Advertisement

ಚಿರಂಜೀವಿಯ ಬಹುನಿರೀಕ್ಷಿತ ‘ಆಚಾರ್ಯ’ಚಿತ್ರದ ರಿಲೀಸ್ ಡೇಟ್ ಫಿಕ್ಸ್

01:19 PM Jan 16, 2022 | Team Udayavani |

ಮುಂಬಯಿ:  ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ “ಆಚಾರ್ಯ” ಚಿತ್ರ ಕೋವಿಡ್ ಉಲ್ಬಣದಿಂದಾಗಿ ಫೆಬ್ರವರಿ ಬದಲಾಗಿ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಭಾನುವಾರ ಘೋಷಿಸಿದ್ದಾರೆ.

Advertisement

ಕೊರಟಾಲ ಶಿವ ನಿರ್ದೇಶನದ ತೆಲುಗುಚಿತ್ರ ಈ ಹಿಂದೆ ಫೆಬ್ರವರಿ 4 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿತ್ತು ಆದರೆ ಈಗ ಯುಗಾದಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ ಮತ್ತು ಕೊನಿಡೇಲಾ ಪ್ರೊಡಕ್ಷನ್ ಕಂಪನಿಯ “ಆಚಾರ್ಯ” ಚಿತ್ರದಲ್ಲಿ ಚಿರಂಜೀವಿ ಅವರ ಪುತ್ರ ನಟ ರಾಮ್ ಚರಣ್, ಪೂಜಾ ಹೆಗ್ಡೆ ಮತ್ತು ಕಾಜಲ್ ಅಗರ್ವಾಲ್ ಕೂಡ ನಟಿಸಿದ್ದಾರೆ.

“ಈ ಯುಗಾದಿ, ದೊಡ್ಡ ಪರದೆಯ ಮೇಲೆ ಮೆಗಾ ಮಾಸ್‌ಗೆ ಸಾಕ್ಷಿಯಾಗಿದೆ. # ಆಚಾರ್ಯ ಗ್ರ್ಯಾಂಡ್ ರಿಲೀಸ್ ಏಪ್ರಿಲ್ 1 ರಂದು,” ಎಂದು ಕೊನಿಡೇಲಾ ಪ್ರೊಡಕ್ಷನ್ ಕಂಪನಿ ತನ್ನ ಅಧಿಕೃತ ಪುಟದ ಟ್ವೀಟ್‌ನಲ್ಲಿ ತಿಳಿಸಿದೆ.

Advertisement

“ಆಚಾರ್ಯ” 2020 ರಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿತ್ತು, ಆದರೆ ಕೋವಿಡ್ ಕಾರಣದಿಂದಾಗಿ ನಿರ್ಮಾಣದಲ್ಲಿ ವಿಳಂಬವನ್ನು ಎದುರಿಸಿತು.

ಚಿತ್ರದಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ನಕ್ಸಲೀಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮ್ಯಾಟನಿ ಎಂಟರ್ಟೈನ್ ಮೆಂಟ್ ಮತ್ತು ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಚಿತ್ರಕ್ಕೆ ಬಂಡವಾಳ ಹೂಡಿದೆ.

ಚಿತ್ರದಲ್ಲಿ ಕನ್ನಡದ ಸೌರವ್ ಲೋಕೆಶ್ (ಭಜರಂಗಿ ಲೋಕಿ) ಕೂಡಾ ಕಾಣಿಸಿಕೊಂಡಿದ್ದು, ಸೋನು ಸೂದ್, ಜಿಶ್ಶು ಸೆನ್ ಗುಪ್ತಾ, ಕಿಶೋರ್, ಪೊಸಾನಿ, ಕೃಷ್ಣ ಮುರಳಿ, ತನಿಕೆಲ್ಲಾ ಭರಣಿ, ಸಂಗೀತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿ ಶರ್ಮಾ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next