Advertisement
ಭದ್ರಾ ಮೇಲ್ದಂಡೆ ಕಾಮಗಾರಿಗಾಗಿ ಹೊಸದುರ್ಗ ತಾಲೂಕು ಲಕ್ಕಿಹಳ್ಳಿ ಮೀಸಲು ಅರಣ್ಯದ ಬಳಿ ನೆಲೆಸಿರುವ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆ, ರಾಮಾನಂದಪುರಂ ಗ್ರಾಮದ ಕಾರ್ಮಿಕರಿಗೆ ಅಗತ್ಯ ದಿನಸಿ ವಿತರಿಸಿ ಅವರು ಮಾತನಾಡಿದರು. ತೆಲಂಗಾಣದ 30 ಕುಟುಂಬ ಹಾಗೂ ಮಹಾರಾಷ್ಟ್ರದ 5 ಕುಟುಂಬಗಳಿಗೆ ಅಕ್ಕಿ, ಗೋಧಿ ಹಿಟ್ಟು, ರಾಗಿ ಹಿಟ್ಟು, ಮೆಣಸಿಕ ಕಾಯಿ, ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ, ಸೋಪು, ಪೇಸ್ಟ್, ಬ್ರೆಷ್, ಕಾರದ ಪುಡಿ, ಬೆಳೆ, ಎಣ್ಣೆ, ತೆಂಗಿನ ಕಾಯಿ ಸೇರಿದಂತೆ ನಿತ್ಯ ಆಹಾರಕ್ಕೆ ತಯಾರಿಕೆಗೆ ಅಗತ್ಯವಿರುವ ಸಾಮಗ್ರಿ ವಿತರಿಸಿದರು.
ವರ್ಷಪೂರ್ತಿ ವಲಸೆಯಲ್ಲಿಯೇ ಕಳೆಯುವ ಕುಟುಂಬಗಳು ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ವಸತಿ ನಿಲಯಗಳು ಇಲ್ಲವೇ ವಿವಿಧ ಸಂಘ ಸಂಸ್ಥೆಗಳು ನಡೆಯುವ ವಸತಿ ನಿಲಯಗಳಲ್ಲಿ ಶಿಕ್ಷಣ ಕೊಡಿಸಲು ಪೋಷಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಬಡ ಸಮುದಾಯಗಳಿಗೆ ಉಚಿತ ಆರೋಗ್ಯ ಶಿಕ್ಷಣ ಸಿಗುವಂತ ಸಂದರ್ಭದಲ್ಲಿ ಜನತೆ ಸದುಪಯೋಗ ಪಡೆಸುಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಸಮಾಜ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ದುಡಿಯುವ ಸಮುದಾಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಕೊರೊನಾಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಚಿಸುವಂತಹ ನಿಯಮಗಳನ್ನು ತಪ್ಪದೆ ಪಾಲಿಸಿ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಲಕ್ಷ್ಮಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ಮೂಡಲಗಿರಿಯಪ್ಪ, ಕೃಷ್ಣಪ್ಪ, ಶ್ರೀನಿವಾಸ್ ಇದ್ದರು.