Advertisement
ಸಂದರ್ಶನವೊಂದರಲ್ಲಿಮಾತನಾಡಿದ ದಾದಾ “ಟೆಸ್ಟ್ ಕ್ರಿಕೆಟ್ ತನ್ನ ಜನಪ್ರಿಯತೆ ಕಳೆದು ಕೊಳ್ಳುತ್ತಿದೆ. ಜನರನ್ನು ಟೆಸ್ಟ್ ನತ್ತ ಆಕರ್ಷಿಸುವ ಅಗತ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುಂಬೈ, ಬೆಂಗಳೂರುಹಾಗೂ ಗುಜರಾತ್‌ನಲ್ಲಿ ಗುಲಾಬಿ ಬಣ್ಣದ ಚೆಂಡಿನ ಟೆಸ್ಟ್ ಆಡಿಸಲು ಚಿಂತಿಸಿದ್ದೇವೆ. ಈ ಬಗ್ಗೆ ಪ್ರಯತ್ನಗಳು ಸಾಗುತ್ತಿವೆ. ಈ ಬಗ್ಗೆ ವಿರಾಟ್ ಕೊಹ್ಲಿ ಮತ್ತು ತಂಡದ ಆಟಗಾರರು ತುಂಬಾ ಸಂತೋಷಗೊಂಡಿದ್ದಾರೆ. ಭವಿಷ್ಯದ ಗುಲಾಬಿ ಬಣ್ಣದ ