Advertisement

ರಸ್ತೆ ಅಗಲೀಕರಣ ಕಾಮಗಾರಿಗೆ ಸಹಕಾರ ನೀಡಿ

02:54 PM Oct 12, 2021 | Team Udayavani |

ಚಿತ್ರದುರ್ಗ: ನಗರದ ಬಿ.ಡಿ. ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 4 ಸಂಪರ್ಕಿಸುವ ಜೆಸಿಆರ್‌ ಮುಖ್ಯ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಜಿಲ್ಲಾ ಗ್ರಂಥಾಲಯದಿಂದ ಹೆದ್ದಾರಿವರೆಗೆ 21 ಮೀ.ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಗಾಯತ್ರಿ ವೃತ್ತದಿಂದ ಜೆಸಿಆರ್‌ ಮುಖ್ಯರಸ್ತೆಯಲ್ಲಿ ಅಧಿಕಾರಿಗಳ ಜತೆಗೆ ಸೋಮವಾರಸಂಚಾರ ಮಾಡಿದ ಶಾಸಕರು, ರಸ್ತೆ ಅಗಲೀಕರಣಕಾಮಗಾರಿಗೆ ಸಹಕಾರ ನೀಡುವಂತೆ ಕಟ್ಟಡಗಳಮಾಲೀಕರನ್ನುಮನವಿಮಾಡಿಕೊಂಡರು.

ತ್ವರಿತವಾಗಿಈ ಕಾಮಗಾರಿ ಮುಗಿಸಬೇಕು. ಆದರೆ, ಅನೇಕರುಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ.ಅಧಿಕಾರಿಗಳು ಅವರ ಮನವೊಲಿಸಬೇಕುಎಂದರು. ಇದೇ ವೇಳೆ ಕೋರ್ಟ್‌ ಮೆಟ್ಟಿಲೇರಿರುವಮಾಲೊಕರೊಬ್ಬರು ತಮ್ಮ ನಿಲುವನ್ನು ಸಮರ್ಥನೆಮಾಡಿಕೊಳ್ಳಲು ಮುಂದಾದಾಗ ಶಾಸಕರು ಸಿಡಿಮಿಡಿಗೊಂಡರು.

ಇದನ್ನೂ ಓದಿ:ವಿಟ್ಲ: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಢಿಕ್ಕಿ: ಸವಾರ ಸಾವು

ಗಾಯತ್ರಿಛತ್ರದಿಂದಬಿ.ಡಿ.ರಸ್ತೆಯವರೆಗೆವಿಸ್ತರಣೆಮತ್ತು ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಗಾಯತ್ರಿ ವೃತ್ತದಿಂದ ಕೆಳಭಾಗದ ವಿಸ್ತರಣೆ ಮಾತ್ರಬಾಕಿ ಇದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವಸ್ಥಳವನ್ನು ಬಿಟ್ಟುಉಳಿದ ಭಾಗವನ್ನುತೆರವುಗೊಳಿಸಲು ಸ್ಥಳಕ್ಕೆ ಜೆಸಿಬಿ ತರಿಸಿದರು.ಗಾಯತ್ರಿ ವೃತ್ತವನ್ನು ವಿಶಾಲವಾಗಿ ನಿರ್ಮಿಸಲು ತೀರ್ಮಾನಿಸಲಾಗಿದೆ.

Advertisement

ನಿತ್ಯ ಸಾವಿರಾರುವಿದ್ಯಾರ್ಥಿಗಳು ಸಂಚರಿಸುವ ಈ ಮಾರ್ಗಎಲ್ಲರಿಗೂ ಅನುಕೂಲವಾಗುತ್ತದೆ. ಸಾರ್ವಜನಿಕಹಿತಾಸಕ್ತಿಯಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗೆಕಟ್ಟಡಗಳ ಮಾಲೀಕರಿಂದ ಸಹಕಾರ ಸಿಗುತ್ತಿಲ್ಲ.ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದುಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ನಗರದ ಮುಖ್ಯ ರಸ್ತೆಯಿಂದ ಹೆದ್ದಾರಿಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿಯಾದರೆ ಸಂಚಾರಸುಲಭವಾಗುತ್ತದೆ. ಜೆಸಿಆರ್‌ ಬಡಾವಣೆಯಮುಖ್ಯ ರಸ್ತೆ ಜೋಡಿ ರಸ್ತೆಯಾಗಿ ವಿಸ್ತರಣೆಆಗಲಿದೆ. ಅಲಂಕಾರಿಕ ವಿದ್ಯುತ್‌ ದೀಪಗಳನ್ನುಅಳವಡಿಸಲಾಗುತ್ತದೆ. ಇದರಿಂದ ಸ್ಥಳೀಯರಿಗೆಅನುಕೂಲವಾಗಲಿದೆ ಎಂದು ಶಾಸಕರುಹೇಳಿದರು.ಈ ವೇಳೆ ನಗರಸಭೆ ಅಧಿಕಾರಿಗಳು,ಎಂಜಿನಿಯರುಗಳು, ಸ್ಥಳೀಯರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next