Advertisement

LJP ಅಧ್ಯಕ್ಷನಾಗಿ ಕೇಂದ್ರ ಸಚಿವ ಚಿರಾಗ್ ಪುನರಾಯ್ಕೆ: ಜಾತಿ ಗಣತಿಗೆ ಒತ್ತಾಯ,ಆದರೆ..

06:46 PM Aug 25, 2024 | Team Udayavani |

ಹೊಸದಿಲ್ಲಿ: ಲೋಕ ಜನಶಕ್ತಿ ಪಕ್ಷದ LJP (Ram Vilas) ಅಧ್ಯಕ್ಷರಾಗಿ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಖಾತೆಯ ಸಚಿವ ಚಿರಾಗ್ ಪಾಸ್ವಾನ್ ಅವರು ಭಾನುವಾರ (ಆ25) ಪುನರಾಯ್ಕೆಯಾಗಿದ್ದಾರೆ.

Advertisement

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಐದು ವರ್ಷಗಳ ಕಾಲಕ್ಕೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು ಎಂದು ಪಾಸ್ವಾನ್ ಹೇಳಿದ್ದಾರೆ.

ಸಭೆಯಲ್ಲಿ ಮುಂಬರಲಿರುವ ಹರ್ಯಾಣ, ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಪಾಸ್ವಾನ್ ತಿಳಿಸಿದರು.

ಜಾರ್ಖಂಡ್‌ನಲ್ಲಿ ಪಕ್ಷವು ಮೈತ್ರಿಕೂಟದ ಪಾಲುದಾರ ಬಿಜೆಪಿಯೊಂದಿಗೆ ಅಥವಾ ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸಬಹುದು.ನಮ್ಮ ಸಂಘಟನೆ ಬಲಿಷ್ಠವಾಗಿರುವ ರಾಜ್ಯಗಳಲ್ಲಿ ಮೈತ್ರಿಕೂಟದಲ್ಲಿ ಅಥವಾ ಏಕಾಂಗಿಯಾಗಿ ಚುನಾವಣೆ ಎದುರಿಸಬೇಕೆ ಎಂದು ನಾವು ರಾಜ್ಯ ಘಟಕಗಳಿಂದ ಸಲಹೆಗಳನ್ನು ಪಡೆದಿದ್ದೇವೆ. ರಾಷ್ಟ್ರಮಟ್ಟದಲ್ಲಿ ನಾವು ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದೇವೆ ಮತ್ತು ನಾವು ಎನ್‌ಡಿಎಯ ಪ್ರಬಲ ಸಮ್ಮಿಶ್ರ ಪಾಲುದಾರರಾಗಿದ್ದೇವೆ. ಗೌರವಾನ್ವಿತ ಸೀಟು ಹಂಚಿಕೆಯಾದರೆ, ನಾವು ಮೈತ್ರಿ ಮುಂದುವರಿಸಬಹುದು ಇಲ್ಲವಾದರೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆಗಿಳಿಯಬಹುದು” ಎಂದು ಪಾಸ್ವಾನ್ ಹೇಳಿದ್ದಾರೆ.

ರಾಷ್ಟ್ರವ್ಯಾಪಿ ಜಾತಿ ಗಣತಿಗಾಗಿ ಒತ್ತಾಯಿಸಿದ ಸಚಿವ ಪಾಸ್ವಾನ್, ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸದಂತೆ ಎಚ್ಚರಿಕೆ ನೀಡಿದರು. ಬಹಿರಂಗ ಮಾಡಿದರೆ ಅದು ಸಮಾಜದಲ್ಲಿ ಬಿರುಕು ಉಂಟುಮಾಡುತ್ತದೆ.ನಾವು ಯಾವಾಗಲೂ ಜಾತಿ ಗಣತಿಯನ್ನು ನಡೆಸಬೇಕೆಂದು ನಾವು ಬಯಸುತ್ತೇವೆ. ಇದು ಸರ್ಕಾರವು ಸರಿಯಾದ ಸಂಖ್ಯೆಯನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ” ಎಂದರು.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಯಾಣ ಉಪಕ್ರಮಗಳಿಗಾಗಿ ಮತ್ತು ಎಸ್‌ಸಿ-ಎಸ್‌ಟಿ ಸಮುದಾಯಕ್ಕಾಗಿ ಕೆಲಸ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಲು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ವಿಶೇಷ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದರು.

ಎಸ್‌ಸಿ ಸಮುದಾಯದಲ್ಲಿನ ಕೆನೆಪದರ ಕುರಿತು ಪ್ರತಿಕ್ರಿಯಿಸಿ ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಬಲಿಯಾಗದೆ, ಅಸ್ಪೃಶ್ಯತೆಗೆ ಬಲಿಯಾಗಿರುವುದನ್ನು ವಿರೋಧಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ದಲಿತ ಸಮುದಾಯದ ವರನೊಬ್ಬ ಮದುವೆಯ ಸಂದರ್ಭದಲ್ಲಿ ಕುದುರೆ ಸವಾರಿ ಮಾಡುವುದನ್ನು ತಡೆಯಲಾಗುತ್ತದೆ. ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಮದುವೆಗೆ ಭದ್ರತೆಯನ್ನುಕೇಳಿರುವ ಬಗ್ಗೆಯೂ ನಾನು ಕೇಳಿದ್ದೇನೆ ಎಂದು ಪಾಸ್ವಾನ್ ಅಸಮಾಧಾನ ಹೊರ ಹಾಕಿದರು.

“ದಲಿತ ಸಮುದಾಯದ ಸದಸ್ಯರು ದೇವಾಲಯಗಳನ್ನು ಪ್ರವೇಶಿಸುವಂತಿಲ್ಲ ಎಂದು ನಾವು ಇಂದಿಗೂ ಕೇಳುತ್ತೇವೆ. ಸುಪ್ರೀಂ ಕೋರ್ಟ್‌ನ ಅವಲೋಕನದಲ್ಲಿ ಅಸ್ಪೃಶ್ಯತೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪ್ರಧಾನಿ ಹೇಳಿದ ಬಳಿಕವೂ ದಲಿತರ ಮೇಲೆ ನಿಬಂಧನೆಗಳು ಮುಂದುವರಿಯುತ್ತಿವೆ” ಎಂದು ಎಸ್ ಸಿ ಸಮುದಾಯದ ಪ್ರಬಲ ಯುವ ನಾಯಕ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next