Advertisement

ಯಳಗೋಡು ಮ್ಯಾಸರಹಟ್ಟಿಯಲ್ಲಿ ಲಸಿಕೆ ಜಾಗೃತಿ

05:13 PM Nov 03, 2021 | Team Udayavani |

ಚಿತ್ರದುರ್ಗ: ತಾಲೂಕಿನ ಯಳಗೋಡು ಮ್ಯಾಸಾರಟ್ಟಿ ಗ್ರಾಮದಲ್ಲಿ ಲಸಿಕೆ ನಿರಾಕರಣೆಹಿನ್ನೆಲೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾ ಕಾರಿ ಬಿ. ಜಾನಕಿ ಮಂಗಳವಾರ ಗ್ರಾಮದಮನೆ ಮನೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯುವಂತೆ ಮನವೊಲಿಸಿದರು.

Advertisement

ಈ ವೇಳೆಮಾತನಾಡಿದ ಅವರು, ಜನಸಂದಣಿಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕಅಂತರ ಕಾಪಾಡುವುದು, ಕೈಗಳನ್ನು ತೊಳೆದುಕೊಳ್ಳವ ಬಗ್ಗೆ ಹಾಗೂ ಕಡ್ಡಾಯವಾಗಿಲಸಿಕೆ ಪಡೆಯುವುದರಿಂದ ಕೋವಿಡ್‌-19 ಮಾತ್ರವಲ್ಲದೇ ಇತರೆ ರೋಗದಿಂದ ಕೂಡದೂರವಿರಬಹುದು ಎಂದು ಗ್ರಾಮಸ್ಥರಲ್ಲಿ ತಿಳಿವಳಿಕೆ ಮೂಡಿಸಿದರು.

ಗ್ರಾಮದ 22 ಜನರಿಗೆಕೋವಿಡ್‌-19ರ ಮೊದಲ ಡೋಸ್‌ ಮತ್ತು 4 ಜನರಿಗೆ ಎರಡನೇ ಡೋಸ್‌ ಹಾಗೂ 2ಗರ್ಭಣಿಯರಿಗೆ ಲಸಿಕೆಯನ್ನು ನೀಡಲಾಯಿತು. ಈವರೆಗೆ ಗ್ರಾಮದಲ್ಲಿ ಸುಮಾರು 368ಜನರಿಗೆ ಲಸಿಕೆಯನ್ನು ನೀಡಲಾಗಿದೆ.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳಾದ ಡಾ| ವಾಣಿ,ಡಾ| ಮಂಜುಳಾ, ಶಾಲಾ ಮುಖ್ಯ ಶಿಕ್ಷಕರಾದ ಜಿ. ಶಿವಣ್ಣ, ಶಿಕ್ಷಕರಾದ ಸುಜಾತ, ಆರೋಗ್ಯನಿರೀûಾಣಾಧಿ ಕಾರಿ ಅನಿಲ್‌, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮೀ, ಅಂಗನವಾಡಿಕಾರ್ಯಕರ್ತೆಯರಾದ ಉಮಾದೇವಿ, ಆಶಾ, ರುದ್ರಮ್ಮ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next