Advertisement

ಮಾರುಕಟ್ಟೆಗೆ ಬೆಳೆ ತರಲು ನಿರ್ಬಂಧ ಇಲ್ಲ

11:17 AM Apr 19, 2020 | Naveen |

ಚಿತ್ರದುರ್ಗ: ರೈತರು ಬೆಳೆಯನ್ನು ಮಾರುಕಟ್ಟೆಗೆ ತರಲು ಚೆಕ್‌ಪೋಸ್ಟ್‌ ಹಾಗೂ ಪೊಲೀಸರಿಂದ ಅಡೆತಡೆಗಳಿಲ್ಲ. ರೈತರು ತಮ್ಮ ಬೆಳೆಯನ್ನು ಎಪಿಎಂಸಿ, ಇನ್ನಿತರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಹುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

ಶನಿವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹತ್ತಿ ಮಾರುಕಟ್ಟೆ, ಕಡಲೆ ಖರೀದಿ ಕೇಂದ್ರ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಯಾವುದೇ ಬೆಳೆ ಬೆಳೆಯಲಿ, ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಮಸ್ಯೆಯಾಗಬಾರದು. ಮಾರುಕಟ್ಟೆಗೆ ಆಗಮಿಸುವ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸರ್‌ ಸೇರಿದಂತೆ ಪ್ರತಿಯೊಬ್ಬರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹಾರ ನಡೆಸಬೇಕು ಎಂದರು. ಎಪಿಎಂಸಿಗೆ ಬರುವ ರೈತರು ಹಾಗೂ ಹಮಾಲರಿಗೆ ಊಟೋಪಹಾರದ ವ್ಯವಸ್ಥೆ ಮಾಡಬೇಕು. ಕ್ಯಾಂಟಿನ್‌ ತೆರೆದು ಇಲ್ಲಿ ಪಾರ್ಸಲ್‌ ವ್ಯವಸ್ಥೆ ಮಾಡಿ. ಕ್ಯಾಂಟೀನ್‌ ತೆರೆಯದಿದ್ದಲ್ಲಿ ಸಮಿತಿಯಿಂದ ಪಾರ್ಸಲ್‌ ವ್ಯವಸ್ಥೆ ಮಾಡಲು ಸೂಚಿಸಿದರು.

ಜಿಲ್ಲೆಗೆ ಮೂರು ಕೋಲ್ಡ್‌ ಸ್ಟೋರೇಜ್‌: ಚಿತ್ರದುರ್ಗ ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಕೋಲ್ಡ್‌ ಸ್ಟೋರೇಜ್‌ ಸಿಸ್ಟಂ ಅಳವಡಿಕೆಗೆ ಪ್ರಸ್ತಾವನೆ ಕಳುಹಿಸುವಂತೆ ಅ ಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಚಿತ್ರದುರ್ಗ ಎಪಿಎಂಸಿಗೆ 2 ಕೋಲ್ಡ್‌ ಸ್ಟೋರೇಜ್‌ ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಚಳ್ಳಕೆರೆಗೆ 1 ಕೋಲ್ಡ್‌ ಸ್ಟೋರೇಜ್‌ ಅಳವಡಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಅಗತ್ಯವಿರುವ ಕಡೆ ಕೋಲ್ಡ್‌ ಸ್ಟೋರೇಜ್‌ ಅಳವಡಿಕೆಗೆ ಪ್ರಸ್ತಾವನೆ ಕಳಿಸುವಂತೆ ಸಚಿವರು ಅ ಧಿಕಾರಿಗಳಿಗೆ ಸೂಚಿಸಿದರು.

ಕೋಲ್ಡ್‌ ಸ್ಟೋರೇಜ್‌ ಅಳವಡಿಕೆಯಿಂದ ತರಕಾರಿ ಶೇಖರಿಸಿ ಮಾರಾಟ ಮಾಡಲು ಅನುಕೂಲವಾಗಲಿದ್ದು, ತರಕಾರಿ ಕೊಳೆಯುವುದನ್ನು ತಪ್ಪಿಸಬಹುದಾಗಿದೆ ಎಂದರು. ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ, ತಾಪಂ ಅಧ್ಯಕ್ಷ ಲಿಂಗರಾಜು, ಸಹಕಾರ ಸಂಘದ ನಿರ್ದೇಶಕ ಎಸ್‌.ಆರ್‌. ಗಿರೀಶ್‌, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಟಿ.ಎ. ಮಹೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next