Advertisement

ಆಹಾರ ಕಿಟ್‌ ಪಡೆಯಲು ನೂಕುನುಗ್ಗಲು

05:44 PM Apr 23, 2020 | Naveen |

ಚಿತ್ರದುರ್ಗ: ನಗರದ ರಂಗಯ್ಯನಬಾಗಿಲು ಬಳಿ ಇರುವ ಜಿಲ್ಲಾ ಯಾದವ ಗೊಲ್ಲರ ಸಂಘದಲ್ಲಿ ಬುಧವಾರ ಆಹಾರ ಕಿಟ್‌ ಪಡೆಯಲು ಸಾಮಾಜಿಕ ಅಂತರ ಮರೆತು ಸಾವಿರಾರು ಜನ ಜಮಾಯಿಸಿದ ಘಟನೆ ನಡೆಯಿತು.

Advertisement

ಏಕಾಏಕಿ ಉಂಟಾದ ನೂಕುನುಗ್ಗಲು ಪರಿಸ್ಥಿತಿ ನಿಭಾಯಿಸಲು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಸಹಿತ ಗೊಲ್ಲರ ಸಂಘದ ಪದಾಧಿಕಾರಿಗಳು, ಪೊಲೀಸರು ಹಾಗೂ ಗೃಹ ರಕ್ಷಕ ಸಿಬ್ಬಂದಿ ಹರಸಾಹಸ ಮಾಡಿದರು. ಕೋವಿಡ್ ಲಾಕ್‌ ಡೌನ್‌ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಬಡವರು, ಅಲೆಮಾರಿ, ಅರೆ ಅಲೆಮಾರಿಗಳಿಗೆ ದಿನಸಿ ಕಿಟ್‌ಗಳನ್ನು ನೀಡಲು ತೀರ್ಮಾನಿಸಲಾಗಿತ್ತು. ಈ ವಿಷಯ ತಿಳಿದು ಸಾವಿರಾರು ಜನ ಮುಗಿಬಿದ್ದಿದ್ದರಿಂದ ಗೊಂದಲ ಉಂಟಾಯಿತು. ಈ ವೇಳೆ ಎಲ್ಲರಿಗೂ ಟೋಕನ್‌ ವಿತರಿಸಿ ನಂತರ ಕಿಟ್‌ ಕೊಡುತ್ತೇವೆ ಎಂದು ತಿಳಿ ಹೇಳಿದ ನಂತರ ಜನದಟ್ಟಣೆ ಕಡಿಮೆಯಾಯಿತು.

ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಕಾರ್ಯದರ್ಶಿ ಆನಂದಪ್ಪ, ಟಿ. ರಂಗಸ್ವಾಮಿ, ಕಿರಣ್‌ಕುಮಾರ್‌ ಯಾದವ್‌, ಫಲ್ಗುಣೇಶ್ವರ್‌, ಡಿ.ಸಿ. ಗೋವಿಂದಪ್ಪ, ಎನ್‌. ಮಹಾಂತೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next