Advertisement

ಪ್ರಾಣ ಉಳಿಸಿಕೊಳ್ಳುವ ಸನ್ನಿವೇಶ ಸೃಷ್ಟಿ: ಮುರುಘಾಶ್ರೀ

06:11 PM Apr 20, 2020 | Team Udayavani |

ಚಿತ್ರದುರ್ಗ: ವ್ಯಕ್ತಿಯಿಂದ ವ್ಯಕ್ತಿಗೆ ಕೊರೊನಾ ಸೋಂಕು ಹರಡುತ್ತಿದೆ. ಮಾನವನ ಪ್ರಾಣವನ್ನು ಮಾನವನೇ ಉಳಿಸಬೇಕಾದ ತುರ್ತು ಸಂದರ್ಭ ಬಂದೊದಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘರಾಜೇಂದ್ರ ಮಠದಲ್ಲಿ ಭಾನುವಾರ ಪೊಲೀಸ್‌ ಇಲಾಖೆಗೆ ಸ್ಯಾನಿಟೈಸರ್‌ ಸ್ಪ್ರೇಯರ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಜಗತ್ತು ಸಂಕಟ ಅನುಭವಿ ಸುತ್ತಿದೆ. ಮಾನವ ತನ್ನ ಪ್ರಾಣವನ್ನು ತಾನೇ ಕಾಪಾಡಿ ಕೊಳ್ಳಬೇಕಿದೆ. ಕೊರೊನಾ ಎಂಬ ಭೀಕರ ಸೋಂಕಿನ ವಿರುದ್ಧ ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಯವರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದಾರೆ. ಜನರ ಸೇವೆ ಮಾಡುವುದು, ಅವರ ಜೀವ ಉಳಿಸುವುದು ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ನಾವು ಅವರನ್ನು ಗೌರವ ದಿಂದ ಕಾಣಬೇಕಿದೆ. ಅವರ ಆರೋಗ್ಯವೂ ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಒಂದೊಂದು ಸ್ಯಾನಿಟೈಸರ್‌ ಸ್ಪ್ರೆàಯರ್‌ ಯಂತ್ರವನ್ನು ಶ್ರೀಮಠದಿಂದ ಕೊಡಲಾಗುತ್ತಿದೆ. ಇಲಾಖೆಯವರು ಸಹ ಅವರ ವಾಹನಗಳಿಗೆ, ಕಚೇರಿಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಎಂದು ಆಶಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾತನಾಡಿ, ಸಾರ್ವ ಜನಿಕರ ಯೋಗಕ್ಷೇಮದ ಜವಾಬ್ದಾರಿ ನಮ್ಮದು. ಅವರ ಆರೋಗ್ಯದ ಕಡೆ ನಾವು ಗಮನಹರಿಸಬೇಕಿದೆ. ಜೊತೆಗೆ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದರು. ನಮ್ಮ ಇಲಾಖೆಗೆ ಶ್ರೀಗಳು ಸ್ಯಾನಿಟೈಸರ್‌ ಸ್ಪ್ರೇಯರ್‌ ಗಳನ್ನು ನೀಡಿರುವುದು ನಮ್ಮ ಆರೋಗ್ಯದ ಬಗ್ಗೆ ಅವರಿಗಿರುವ ಕಾಳಜಿ ದೊಡ್ಡದು ಎಂಬುದನ್ನು ತೋರಿಸುತ್ತದೆ ಎಂದರು.

ಸ್ಯಾನಿಟೈಸರ್‌ ಅನ್ನು ಪೊಲೀಸ್‌ ಇಲಾಖೆ ವಾಹನಕ್ಕೆ ಸಿಂಪಡಿಸುವ ಮೂಲಕ ಸ್ಪ್ರೇಯರ್‌ನ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ. ನಂದಗಾವಿ, ಡಿವೈಎಸ್‌ಪಿ ಪಾಂಡುರಂಗಪ್ಪ, ಡಿಎಆರ್‌ ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐಗಳಾದ ಗಿರೀಶ್‌, ನಹೀಂ, ಪ್ರಕಾಶ್‌, ಸೋಮಶೇಖರ್‌, ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸಿಇಒ ಎಂ.ಜಿ. ದೊರೆಸ್ವಾಮಿ, ಮಲ್ಲಿಕಾರ್ಜುನಯ್ಯ, ನಗರಸಭಾ ಸದಸ್ಯ ಸುರೇಶ್‌, ಬಿಜೆಪಿ ಮುಖಂಡ ಕಲ್ಲೇಶಯ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next