Advertisement

ಸಂಪತ್ತಿನಿಂದ ನೆಮ್ಮದಿ ಸಿಗಲ್ಲ: ಪಂಡಿತಾರಾಧ್ಯ ಶ್ರೀ

06:32 PM Dec 07, 2021 | Team Udayavani |

ಹೊಸದುರ್ಗ: ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತೋಷಸಿಗುತ್ತದೆಯೇ ಹೊರತು ಹಣ, ಐಶ್ವರ್ಯದಿಂದಲ್ಲ ಎಂದುತರಳಬಾಳು ಮಠದ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಸಾಣೇಹಳ್ಳಿ ಸಮೀಪದ ಶ್ರೀಹಾಲುಮಲ್ಲೇಶ್ವರಗುಡ್ಡದ ಮಲ್ಲೇದೇವರ ಸನ್ನಿಧಾನದಲ್ಲಿನಡೆದ ಕಾರ್ತಿಕೋತ್ಸವ ಹಾಗೂ ಶರಣಧರ್ಮ ಸಮಾರಂಭದಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಓದದೆ,ಬರೆಯದೆ ಕೇವಲ ದೇವರಿಗೆ ಪೂಜೆ ಮಾಡಿದರೆ ಪರೀಕ್ಷೆಯಲ್ಲಿತೇರ್ಗಡೆ ಹೊಂದಲು ಸಾಧ್ಯವಿಲ್ಲ.

ಇದು ಅಜ್ಞಾನದ ಪ್ರತೀಕ.ನಿಮಗೆ ಒದಗಿ ಬಂದ ಕಾಯಕವನ್ನು ನಿಷ್ಠೆಯಿಂದ ಮಾಡಬೇಕುಎಂದರು.ಸುಮಾರು 300 ವರ್ಷಗಳ ಹಿಂದೆ ಸಾಣೇಹಳ್ಳಿಗೆ ಬಂದಿದ್ದಮಲ್ಲೇಶ್ವರ ಎಂಬ ಸಂತರೊಬ್ಬರು ಮಲ್ಲೇದೇವರಗುಡ್ಡದಲ್ಲಿವಾಸವಾಗಿದ್ದರು. ಕಾಡಿನಲ್ಲಿದ್ದ ಗಿಡಮೂಲಿಕೆಗಳಿಂದ ಅನೇಕರಿಗೆನೆಗಡಿ, ಕೆಮ್ಮು, ಜ್ವರ, ಧರ್ಮರೋಗಕ್ಕೆ ಔಷ ನೀಡುವ ಮೂಲಕಗುಣಮುಖರನ್ನಾಗಿ ಮಾಡುತ್ತಿದ್ದರು ಎಂದು ಸ್ಮರಿಸಿದರು.

ನಿವೃತ್ತ ಉಪನ್ಯಾಸಕ ಐ.ಜಿ. ಚಂದ್ರಶೇಖರಯ್ಯ ಮಾತನಾಡಿ,ಈ ಹಿಂದೆ ಮಲ್ಲೇಶ್ವರ ಎಂಬ ಸಿದ್ಧಿಪುರುಷರು ಇಲ್ಲಿ ನೆಲೆಸಿದ್ದರು.ಅವರ ಐಕ್ಯ ಸ್ಥಳವೇ ಈಗಿನ ಮಲ್ಲೆದೇವರಗುಡ್ಡ. ಈ ಪುಣ್ಯಕ್ಷೇತ್ರಎಲ್ಲಾ ಜಾತಿಗಳನ್ನು ಒಳಗೊಂಡ ಐಕ್ಯತಾ ಸ್ಥಳವಾಗಬೇಕು.ಶ್ರೀಗಳ ನೇತೃತ್ವದಲ್ಲಿ ಈ ಸ್ಥಳ ಅಭಿವೃದ್ಧಿಯಾಗಬೇಕೆಂದುಆಶಿಸಿದರು. ಶಿಕ್ಷಕ ಪ್ರಕಾಶ್‌, ಸಾಣೇಹಳ್ಳಿ ಸಾ.ಚಾ. ಮಂಜಯ್ಯ,ಸಾ.ನಿ. ರವಿಕುಮಾರ್‌ ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next