ಚಿತ್ರದುರ್ಗ: ಬದುಕಿಗೆ ಮೂರ್ತ ಸ್ವರೂಪ ಕೊಡಬೇಕಾದರೆ ಏಕಾಗ್ರತೆ ಅತ್ಯಗತ್ಯ ಎಂದು ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಜೋಗಿಮಟ್ಟಿ ರಸ್ತೆಯ 5ನೇ ಕ್ರಾಸ್ ನಲ್ಲಿ ಎ.ವೇಣುಗೋಪಾಲ್ ನಿವಾಸದ ಬಳಿ ನಡೆದ ನಿತ್ಯ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯವಿಕಾರ, ಮನೋವಿಕಾರದಲ್ಲಿ ಮಾನವ ಸದ್ವಿಚಾರವನ್ನೇ ಮರೆಯುತ್ತಿದ್ದಾನೆ. ಕಾಯವಿಕಾರ ಮನೋವಿಕಾರದಲ್ಲಿ ಮಾನವ ಸದ್ವಿಚಾರವನ್ನೇ ಮರೆಯುತ್ತಿದ್ದಾನೆ. ನಿತ್ಯ ಕಲ್ಯಾಣ ಬದುಕಿನಲ್ಲಿ ಅನಾವರಣ ಆಗಬೇಕು.
ಅದಕ್ಕಾಗಿ ಪ್ರಯತ್ನ ನಡೆಯಬೇಕು. ಮಾನವ ಸಹಜವಾದ ಅಸ ¤ವ್ಯಸ್ತತೆಗೆ ಕಾರಣ ಕಂಡುಕೊಳ್ಳಬೇಕಿದೆ. ಮನಸ್ಸು ಚಂಚಲಗೊಳ್ಳಬಾರದು. ನಾವು ಮಾಡುವ ಕೆಲಸ ಯಾವುದೇ ಇರಲಿ ಅಲ್ಲಿ ಏಕಾಗ್ರತೆ ಇರಬೇಕು. ಜೀವನದಲ್ಲಿ ಏಕಾಗ್ರತೆಗೆ ಕೊರತೆಯಾಗಬಾರದು. ಏಕಾಗ್ರತೆಯಲ್ಲಿ ಶಕ್ತಿ ಇದೆ. ಅದಿಲ್ಲದಿದ್ದರೆ ಅನೇಕ ಅವಘಡಗಳುನಡೆಯುತ್ತವೆ.ಒಳ್ಳೆಯಕೇಳುಗಉತ್ತಮ ಭಾಷಣಕಾರರಾಗುತ್ತಾನೆ ಎಂದು ವಿಶ್ಲೇಷಿಸಿದರು.
ಮನಸ್ಸಿನೊಳಗೆ ಬರುವ ಕೆಟ್ಟ ಆಲೋಚನೆಗಳನ್ನು ಹೊಡೆದೊಡಿಸಬೇಕು. ಮನಸ್ಸನ್ನು ನೋಡುವುದಕ್ಕಿಂತ ಆಲೋಚನೆಗಳನ್ನು ಸರಿ ಮಾಡಿಕೊಳ್ಳಬೇಕು. ಏಕಾಗ್ರತೆ ಹಾಗೂ ದೃಢತೆಯಿಂದ ಯಶಸ್ಸು ಬರುತ್ತದೆ. ಶಿಸ್ತು, ಸಂಯಮ ಮತ್ತು ಅಚ್ಚುಕಟ್ಟುತನ ನಮಗೆ ಬೇಕಾಗುತ್ತದೆ ಎಂದರು. ಶಿರಸಂಗಿ ಮುರುಘಾಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು ಮಾತನಾಡಿ, ಮನಸ್ಸನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವುದೇ ಏಕಾಗ್ರತೆ. ಪ್ರತಿಯೊಬ್ಬರಲ್ಲು ಏಕಾಗ್ರತೆ ಗುಣ ಬರಬೇಕು.
ಮನುಷ್ಯನಿಗೆ ಯಶಸ್ಸು ಸಿಗುವುದು ಏಕಾಗ್ರತೆಯಿಂದ ಸಮಸ್ಯೆಗಳಿಗೆ ಪರಿಹಾರವೆಂದರೆ ಏಕಾಗ್ರತೆ ಎಂದು ತಿಳಿಸಿದರು. ಚಿತ್ರದುರ್ಗ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಮಹೇಂದ್ರನಾಥ್ ಮಾತನಾಡಿದರು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಎ. ವೇಣುಗೋಪಾಲ್ ವೇದಿಕೆಯಲ್ಲಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶ್ರೀ ಸ್ವಾಗತಿಸಿದರು. ಜಯದೇವ್ ನಿರೂಪಿಸಿದರು.