ದುಬೈ: ಕೆ.ಎಲ್.ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡಲಿದೆ. ಇದಕ್ಕೂ ಮೊದಲು ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ.
ಹೌದು, ಸ್ವತಃ ಈ ಬಗ್ಗೆ ಕ್ರಿಸ್ ಗೇಲ್ ಸ್ಪಷ್ಟಪಡಿಸಿದ್ದಾರೆ. “ಕಳೆದ ಕೆಲವು ತಿಂಗಳಿನಿಂದ ನಾನು ವೆಸ್ಟ್ ಇಂಡೀಸ್ ಬಬಲ್, ಸಿಪಿಎಲ್ ಬಬಲ್, ಮತ್ತು ಐಪಿಎಲ್ ನ ಬಬಲ್ ಗಳಲ್ಲಿ ಕಾಲ ಕಳೆದಿದ್ದೇನೆ. ಮುಂದಿನ ಟಿ20 ವಿಶ್ವಕಪ್ ಗೆ ಮೊದಲು ಮಾನಸಿಕವಾಗಿ ರಿಚಾರ್ಜ್ ಮಾಡಿಕೊಳ್ಳುವ ಅಗತ್ಯವಿದೆ” ಎಂದು ಯುನಿವರ್ಸ್ ಬಾಸ್ ಗೇಲ್ ಹೇಳಿದ್ದಾರೆ.
ನಾನು ವೆಸ್ಟ್ ಇಂಡೀಸ್ ತಂಡಕ್ಕಾಗಿ ಹೆಚ್ಚಿನ ಗಮನ ನೀಡಲು ಇಚ್ಚಿಸಿದ್ದೇನೆ. ಹೀಗಾಗಿ ದುಬೈ ನಲ್ಲಿ ವಿಶ್ರಾಂತಿ ಪಡೆಯಬೇಕಿದೆ. ನನಗೆ ಅನುಮತಿ ನೀಡಿದ್ದಕ್ಕಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ಮುಂದಿನ ಪಂದ್ಯಗಳಿಗೆ ಅವರಿಗೆ ಶುಭವಾಗಲಿ ಎಂದು ಗೇಲ್ ಹೇಳಿದ್ದಾರೆ.
ಇದನ್ನೂ ಓದಿ:ರಾಹುಲ್ ವರ್ಸಸ್ ಮಾರ್ಗನ್
“ನಾನು ಕ್ರಿಸ್ ವಿರುದ್ಧ ಆಡಿದ್ದೇನೆ ಮತ್ತು ಪಂಜಾಬ್ ಕಿಂಗ್ಸ್‌ನಲ್ಲಿ ಅವರಿಗೆ ತರಬೇತಿ ನೀಡಿದ್ದೇನೆ. ಆತನನ್ನು ನಾನು ತಿಳಿದಿರುವ ವರ್ಷಗಳಲ್ಲಿ ಆತ ಯಾವಾಗಲೂ ಸಂಪೂರ್ಣ ವೃತ್ತಿಪರನಾಗಿದ್ದಾನೆ ಮತ್ತು ಟಿ 20 ವಿಶ್ವಕಪ್‌ಗೆ ತನ್ನನ್ನು ಸಿದ್ಧಪಡಿಸುವ ಗೇಲ್ ಆಕಾಂಕ್ಷೆಯನ್ನು ಒಂದು ತಂಡವಾಗಿ ನಾವು ಗೌರವಿಸುತ್ತೇವೆ “ಎಂದು ಪಂಜಾಬ್ ಕಿಂಗ್ಸ್ ಕೋಚ್ ಕುಂಬ್ಳೆ ಹೇಳಿದರು.