Advertisement

ಕೇಂದ್ರ ಸಚಿವರಿಗೆ ಕೋಟೆನಾಡಲ್ಲಿ ಪುಷ್ಪವೃಷ್ಟಿ ಸ್ವಾಗತ

06:40 PM Aug 19, 2021 | Team Udayavani |

ಚಿತ್ರದುರ್ಗ: ಕೇಂದ್ರ ಸಚಿವರಾದ ನಂತರ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಎ. ನಾರಾಯಣಸ್ವಾಮಿ ಅವರನ್ನು ಕೋಟೆನಾಡು ಚಿತ್ರದುರ್ಗದ ಜನತೆ ಹೂಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.

Advertisement

ಚಳ್ಳಕೆರೆ ಗೇಟ್‌ನಿಂದ ಹಳೇ ಮಾಧ್ಯಮಿಕ ಶಾಲಾ ಆವರಣದವರೆಗೆ ವಿವಿಧ ಕಲಾ ತಂಡಗಳು, ನುರಾರು ಬೆಂಬಲಿಗರು ಜಯಘೋಷ ಹಾಕುತ್ತಾ ಬೃಹತ್‌ ಮೆರವಣಿಗೆಯನ್ನೇ ಮಾಡಿದರು. ಇದನ್ನೆಲ್ಲಾ ಕಂಡು ಭಾವುಕರಾದ ಸಚಿವ ನಾರಾಯಣಸ್ವಾಮಿ ವೇದಿಕೆ ಮೇಲಿಂದಲೇ ದಿಧೀರ್ಘ‌ ದಂಡ ನಮಸ್ಕಾರ ಮಾಡಿದರು. ನಾನು ಈ ಹಂತಕ್ಕೆ ಬೆಳೆಯಲು ಕಾರಣರಾದ ಮತದಾರರ ಪಾದಗಳಿಗೆ ವಂದಿಸುತ್ತೇನೆ ಎಂದರು.

ನಾರಾಯಣಸ್ವಾಮಿ ಭಾಷಣದ ವೇಳೆಗೆ ಸರಿಯಾಗಿ ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ ಎಂಬ ಡಾ| ರಾಜ್‌ ಅವರ ಹಾಡು ಹಾಗೂ ಸಿಂಹ ಎಂಬ ಹಾಡು ಬರುತ್ತಲೇ ಪುಳಕಿತರಾದರು. ಮಾತು ಆರಂಭಿಸುತ್ತಲೇ ನಾರಾಯಣಸ್ವಾಮಿ ಅಂದರೆ ಘರ್ಜನೆ.

ನ್ಯಾಯ, ಧರ್ಮ, ಕಾನೂನು ಪರವಾಗಿ, ಬಡವರ ಮನೆ ಮಗನಾಗಿ ಅವರಿಗೆ ನ್ಯಾಯ ಕೊಡಿಸಲು ಘರ್ಜನೆ ಮಾಡುತ್ತೇನೆ ಎಂದರು. ಕೋವಿಡ್‌ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡುವಾಗ ನಮಗೂ ಆತಂಕವಾಗುತ್ತದೆ. ಎಲ್ಲರೂ ಮಾಸ್ಕ್ ಧರಿಸಿ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ ಅವರು, ಹೊಸದಾಗಿ ಸಚಿವರಾದ ನಮ್ಮನ್ನು ಪರಿಚಯಿಸಲು ಸಂಸತ್ತಿನಲ್ಲಿ ಕಾಂಗ್ರೆಸ್‌ ಅವಕಾಶ ನೀಡಲಿಲ್ಲ.

ನಾನು ಮತ ಹಾಕಿದ ಕಾರ್ಯಕರ್ತ ಇಂದು ಸಚಿವನಾಗಿದ್ದಾನೆ ಎಂದು ಜನ ನೋಡಲು ಬರುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಂಕ್ರಪ್ಪ, ರಾಜ್ಯ ಕಾರ್ಯದರ್ಶಿ ಕೆ.ಎಸ್‌. ನವೀನ್‌, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಟಿ. ಬದರೀನಾಥ್‌, ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧ್ಯಕ್ಷ ಎ.ಮುರಳಿ, ವಿಭಾಗ ಪ್ರಭಾರಿ ಜಿ.ಎಂ. ಸುರೇಶ್‌, ಸಿದ್ದೇಶ್‌ ಯಾದವ್‌, ಬಿಜೆಪಿ ಪದಾ ಧಿಕಾರಿಗಳಾದ ಜಿ.ಎಸ್‌. ಅನಿತ್‌ಕುಮಾರ್‌, ರಘುಚಂದನ್‌, ಸುರೇಶ್‌ ಸಿದ್ದಾಪುರ, ರಾಜೇಶ್‌ ಬುರುಡಿಕಟ್ಟೆ, ಜಯಪಾಲಯ್ಯ ಸೇರಿದಂತೆ ತಾಲೂಕು ಅಧ್ಯಕ್ಷರು ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next