ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರನ್ನು ಟೀಕಿಸುತ್ತಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಜನರಿಗೆ ನೀಡುವ ಕೊಡುಗೆ-ಯೋಜನೆಗಳ ಪಟ್ಟಿ ಮಾಡಿದರು. ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸುವುದು ತಮ್ಮ ಆಸೆಯಾಗಿದೆ. ಮೋದಿ ತರಹ ಸುಳ್ಳಿನ ಕಂತೆಯ ಬಜೆಟ್ ನೀಡದೆ ಪ್ರಣಾಳಿಕೆಯ ಅಂಶಗಳನ್ನು ನೂರಕ್ಕೆ ನೂರರಷ್ಟು ಅನುಷ್ಠಾನಗೊಳಿಸಲಾಗುವುದು ಎಂದರು.
Advertisement
ಶಾಸನಸಭೆಗಳು ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೆ ತರಲಾಗುವುದು. ದೇಶದ ಚೌಕಿದಾರರು ಅಂಬಾನಿ ಅವರಂಥವರಿಗೆ ಬ್ಯಾಂಕ್ ಲಾಕರ್ ಕೀ ನೀಡುತ್ತಾರೆ. ಆದರೆ ನಾನು ಬ್ಯಾಂಕ್ ಲಾಕರ್ ಕೀಯನ್ನು ಜನ ಸಾಮಾನ್ಯರಿಗೆ ನೀಡುತ್ತೇನೆ. ಎರಡು ಕೋಟಿ ಉದ್ಯೋಗ ಸೃಷ್ಟಿಗೆ ಕೈ ಹಾಕದೆ ದೇಶದಲ್ಲಿ ಖಾಲಿ ಇರುವ 22 ಲಕ್ಷ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲಾಗುವುದು ಎಂದರು.
ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
Related Articles
Advertisement
ಲೂಟಿ ಮಾಡಿದ ಅನಿಲ್ ಅಂಬಾನಿಗೆ ನೋಟಿಸ್-ಜೈಲು ಇಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರೈತರು ಸಾಲ ಕಟ್ಟಲು ಸಾಧ್ಯವಾಗದಿದ್ದಲ್ಲಿ ಜೈಲಿಗೆ ಹೋಗದಂತಹ ಹಾಗೂ ಕ್ರಿಮಿನಲ್ ಕೇಸ್ ದಾಖಲಾಗದಂತಹ ಕಾನೂನು ಜಾರಿಗೆ ತರಲಾಗುವುದು ಅಲ್ಲದೇ ಉದ್ಯಮಿ ಅನಿಲ್ ಅಂಬಾನಿಯ ಹಣವನ್ನು ಕಿತ್ತು ಜನಸಾಮಾನ್ಯರ ಜೇಬಿಗೆ ಹಾಕುವುದಾಗಿ ಭರವಸೆ ನೀಡಿದರು.
ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೇವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಎಂಟು ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 48 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವ ರಾಜ್ಯಗಳಲ್ಲಿ ಇದೆಯೋ ಅಲ್ಲೆಲ್ಲ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. ನಾನು ನಿಮ್ಮ ಮುಂದೆ ಸುಳ್ಳು ಹೇಳಲು ಬಂದಿಲ್ಲ. ನಿಮ್ಮ ಹೃದಯದ ಮಾತು ಕೇಳಲು ಬಂದಿದ್ದೇನೆ. ಜನರ ಅಪೇಕ್ಷೆ ಏನಿರುತ್ತದೆಯೋ ಅದು ನನ್ನ ಬಾಯಿಂದ ಮಾತಿನ ರೂಪದಲ್ಲಿ ಹೊರಬರುತ್ತದೆ. ನಾನು ನನ್ನ ಮನ್ ಕೀ ಬಾತ್ ಹೇಳಲ್ಲ. ನಿಮ್ಮ ಮನ್ ಕೀ ಬಾತ್ ಕೇಳ್ಳೋಕೆ ಬಂದಿದ್ದೇನೆ.
ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಎರಡು ಸಲ ಭಾಷಣ ನಿಲ್ಲಿಸಿದ ರಾಗಾ
ಚಿತ್ರದುರ್ಗ: ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜೆಡಿಎಸ್-ಕಾಂಗ್ರೆಸ್ ಪರಿವರ್ತನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡುವ ಸಂದರ್ಭದಲ್ಲಿ ಎರಡು ಸಲ ಭಾಷಣ ನಿಲ್ಲಿಸಿದ ಪ್ರಸಂಗ ಜರುಗಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಗಮಿಸುವುದಕ್ಕಿಂತ ಮುಂಚಿತವಾಗಿ ಕೋಲಾರದಿಂದ ಆಗಮಿಸಿದ ರಾಹುಲ್ ಗಾಂಧಿ ಭಾಷಣ
ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಅರ್ಧಕ್ಕೆ ಭಾಷಣ ಮೊಟುಕುಗೊಳಿಸಿದ ಅವರು, ಭಾಷಣ ಮಾಡುವ ಸ್ಥಳದಿಂದ ವೇದಿಕೆಯ ಮಧ್ಯಭಾಗಕ್ಕೆ ತೆರಳಿ ಕೈಕುಲುಕಿದರು.
ನಂತರ ಒಬ್ಬರಿಗೊಬ್ಬರು ಅಪ್ಪಿಕೊಂಡರು. ಇದಾದ ಸ್ಪಲ್ಪ ಸಮಯದಲ್ಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಮತ್ತೆ ಭಾಷಣ ಸ್ಥಗಿತಗೊಳಿಸಿದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಇರುವ ಕಡೆ ಹೋಗಿ ಕೈಕುಲುಕಿ ಅಪ್ಪಿಕೊಂಡರು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವೇದಿಕೆಗೆ ಆಗಮಿಸುವ ವೇಳೆಗೆ ಭಾಷಣ ಪೂರ್ಣಗೊಳಿಸಿದ್ದ ರಾಹುಲ್ ಗಾಂಧಿ, ಖರ್ಗೆಯವರನ್ನೂ ಅಪ್ಪಿಕೊಂಡು ಸ್ವಾಗತ ಕೋರಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕೆಲ ಕಾಲ ಚರ್ಚೆ ನಡೆಸಿದ್ದು ಗಮನ ಸೆಳೆಯಿತು.