ಚಿಕ್ಕಮಗಳೂರು: ಇತ್ತೀಚೆಗೆ ನಿಧನರಾದ ನಿಘಂಟು ಬ್ರಹ್ಮ ಡಾ| ಜಿ.ವೆಂಕಟಸುಬ್ಬಯ್ಯ, ಕವಿ ಡಾ| ಸಿದ್ದಲಿಂಗಯ್ಯ, ನಟ ಸಂಚಾರಿ ವಿಜಯ್ ಮತ್ತು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ನುಡಿ ನಮನ ಸಲ್ಲಿಸಿದರು. ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಘಟನೆಗಳ ಮುಖಂಡರು ನಿಧನರಾದ ಗಣ್ಯರ ಆತ್ಮಕ್ಕೆ ಶಾಂತಿ ಕೋರಿ, ಒಂದು ನಿಮಿಷ ಮೌನ ಆಚರಿಸಿ, ಅವರ ಬದುಕು ಬರಹಗಳ ಕುರಿತು ವಿಚಾರ ಮಿಮರ್ಶೆ ನಡೆಸಿದರು. ಸಾಹಿತಿ ಡಾ|ಬೆಳವಾಡಿ ಮಂಜುನಾಥ್ ಮಾತನಾಡಿ, ಡಾ|ವೆಂಕಟಸುಬ್ಬಯ್ಯನವರು ಕನ್ನಡ ನಾಡು, ನುಡಿಗೆ ಸಲ್ಲಿಸಿರುವ ಸೇವೆ ಅಮೂಲ್ಯವಾದದ್ದು. ಅವರನ್ನು ಭಾಷಾ ತಜ್ಞ ಎಂದು ಗುರುತಿಸುವುದು ರೂಢಿಯಲ್ಲಿದೆ. ಆದರೆ, ಅವರು ಶಾಸನ ಸಾಹಿತ್ಯ ಮತ್ತು ಸಂಪಾದನಾ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಅವರು ಅನೇಕ ಹಳೆಗನ್ನಡ ಕಾವ್ಯಗಳನ್ನು ಶೋಧಿ ಸಿ ಪ್ರಕಟಿಸಿದ್ದಾರೆ ಎಂದರು.
ಸಾಹಿತಿ ಪೊ.ಎ.ಜಿ.ವಿಶ್ವಮೂರ್ತಿ, ಸಾಹಿತಿ ವಿರೂಪಾಕ್ಷ ಅಣ್ಣಿಗೆರೆ, ಸಂಗಮ ಪ್ರತಿಷ್ಠಾನದ ಸಂಚಾಲಕ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಕವಿ ಸಿದ್ದಲಿಂಗಯ್ಯ, ನಟ ಸಂಚಾರಿ ವಿಜಯ್ ಮತ್ತು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಅವರ ಸೇವೆ ಸ್ಮರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರೇಗೌಡ, ಕನ್ನಡಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ, ನವಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ರಘು, ರೈತ ಸಂಘದ ಮುಖಂಡ ಗುರುಶಾಂತಪ್ಪ, ಸಿಪಿಐ ಮುಖಂಡ ಬಿ.ಅಮ್ಜದ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸೋಮಶೇಖರ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಬಸಪ್ಪ ಇತರರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ನಿರೂಪಿಸಿ, ಖಜಾಂಚಿ ಪೊ.ಕೆ.ಎನ್.ಲಕ್ಷಿಕಾಂತ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ ವಂದಿಸಿದರು.