ಚಿತ್ರದುರ್ಗ: ಕೊರೋನಾ ನಿಗ್ರಹಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರಗಳ ವೈಫಲ್ಯ ಖಂಡಿಸಿ ಜು. 7 ರಿಂದ 17 ರವರೆಗೆ ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸೈಕಲ್ ಜಾಥಾ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೈಮರೆತ ಪರಿಣಾಮ ಕೊರೊನಾ ನಿಯಂತ್ರಿಸಲು ಆಗಲಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಕೊರೋನಾಗೆ ಮೂರು ಲಕ್ಷಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಆದರೆ ಕೇವಲ ಮೂವತ್ತು ಸಾವಿರ ಸಾವು ಸಂಭವಿಸಿದೆ ಎಂದು ಸುಳ್ಳು ಲೆಕ್ಕ ನೀಡುತ್ತಿದ್ದಾರೆ. ಈ ಬಗ್ಗೆ ಡೆತ್ ಆಡಿಟ್ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದರೂ ಕಣ್ಣು, ಕಿವಿ, ಹೃದಯ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್‌ನಿಂದ ಪಂಚಾಯಿತಿವರೆಗೆ ಒಂದು ತಿಂಗಳ ಕಾಲ ಜಾಥಾ ಹಮ್ಮಿಕೊಂಡಿದ್ದು, ಕೊರೋನಾದಿಂದ ಮƒತರಾದ ಕುಟುಂಬಗಳನ್ನು ಸಂಪರ್ಕಿಸಿ ಸಹಾಯಹಸ್ತ ಚಾಚುತ್ತೇವೆ ಎಂದರು. ಪ್ರತಿ ಪಂಚಾಯಿತಿಯಲ್ಲಿ ಹತ್ತು ವಾರಿಯಸ್ ìಗಳನ್ನು ಗುರುತಿಸಿ ಇಪ್ಪತ್ತು ಮಂದಿಯನ್ನು ಭೇಟಿ ಮಾಡಲಾಗುವುದು. ಈ ಸಂಬಂಧ ಮುಖಂಡರು, ಕಾರ್ಯಕರ್ತರು ಪಂಚಾಯಿತಿ ಬ್ಲಾಕ್ ಮಟ್ಟದಲ್ಲಿ ಮಾಹಿತಿ ಪಡೆಯಲಿದ್ದಾರೆ.
ಕೊರೊನಾದಿಂದ ಮƒತಪಟ್ಟ ಕುಟುಂಬಗಳಿಗೆ ಐದು ಲಕ್ಷ ರೂ. ಪರಿಹಾರ ನೀಡಬೇಕು. ಕಾರ್ಮಿಕರಿಗೆ ಘೋಷಿಸಿರುವ ಎರಡು ಸಾವಿರ ರೂ. ಗಳ ಪರಿಹಾರ ಇನ್ನೂ ಕೈಸೇರಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಜೀವ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಯಾಗಲೀ, ಯಾವೊಬ್ಬ ಹಿರಿಯ ಅ ಧಿಕಾರಿಯಾಗಲೀ ಈವರೆಗೆ ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿಲ್ಲ. ಇದೊಂದು ನಿರ್ಜೀವ ಸರ್ಕಾರ ಎಂದು ಟೀಕಿಸಿದರು. ಕಾಂಗ್ರೆಸ್ ಅಧಿ ಕಾರಕ್ಕೆ ಬರುವುದು ಖಚಿತ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಈವರೆಗೆ 58.63 ಲಕ್ಷ ಮಾಸ್ಕ್, 32.25 ಲಕ್ಷ ಪಿಪಿಇ ಕಿಟ್, 84 ಲಕ್ಷ ಸ್ಯಾನಿಟೈಸರ್ ಬಾಟಲ್, 26 ಲಕ್ಷ ಆಹಾರ ಕಿಟ್, 24,654 ಆಕ್ಸಿಜನ್ ಸಿಲಿಂಡರ್, 3451 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ನೀಡಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ 1343 ಆಂಬ್ಯುಲೆನ್ Õಗಳನ್ನು ಒದಗಿಸಿದ್ದು, ಎರಡು ತಿಂಗಳಲ್ಲಿ 2.5 ಕೋಟಿ ಜನರಿಗೆ ಪಕ್ಷದಿಂದ ಸಹಾಯ ಮಾಡಲಾಗಿದೆ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕಾಗಿದೆ. ಅಕ್ಟೋಬರ್ 30 ರೊಳಗೆ ಪಂಚಾಯಿತಿ ಸಮಿತಿ ರಚನೆಯಾಗಬೇಕು.
ಆಗಸ್ಟ್ ಒಳಗೆ ಎಲ್ಲಾ ವಾರ್ಡ್ ಸಮಿತಿಯಾಗಬೇಕು. ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಾಗಲಿದ್ದು, 15-16 ಜಿಲ್ಲೆಗಳಲ್ಲಿ ಡಿಸಿಸಿ ಪುನರ್ ರಚನೆ ಆಗಬೇಕಾಗಿದೆ. ಬ್ಲಾಕ್ ಅಧ್ಯಕ್ಷರ ಬದಲಾವಣೆ, ಬೂತ್ ಮಟ್ಟದ ಸಂಘಟನೆಗಾಗಿ ಮುಂದಿನ ತಿಂಗಳು ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ಕ್ಯಾಂಪ್ ಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಎ.ವಿ. ಉಮಾಪತಿ, ತಿಪ್ಪೇಸ್ವಾಮಿ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಭೀಮಸಮುದ್ರದ ಜಿ.ಎಸ್.ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಕೆ. ಸರ್ದಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ ಮತ್ತಿತರರು ಇದ್ದರು.