Advertisement

ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ

09:29 PM Jun 19, 2021 | Team Udayavani |

ಹಿರಿಯೂರು: ನಗರದಲ್ಲಿ ಪ್ರತಿಯೊಬ್ಬರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್‌ ಮುಕ್ತ ನಗರವನ್ನು ಮಾಡಲು ಸಹಕರಿಸಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

Advertisement

ನಗರದ ವಾಸವಿಕಲ್ಯಾಣ ಮಂಟಪದಲ್ಲಿ ನಗರದ ಆರ್ಯವೈಶ್ಯಮಂಡಳಿ ಸಹಕಾರದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಲಸಿಕೆ ಹಾಕಿಸುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ ಎಂಬ ಕಾರಣಕ್ಕೆ ಜನರು ಮೈಮರೆಯಾಬಾರದು, ಸರ್ಕಾರದ ಕೋವಿಡ್‌ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಅಲ್ಲದೆ ತಾಲೂಕಿನ ಎಲ್ಲಾ ಜನತೆಗೆ ಹಂತ ಹಂತವಾಗಿ ಉಚಿತವಾಗಿ ಕೊರೊನಾ ಲಸಿಕೆ ಹಾಕಲಾಗುವುದು ಎಂಬುದಾಗಿ ಅವರು ಹೇಳಿದರು. ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಡಿ.ಟಿ. ಶ್ರೀನಿವಾಸ್‌ ಮಾತನಾಡಿ, ನಗರದಲ್ಲಿ ಅತಿ ಹೆಚ್ಚು ಜನಸಂದಣಿಯಿದ್ದು, ನಗರದ ವರ್ತಕರು ಪ್ರತಿನಿತ್ಯ ವ್ಯಾಪಾರ ವ್ಯವಹಾರಗಳಿಗಾಗಿ ಸಾರ್ವಜನಿಕರೊಂದಿಗೆ ಬೆರೆಯುವ ಕಾರಣಕ್ಕೆ ನೀವು ಮೊದಲು ಲಸಿಕೆ ಹಾಕಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ಮೂಲಕ ಕೋವಿಡ್‌ ನಿಯಂತ್ರಿಸಲು ಸಹಕರಿಸುವಂತೆ ಮನವಿ ಮಾಡಿದರು.

ಆರ್‌. ಪ್ರಕಾಶ್‌ ಕುಮಾರ್‌ ಮಾತನಾಡಿ ಆರ್ಯವೈಶ್ಯಮಂಡಳಿ ನೇತೃತ್ವದಲ್ಲಿ ನಗರದ 18 ವರ್ಷದಿಂದ 44 ವರ್ಷದ ವರೆಗಿನ ಎಲ್ಲಾ ವರ್ಗದ ಜನರಿಗೆ ಲಸಿಕೆ ನೀಡಲು ಅನುಮತಿ ನೀಡಿದ ಶಾಸಕಿ ಪೂರ್ಣಿಮಾ ಹಾಗೂ ಕೋವಿಡ್‌ ವಿಭಾಗದ ಮುಖ್ಯಸ್ಥರಾದ ಡಾ.ರಂಗನಾಥ್‌, ಡಾ.ವೆಂಕಟೇಶ್‌ ಅವರಿಗೆ ಆರ್ಯವೈಶ್ಯ ಮಂಡಳಿ ಪರವಾಗಿ ಅಭಿನಂದನೆ ಸಲ್ಲಿಸಿದರು.

ಡಿವೈಎಸ್ಪಿ ರೋಷನ್‌ ಜಮೀರ್‌, ಜಿಲ್ಲಾ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ವಿ.ಅಮರೇಶ್‌, ನಗರಸಭೆ ಆಯುಕ್ತೆ ಟಿ.ಲೀಲಾವತಿ, ನಗರಸಭೆ ಸದಸ್ಯರಾದ ಎಂ.ಡಿ.ಸಣ್ಣಪ್ಪ, ಮಹೇಶ್‌ ಪಲ್ಲವ್‌, ಬಿ.ಎನ್‌.ತಿಪ್ಪೇಸ್ವಾಮಿ, ಬಾಲಕೃಷ್ಣ, ಚಿರಂಜೀವಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಆರ್‌.ಪ್ರಕಾಶ್‌ ಕುಮಾರ್‌, ಕಾರ್ಯದರ್ಶಿ ಪಿ.ವಿ.ನಾಗರಾಜ್‌, ಸಮಾಜದ ಮುಖಂಡರಾದ ಆನಂದಶೆಟ್ಟಿ, ಯುವಕ ಸಂಘದ ಅಧ್ಯಕ್ಷ ಜಗದೀಶ್‌, ರಾಜೇಶ್‌, ಅರುಣ್‌ ಕುಮಾರ್‌, ಮುಸ್ಲಿಂ ಮುಖಂಡ ಜಬೀವುಲ್ಲಾ, ವರ್ತಕರ ಸಂಘದ ಅಧ್ಯಕ್ಷ ಜಯಣ್ಣ, ಜಿಲ್ಲಾ ನೋಡಲ್‌ ಅ ಧಿಕಾರಿ ಡಾ.ರಂಗನಾಥ್‌, ತಾಲೂಕು ಆರೋಗ್ಯ ಅ ಧಿಕಾರಿ ವೆಂಕಟೇಶ್‌, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next