Advertisement

ಬಯಲುಸೀಮೆ ಹಸಿರಾಗಿಸಲು ಸಹಕಾರ

10:52 PM Jul 01, 2021 | Team Udayavani |

ನಾಯಕನಹಟ್ಟಿ: ಬಯಲುಸೀಮೆಯನ್ನು ಹಸಿರಾಗಿಸುವ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಬುಧವಾರ ರೇಖಲಗೆರೆ ಗ್ರಾಮದ ಬಳಿಯ ಅಮೃತ ಮಹಲ್‌ ಕಾವಲಿನಲ್ಲಿ ದೇನಾ ಭಗತ್‌ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಪರಿಶಿಷ್ಟ ಜಾತಿ ಹಾಗೂ ಜನಾಂಗದವರು ಹಾಗೂ ಬುಡಕಟ್ಟು ಜನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇಲ್ಲಿನ ಜನರು ಪಶು ಸಂಗೋಪನೆಯಿಂದ ಜೀವಿಸುತ್ತಿದ್ದಾರೆ. ದೇವರು ಎತ್ತುಗಳಿಗೆ ಈಗಾಗಲೇ ಎಲ್ಲ ರೀತಿಯ ವ್ಯವಸ್ಥೆ ಒದಗಿಸಲಾಗಿದೆ. ಇಲ್ಲಿನ ಪ್ರದೇಶವನ್ನು ಹಸಿರೀಕರಣವನ್ನಾಗಿಸುವುದು ಪ್ರಮುಖ ಆದ್ಯತೆಯಾಗಿದೆ. ಮಳೆಯಿಲ್ಲದೆ ಬರಡಾಗಿರುವ ಇಲ್ಲಿನ ಪ್ರದೇಶದಲ್ಲಿ ಹಸಿರು ಬೆಳೆಸುವುದು ಅಗತ್ಯ ಎಂದರು.

ಕೋಟಿ ವೃಕ್ಷಗಳನ್ನು ಬೆಳೆಸುವ ಟ್ರಸ್ಟ್‌ನ ಯೋಜನೆ ಉತ್ತಮವಾಗಿದೆ. ನಿವೃತ್ತ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಇದರ ಸಾರಥ್ಯ ವಹಿಸಿರುವುದು ಉತ್ತಮ ಕಾರ್ಯ. ಇದಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು. ಗಿಡಗಳನ್ನು ಬೆಳೆಸುವುದಕ್ಕೆ ಅಗತ್ಯವಾದ ಕೊಳವೆಬಾವಿ ಕೊರೆಯಿಸುವುದು ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ಟ್ರಸ್ಟ್‌ಗೆ ನೀಡುವುದಾಗಿ ಭರವಸೆ ನೀಡಿದರು.

ಟ್ರಸ್ಟ್‌ ಆಡಳಿತಾಧಿ ಕಾರಿ ಹಾಗೂ ನಿವೃತ್ತ ಜಿಲ್ಲಾಧಿ  ಕಾರಿ ಕೆ. ಅಮರನಾರಾಯಣ ಮಾತನಾಡಿ, ಪಶುಸಂಗೋಪನಾ ಇಲಾಖೆ 1500 ಎಕರೆ ಪ್ರದೇಶವನ್ನು 30 ವರ್ಷ ಅವ ಧಿಗೆ ಭೂಮಿ ಬಳಸಿಕೊಂಡು ಹಸಿರೀಕರಣ ಮಾಡುವುದಕ್ಕೆ ಅವಕಾಶ ನೀಡಿದೆ. ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಕೋಟಿ ವೃಕ್ಷಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಜೈವಿಕ ಭದ್ರತೆಯನ್ನು ಕಾಪಾಡಲಾಗುವುದು. ಈ ಪ್ರದೇಶದಲ್ಲಿರುವ ಮಣ್ಣು ಸತ್ವಯುತವಾಗಿಲ್ಲ. ಹೀಗಾಗಿ ಗಿಡ-ಮರಗಳ ಬೆಳವಣಿಗೆ ಕಡಿಮೆಯಾಗಿದೆ ಎಂದರು.

ಸೀಮರುಬ, ಹೊಂಗೆ, ಬೇವು ಸೇರಿದಂತೆ ನಾನಾ ಗಿಡಗಳನ್ನು ನೆಡಲಾಗುವುದು. ಇಡೀ ಪ್ರದೇಶದ ಸುತ್ತ 15 ಕಿಮೀ ಉದ್ದದ ಕಂದಕವನ್ನು ಹೊಂದಿರುವ ಜೈವಿಕ ಬೇಲಿ ನಿರ್ಮಿಸಲಾಗುವುದು. ಇಷ್ಟು ಉದ್ದದ ಕಂದಕದಲ್ಲಿ ಸುಮಾರು 10 ಕೋಟಿ ಲೀಟರ್‌ ಮಳೆ ನೀರು ಸಂಗ್ರಹವಾಗಲಿದೆ. ಕಂದಕದ ಪಕ್ಕದಲ್ಲಿ ವಿಶಿಷ್ಟ ಜಾತಿಯ ಭೀಮ ಬೊಂಬನ್ನು ಬೆಳೆಸಲಾಗುವುದು. ಇದು ಅತ್ಯಂತ ವೇಗವಾಗಿ ಬೆಳೆಯುವ ಹಾಗೂ ಇಲ್ಲಿನ ಮಣ್ಣಿಗೆ ಸೂಕ್ತವಾದ ಸಸ್ಯವಾಗಿದೆ. ಮೊದಲ ಹಂತದಲ್ಲಿ 25 ಸಾವಿರ ಸೀಮರೂಬ ಗಿಡಗಳನ್ನು ನೆಡಲಾಗುವುದು. ಇದು ಯಾವುದೇ ಪ್ರಾಣಿಗಳು ತಿನ್ನದ ಗಿಡವಾಗಿದೆ. ಈ ಕಾರ್ಯಕ್ಕೆ ಆರಂಭಿಕವಾಗಿ ವಿಧಾನ ಪರಿಷತ್‌ ಸದಸ್ಯರಾದ ಡಾ| ಕೆ. ಗೋವಿಂದರಾಜ್‌ ಟ್ರಾಕ್ಟರ್‌ ಹಾಗೂ ಟ್ಯಾಂಕರ್‌ ನೀಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

Advertisement

ರಾಜಯೋಗ ವಿದ್ಯಾಶ್ರಮದ ದೇನಾ ಭಗತ್‌ ಸ್ವಾಮೀಜಿ, ಜಿಲ್ಲಾ ಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಪಂ ಸಿಇಒ ಡಾ | ಕೆ. ನಂದಿನಿದೇವಿ, ಉಪ ಅರಣ್ಯ ಸಂರಕ್ಷಣಾಧಿ ಕಾರಿ ಎಂ.ಕೆ. ಚೋಳರಾಜಪ್ಪ, ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಮಲ್ಲೂರಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಕೆ. ಕಾಟಯ್ಯ, ಬಿಜೆಪಿ ಮಂಡಲ ಆಧ್ಯಕ್ಷ ರಾಮರೆಡ್ಡಿ, ಪಿ. ಶಿವಣ್ಣ, ತ್ರಿಶೂಲ್‌, ಎನ್‌.ಮಹಾಂತಣ್ಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next