ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಚಿತ್ರದುರ್ಗ ಉಪನೋಂದಣಿ ಕಚೇರಿಯ ದಾಸ್ತಾವೇಜು ಬರಹಗಾರ (ಸ್ಟಾಂಪ್ ವೆಂಡರ್) ಸಿ.ಮಂಜುನಾಥ ಯಾದವ್ (36) ಬಂಧಿತ.
Advertisement
ನಗರ ಠಾಣೆಯಲ್ಲಿ ಜಿಲ್ಲಾ ನೋಂದಣಾಧಿಕಾರಿ ರವೀಂದ್ರ ಪೂಜಾರ್ ನೀಡಿದ ದೂರಿನನ್ವಯ ಚಿತ್ರದುರ್ಗ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ 194 ದಾಸ್ತಾವೇಜುಗಳಿಂದ ಸರ್ಕಾರಕ್ಕೆ ಶುಲ್ಕ ಪಾವತಿಗೆ ಸಂಬಂಧಿಸಿದಂತೆ 2020 ಅಕ್ಟೋಬರ್ 28 ರಿಂದ 2021 ಆಗಸ್ಟ್ 31 ರವರೆಗಿನ ಅವಧಿಯಲ್ಲಿ ದಸ್ತಾವೇಜು ಸಿದ್ಧಪಡಿಸಿ ಸಹಿ ಮಾಡಿರುವ ಎಲ್ಲಾ ದಸ್ತಾವೇಜುಗಳುಕಾನೂನು ಬಾಹಿರವಾಗಿ ಸರ್ಕಾರಿ ದಾಖಲೆಗಳಾದ ಕೆ-2 ಚಲನ್‌ಗಳನ್ನು ತಿದ್ದಿಕೊಟ್ಟು, ಚಿತ್ರದುರ್ಗದ ಆಕ್ಸಿಸ್ ಮತ್ತು ಐಸಿಐಸಿ ಬ್ಯಾಂಕ್ ಖಾತೆಯಿಂದ ದಸ್ತಾವೇಜುಗಳ ಮೌಲ್ಯಕ್ಕೆ
ಅನುಗುಣವಾಗಿ ಶುಲ್ಕವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಾನಾ ಲೆಕ್ಕ ಶೀರ್ಷಿಕೆಗಳಲ್ಲಿ ಇ-ಪೇಮೆಂಟ್ ಮೂಲಕ ಕಡಿಮೆ ಶುಲ್ಕ ಪಾವತಿಸುವ ಮೂಲಕ ಸರ್ಕಾರಕ್ಕೆ
1,67,71,170 ರೂ.ನಷ್ಟು ರಾಜಸ್ವ ವಂಚಿಸಿರುತ್ತಾರೆ.
Related Articles
Advertisement
ಆರೋಪಿತನನ್ನು ಜ.14 ರಂದು ನ್ಯಾಯಾಲಯದಿಂದ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆರೋಪಿತನ ಕಡೆಯಿಂದ 1 ಲ್ಯಾಪ್ ಟಾಪ್, 1 ಸಿಪಿಯು, 1 ಮೊಬೈಲ್ ಹಾಗೂ ಹೆಚ್ಚಿನ ತನಿಖೆಗಾಗಿ ಚಿತ್ರದುರ್ಗ ಜಿಲ್ಲಾ ಉಪನೋಂದಣಾಧಿಕಾರಿ ಕಚೇರಿಯ 3 ಸಿಪಿಯು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ. ಜಫ್ತಿ ಮಾಡಿರುವ ಯಂತ್ರೋಪಕರಣಗಳನ್ನು ಹೆಚ್ಚಿನ ತನಿಖೆಗಾಗಿ ಎಫ್‌ಎಸ್ ಎಲ್ ಕೇಂದ್ರಕ್ಕೆ ಕಳಹಿಸಿದ್ದು, ತನಿಖೆ ಮುಂದುವರೆದಿದೆ.
ಆರೋಪಿತನ ಹಿನ್ನೆಲೆ: ಆರೋಪಿತ ಮಂಜುನಾಥ್ ಯಾದವ್ ಅ ಧಿಕೃತ ದಸ್ತಾವೇಜು ಬರಹಗಾರನಾಗಿದ್ದು (ಸ್ಟಾಂಪ್ ವೆಂಡರ್) ಚಿತ್ರದುರ್ಗ ನಗರದ ಸಬ್ ರಿಜಿಸ್ಟಾರ್ ಕಚೇರಿ ಹಿಂಭಾಗದಲ್ಲಿ ಐಶಾರಾಮಿ ಕಚೇರಿ ಮಾಡಿಕೊಂಡು ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಪ್ರಾಬಲ್ಯವಿರುವಂತೆ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.