Advertisement

ಶುದ್ಧ ಮನಸ್ಸಿನ ಕಾಯಕದಿಂದ ಉನ್ನತಿ ಸಾಧ್ಯ

02:09 PM Nov 11, 2021 | Team Udayavani |

ಚಿತ್ರದುರ್ಗ: ಮನಸ್ಸು ಶುದ್ಧವಾಗಿದ್ದರೆ ಕೆಲಸಗಳುಸರಾಗವಾಗಿ ಸಾಗುತ್ತವೆ. ಶುದ್ಧ ಮನಸ್ಸು ಕೆಲಸದಲ್ಲಿಆಸಕ್ತಿ ಮೂಡಿಸುತ್ತದೆ. ಆದ್ದರಿಂದ ಮನಸ್ಸುಶುದ್ಧವಾಗಿರಲು ಗುರುಗಳ ಸಾಂಗತ್ಯ ಅಗತ್ಯ ಎಂದುಆದಿಚುಂಚನಗಿರಿ ಮಠದ ಡಾ| ನಿರ್ಮಲಾನಂದನಾಥಸ್ವಾಮೀಜಿ ಹೇಳಿದರು.

Advertisement

ನಗರದ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀಶಿವಲಿಂಗಾನಂದ ಸ್ವಾಮೀಜಿಯವರ ಜನ್ಮದಿನಾಚರಣೆಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನನೀಡಿದರು. ಮಾನಸ ಸರೋವರದಲ್ಲಿ ನೀರು ತಿಳಿಯಾಗಿನಮ್ಮ ಬಿಂಬ ನಮಗೆ ಕಾಣಿಸುವಂತೆ ನಮ್ಮ ಮನಸ್ಸುಸಹಾ ತಿಳಿಯಾಗಿದ್ದಾಗ ಮಾತ್ರ ಉತ್ತಮ ಜೀವನ ಸಾಧ್ಯ.ಈ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆಗಾಗನಡೆಯುತ್ತಿರಬೇಕು. ನಾವೆಲ್ಲರೂ ಭಾಗಿಯಾಗಬೇಕುಎಂದರು.ಶಿವಲಿಂಗಾನಂದ ಶ್ರೀಗಳು ಎಲ್ಲರಿಗೂಅಚ್ಚುಮೆಚ್ಚಿನವರಾಗಿದ್ದಾರೆ.

ಯಾವುದೇ ರೀತಿಯವಂಚನೆ, ಕಪಟ, ಮೋಸ, ಅಹಂಕಾರ, ದ್ವೇಷ,ಮೇಲು-ಕೀಳು ಭಾವನೆ ಇಲ್ಲದೆ ಆಶ್ರಮಕ್ಕೆ ಬರುವಎಲ್ಲರನ್ನೂ ಸಮಾನವಾಗಿ ನೋಡುವ ಮಾತೃಹೃದಯ ಹೊಂದಿದ್ದಾರೆ. ನಮ್ಮ ಹಿರಿಯ ಶ್ರೀಗಳಾದಬಾಲಗಂಗಾಧರನಾಥ ಸ್ವಾಮೀಜಿಯವರು ಇದ್ದಾಗಶಿವಲಿಂಗಾನಂದ ಶ್ರೀಗಳಿಂದ ವೇದಾಂತ ಪಾರಾಯಣಮಾಡಿಸುತ್ತಿದ್ದರು. ಅನುಮಾನ ಬಂದಲ್ಲಿ ಪರಿಹಾರಕೇಳುತ್ತಾ, ನಮಗೂ ಕೇಳಿಸುವ ಸೌಭಾಗ್ಯ ಕಲ್ಪಿಸಿದ್ದರುಎಂದು ಸ್ಮರಿಸಿದರು.

