Advertisement

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

12:26 PM Oct 17, 2021 | Team Udayavani |

ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಈ ದಿನ ಮೇಘನಾ ರಾಜ್‌ ಮತ್ತೆ ಬಣ್ಣ ಹಚ್ಚುವ ಸಿನಿಮಾವೊಂದು ಆರಂಭವಾಗುತ್ತಿದೆ. ಈ ಚಿತ್ರವನ್ನು ಪಿ.ಬಿ ಸ್ಟುಡಿಯೋಸ್‌ ನಿರ್ಮಾಣ ಮಾಡುತ್ತಿದೆ.

Advertisement

ಪನ್ನಗಾಭರಣ, ನಿರ್ದೇಶಕ ವಿಶಾಲ್‌ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮುಂತಾದ ವರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಈ ಚಿತ್ರ ಇಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದಂದೇ ಆರಂಭವಾಗುತ್ತಿದೆ.

ಇದನ್ನೂ ಓದಿ:ಶ್ರೀಕೃಷ್ಣ ಅಟ್‌ ಜಿಮೇಲ್‌. ಕಾಂ ಚಿತ್ರ ವಿಮರ್ಶೆ: ಫ್ಯಾಮಿಲಿ ಟೈಮ್‌ ನಲ್ಲಿ ಕೃಷ್ಣ ಸುಂದರ ಯಾನ

ಚಿತ್ರದಲ್ಲಿ ಮೇಘನಾರಾಜ್‌ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಮೇಘನಾ ಮತ್ತೆ ನಟನೆಗೆ ಮರಳಿದಂತಾಗುತ್ತದೆ. ಚಿತ್ರದ ಟೈಟಲ್‌, ಫ‌ಸ್ಟ್‌ಲುಕ್‌ ಸೇರಿದಂತೆ ಇತರ ಅಂಶಗಳು ಶೀಘ್ರದಲ್ಲಿ ಬಿಡುಗಡೆಯಾಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next