‌ ಅವರನ್ನು ಇಲ್ಲಿನ ಫಾತೀಮಾ ಮಸೀದಿಯಲ್ಲಿ ವರಿಸಿದರು. ಈ ವೇಳೆ ಎರಡೂ ಕುಟುಂಬದ ಬೆರಳೆಣಿಕೆಯಷ್ಟು ಜನ ಭಾಗವಹಿಸಿದ್ದರು.

Advertisement

ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರಿಂದ ಅನುಮತಿ ಪಡೆದು ಚಾಲಕ ಸೇರಿ ಐದು ಜನ ಚಿತ್ರದುರ್ಗಕ್ಕೆ ಆಗಮಿಸಿ ಮದುವೆಯಾದರು. ಈ ಹಿಂದೆ ಏ.3ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಲಾಕ್‌ಡೌನ್‌ ಕಾರಣಕ್ಕೆ ಏ.17ಕ್ಕೆ ಮುಂದೂಡಲಾಗಿತ್ತು. ಆದರೆ ಲಾಕ್‌ಡೌನ್‌ ತೆರವಾಗದ ಕಾರಣ ಬುಧವಾರ ಎರಡೂ ಕುಟುಂಬಗಳು ಒಪ್ಪಿ ಸರಳವಾಗಿ ಮದುವೆ ಮಾಡಿದ್ದಾರೆ.

ದಾವಣಗೆರೆಯ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಅಧ್ಯಯನ ಮಾಡುತ್ತಿದ್ದ ಮಹಮ್ಮದ್‌ ರಫಿಕ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್‌ ಶಿಪ್‌, ಓಲಿಂಪಿಕ್‌ ಕ್ರೀಡೆಗಳಲ್ಲೂ ಭಾರತದ ಪರ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next