ಚಿತ್ರದುರ್ಗದಲ್ಲಿರುವ ಶ್ರೀಮಠದ ಗೋಶಾಲೆಯನ್ನುಇನ್ನಷ್ಟು ಅಭಿವೃದ್ಧಿ ಮಾಡಬೇಕು ಎಂದು ಇಲ್ಲಿನಜನತೆ ಹಾಗೂ ಮುಖಂಡರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗುತ್ತೇವೆ ಎಂದು ತಿಳಿಸಿದರು.ಮಾಜಿ ಸಚಿವ ಎಚ್‌. ಆಂಜನೇಯ ಮಾತನಾಡಿ,ಆದಿಚುಂಚುನಗಿರಿಯ ಬಾಲಗಂಗಾಧರನಾಥಶ್ರೀಗಳು ಕಬೀರಾನಂದ ಮಠಕ್ಕೆ ಉತ್ತಮಗುರುಗಳನ್ನು ನೀಡುವ ಮೂಲಕ ಮಠವನ್ನು ಇಂದುಗುರುತಿಸುವಂತೆ ಮಾಡಿದ್ದಾರೆ.

ಶ್ರೀಗಳು ಇಲ್ಲಿಗೆಆಗಮಿಸಿದ ಮೇಲೆ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ವಿವಿಧಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಮಕ್ಕಳ ಶೈಕ್ಷಣಿಕಪ್ರಗತಿಗೆ ದಾರಿ ಮಾಡಿಕೊಟ್ಟಿದ್ದಾರೆ. ಅದೇ ರೀತಿವೃದ್ಧಾಶ್ರಮ ಸ್ಥಾಪಿಸಿ ಮುಪ್ಪಿನ ಕಾಲದಲ್ಲಿ ದಿಕ್ಕಿಲ್ಲದವರಿಗೆಆಸರೆಯಾಗಿದ್ದಾರೆ ಎಂದು ಬಣ್ಣಿಸಿದರು.ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದಸ್ವಾಮೀಜಿ ಮಾತನಾಡಿ, ಗುರುಗಳನ್ನು ಭಕ್ತರುಮಾನವರಂತೆ ನೋಡದೆ ದೇವರನ್ನಾಗಿ ನೋಡಬೇಕಿದೆ.ದೈವ ಭಕ್ತಿಯಿಂದ ನೋಡಿದಾಗ ಅಂತಃಕರಣಕ್ಕೆಮುಕ್ತಿ ದೊರೆಯುತ್ತದೆ.

Advertisement

ಸ್ವಾಮಿಗಳ ಬರುವಿಕೆಯನ್ನುಕಾಯುವುದರಿಂದ ಜನ್ಮ ಸಾರ್ಥಕವಾಗುತ್ತದೆಎಂದರು.ಕಾರ್ಯಕ್ರಮದಲ್ಲಿ ಹಾಸನದ ಶ್ರೀ ಶಂಭುನಾಥಸ್ವಾಮೀಜಿ, ಆದಿಹಳ್ಳಿಯ ಶಿವಪುತ್ರ ಶ್ರೀಗಳು, ಸವಿತಾಸಮಾಜದ ಶ್ರೀಧರನಾಥ ಸರಸ್ವತಿ ಸ್ವಾಮೀಜಿ,ಹನುಮಂತನಾಥ ಶ್ರೀಗಳು, ನಗರಸಭಾ ಸದಸ್ಯರಾದವೆಂಕಟೇಶ್‌, ಚಂದ್ರಶೇಖರ್‌, ನಗರಾಭಿವೃದ್ಧಿಪ್ರಾಧಿ ಕಾರದ ಸದಸ್ಯರಾದ ಓಂಕಾರ್‌, ರೇಖಾ,ಗುತ್ತಿಗೆದಾರ ಶಿವಕುಮಾರ್‌, ಜಿ.ಪಂ.ಮಾಜಿ ಸದಸ್ಯನರಸಿಂಹರಾಜು, ಭದ್ರಾವತಿ ಶಾಖಾ ಮಠದರಾಮುಮೂರ್ತಿ, ಮುದ್ದೇನಹಳ್ಳಿಯ ಸೇವಾಲಾಲ್‌ಆಶ್ರಮದ ಅರುಣ್‌ ಗೂರೂಜಿ ಮೊದಲಾದವರುಪಾಲ್ಗೊಂಡಿದ್ದರು. ಪ್ರಾಧ್ಯಾಪಕ ನೆಲ್ಲಿಕಟ್ಟೆ ಸಿದ್ದೇಶ್‌ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next