Advertisement

ಅರಣ್ಯ ವಾಸಿಗಳು ಸಲ್ಲಿಸಿದ ತಿರಸ್ಕೃತ ಅರ್ಜಿಗಳನ್ನಷ್ಟೇ ಪರಿಶೀಲಿಸಿ

05:42 PM May 04, 2019 | Naveen |

ಚಿತ್ರದುರ್ಗ: ಜಿಲ್ಲೆಯ ಗ್ರಾಪಂ ಮಟ್ಟದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ವಾಸಿಗಳು ಸಲ್ಲಿಸಿದ ಅರ್ಜಿಗಳು ತಿರಸ್ಕೃತಗೊಂಡಿದ್ದು, ಅವುಗಳನ್ನು ಮಾತ್ರ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಗಳ ಪುನರ್‌ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಅರ್ಜಿಗಳು ತಿರಸ್ಕೃತಗೊಂಡಿದ್ದು, ಅರಣ್ಯ ಜಾಗವೆ ಅಥವಾ ಬುಡಕಟ್ಟು ನಿವಾಸಿಗಳು ವಾಸಿಸುವ ಜಾಗವೆಂದು ಪರಿಶೀಲಿಸಬೇಕು. ಆ ಸ್ಥಳಕ್ಕೆ ಅಲ್ಲಿನ ನಿವಾಸಿಗಳು ಕಂದಾಯ ರೂಪದಲ್ಲಿ ಹಣ ಪಾವತಿಸಿದ್ದಾಗಿದ್ದರೆ ಅಂತಹ ಅರ್ಜಿಗಳನ್ನು ಮರು ಪರಿಶೀಲಿಸಬೇಕು ಎಂದು ತಿಳಿಸಿದರು.

ಅರಣ್ಯ ಹಕ್ಕು ಸಮಿತಿಗಳು ನೈಸರ್ಗಿಕ ನ್ಯಾಯ ನಿಯಮಗಳನ್ನು ಪಾಲಿಸದೆ ಅರ್ಜಿಗಳನ್ನು ತಿರಸ್ಕರಿಸದಲ್ಲಿ ಪುನಃ ನೈಸರ್ಗಿಕ ನ್ಯಾಯ ನಿಯಮಗಳನ್ವಯವೇ ಅಂತಹ ಅರ್ಜಿಗಳನ್ನು ಪುನರ್‌ ಪರಿಶೀಲಿಸಿ ಸೂಕ್ತ ಆದೇಶಗಳನ್ನು ಹೊರಡಿಸಲು ಯಾವುದೇ ಬಾಧಕವಿರುವುದಿಲ್ಲ ಎಂದು ಹೇಳಿದರು.

ಉಪವಿಭಾಗಾಧಿಕಾರಿ ವಿಜಯ ಕುಮಾರ್‌ ಮಾತನಾಡಿ, ಅರ್ಜಿ ಸಲ್ಲಿಸಿದ ಜಮೀನು ಕಂದಾಯ ಇಲಾಖೆಗೆ ಸೇರಿದ ಜಮೀನೆ, ಸರ್ಕಾರದ ಜಮೀನೆ ಅಥವಾ ಅರಣ್ಯ ಇಲಾಖೆಯಿಂದ ಅಸೂಚಿಸಲ್ಪಟ್ಟ ಆಸ್ತಿಯೆ ಎಂದು ಖಚಿತ ಪಡಿಸಿಕೊಂಡು ಅರ್ಜಿದಾರರಿಗೆ ವೈಯಕ್ತಿಕವಾಗಿ ಲಿಖೀತ ರೂಪದ ನೋಟಿಸ್‌ ನೀಡಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

Advertisement

ಈ ಹಿಂದೆ ಆಡಾಕ್ಟ್ ಕಮಿಟಿ ರಚಿಸಿದ್ದು ಅದರ ಪ್ರಕಾರ ಪ್ರತಿ ಗ್ರಾಪಂ ಮಟ್ಟದಲ್ಲಿ ಪಿಡಿಒ ಕಂದಾಯ ಅಧಿಕಾರಿ ಹಾಗೂ ಅರಣ್ಯ ಅಧಿಕಾರಿ ಒಟ್ಟುಗೂಡಿ ಸಭೆ ನಡೆಸಿ ಪೋಟೋ, ವಿಡಿಯೋ, ಚಿತ್ರಕರಣ ಹಾಗೂ ಆಡಿಯೋ ರೆಕಾರ್ಡ್‌ ಮಾಡಿ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್‌ ನಹೀದ, ಪ್ರೊಬೆಷನರಿ ಜಿಲ್ಲಾಧಿಕಾರಿ ಡಾ| ನಂದಿನಿದೇವಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜೆ. ರಾಜು ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ದಂಡಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next