ಚಿಂತಾಮಣಿ : ಕೊಳವೆ ಬಾವಿಗೆ ಪೈಪ್‌ಲೈನ್ ಸಂಪರ್ಕ ನೀಡಿ ಗಂಗಾನಗರಕ್ಕೆ ಕುಡಿಯುವ ನೀರು ಕಲ್ಪಿಸುವಂತೆ ಕಳೆದ ಆರು ತಿಂಗಳುಗಳಿಂದ ಮನವಿ ಮಾಡಿದರೂ ನಗರಸಭೆ ಜೆ.ಇ ಪ್ರಸಾದ್ ಯಾವುದೆ ಕ್ರಮ ಕೈಗೊಂಡಿಲ್ಲವೆಂದು ವಾರ್ಡ್ ನಂ 2 ರ ಸದಸ್ಯ ಜೈ ಭೀಮ್ ಮುರಳಿ ಆರೋಪಿಸಿದ್ದಾರೆ.
ಗುರುವಾರ ನಗರಸಭೆಗೆ ಭೇಟಿ ನೀಡಿ ಪ್ರಸಾದ್ ರವರನ್ನು ತರಾಟೆಗೆ ತೆಗೆದುಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾರ್ಡ್ ನಂ 2ರ ಗಂಗಾನಗರ ಬಡಾವಣೆಯು ಬೆಟ್ಟದ ತಪ್ಪಲಿನಲ್ಲಿದ್ದು ಇಲ್ಲಿಗೆ ಪೈಪ್ ಲೈನ್ ಸಂಪರ್ಕ ಸಹ ಕಲ್ಪಿಸಿ ಅರಣ್ಯ ಇಲಾಖೆಗೆ ಸೇರಿದ ಕೊಳವೆ ಬಾವಿಯನ್ನು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮುಖಾಂತರ ಅರಣ್ಯ ಅಧಿಕಾರಿಗಳ ಜೊತೆ ಮಾತನಾಡಿ ಕೊಳವೆ ಬಾವಿ ಬಳಲೆಗೆ ಒಪ್ಪಿಗೆ ಪಡೆದಿದ್ದೆವೆ. ಸದರಿ ಕೊಳವೆ ಬಾವಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಿ ನೀರು ಬಿಡುವಂತೆ ಕಳೆದ ಆರು ತಿಂಗಳುಗಳಿಂದ ನಗರಸಭೆ ಜೆ.ಇ. ಪ್ರಸಾದ್ ರವರನ್ನು ಕೇಳುತ್ತಿದ್ದರೂ ಪೈಪ್ ಲೈನ್ ಸಂಪರ್ಕ ಮಾಡುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ:ಬಾಲಿವುಡ್ ನಟಿ ಅನನ್ಯ ಪಾಂಡೆ ನಿವಾಸದ ಮೇಲೆ ಎನ್ ಸಿಬಿ ದಾಳಿ, ಫೋನ್, ಲ್ಯಾಪ್ ಟಾಪ್ ವಶಕ್ಕೆ
ನಗರಸಭೆ ಸದಸ್ಯರಾಗಿ ನಾವೆ ಆರು ತಿಂಗಳುಗಳಿಂದ ಕೇಳುತ್ತಿದ್ದರೂ ಕೆಲಸ ಮಾಡದ ಇವರು ಜನಸಾಮಾನ್ಯರ ಮನವಿಗೆ ಹೇಗೆ ಸ್ಪಂದಿಸುತ್ತಾರೆ ಎಂದು ಆಕ್ರೋಶಗೊಂಡ ಅವರು ಪ್ರಸಾದ್ ರವರು ಕೇವಲ ಗುತ್ತಿಗೆದಾರರ ಪರವಾಗಿ ಕೆಲಸಮಾಡಿ ಕಮೀಷನ್ ಗಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜೆ.ಇ ಪ್ರಸಾದ್ ಮೂರು ದಿನಗಳೊಳಗೆ ಕೊಳವೆ ಬಾವಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದರು.