Advertisement

ಯತಿರಾಜ್‌ ಕಿರುಚಿತ್ರೋತ್ಸವ ಕೋವಿಡ್ ತಂದ ಸಂಕಟ

03:15 PM Aug 07, 2020 | mahesh |

ಕೋವಿಡ್ ಲಾಕ್‌ಡೌನ್‌ನಿಂದಾಗಿ ಅನೇಕರ ಜೀವನ ಬೀದಿಗೆ ಬಂದಿದೆ. ಜೀವನ ನಿರ್ವಹಣೆ ಕೂಡಾ ಕಷ್ಟವಾಗಿದೆ. ಹೀಗಿರುವಾಗ ಅನೇಕರು ಅನಿವಾರ್ಯವಾಗಿ ತಮ್ಮ ಮೂಲವೃತ್ತಿಯನ್ನು ಬಿಟ್ಟು ಜೀವನ ಹೊಟ್ಟೆಪಾಡಿಗಾಗಿ ಬೇರೆ ವೃತ್ತಿಯ ಕಡೆಗೆ ಮುಖ ಮಾಡಿದ್ದಾರೆ. ಕಲಾವಿದರು, ಶಿಕ್ಷಕರು, ಬೇರೆ ಬೇರೆ ಕಂಪೆನಿಗಳಲ್ಲಿ ಉದ್ಯೋಗದಲ್ಲಿದ್ದವರು ಈಗ ತರಕಾರಿ ಮಾರಾಟ, ಸೆಕ್ಯುರಿಟಿ ಗಾರ್ಡ್ಸ್ ಹೀಗೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

Advertisement

ನಟ ಯತಿರಾಜ್‌ ಈ ಎಲ್ಲವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿರುವ ಯತಿರಾಜ್‌, ಕೋವಿಡ್ ಲಾಕ್‌ಡೌನ್‌ ವೇಳೆ ಸುಮ್ಮನೇ ಕೂರದೇ ಒಂದಷ್ಟು ಕಿರುಚಿತ್ರಗಳನ್ನು ಮಾಡಿದ್ದಾರೆ. ತಮ್ಮ ಕಲಾವಿದ ಫಿಲಂ ಅಕಾಡೆಮಿಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರು ಈ ಕಿರುಚಿತ್ರಗಳನ್ನು ಮಾಡಿದ್ದಾರೆ. ಲಾಕ್‌ಡೌನ್‌ ವೇಳೆಯಲ್ಲಿ ಏಳು ಕಿರುಚಿತ್ರಗಳನ್ನು ಮಾಡಿದ್ದು, ಇತ್ತೀಚೆಗೆ ಅವರ “ಚಿಂಟು’ ಕಿರುಚಿತ್ರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇಲ್ಲಿ ಕೋವಿಡ್ ದಿಂದಾಗಿ ಕೆಲಸ ಕಳೆದುಕೊಂಡ ಶಿಕ್ಷಕರು ಅನುಭವಿಸುವ ಕಷ್ಟ ಹಾಗೂ ಅದಕ್ಕೆ ಮರುಗಿ, ಸಹಾಯಕ್ಕೆ ನಿಲ್ಲುವ ವಿದ್ಯಾರ್ಥಿಗಳ ಕುರಿತಾಗಿ ಇಲ್ಲಿ ಹೇಳಲಾಗಿದೆ. “ಸುಮ್ಮನೆ ಕೂರುವ ಬದಲು ಏನಾದರೊಂದು ಮಾಡಬೇಕೆಂದು ಹೊರಟ ಪರಿಣಾಮವಾಗಿ ಏಳು ಕಿರುಚಿತ್ರಗಳನ್ನು ಮಾಡಲಾಯಿತು.

ಏಳರಲ್ಲೂ ಬೇರೆ ಬೇರೆ ವಿಚಾರ ಗಳನ್ನು ಹೇಳಲು ಪ್ರಯತ್ನಿಸಿದ್ದೇನೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿಂಟುಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಅನೇಕ ಶಿಕ್ಷಕರು ಕರೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎನ್ನುವುದು ಯತಿರಾಜ್‌ ಮಾತು. ಸದ್ಯ ಯತಿರಾಜ್‌ ಕೈಯಲ್ಲಿ ೨-೩ಸಿನಿಮಾಗಳಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next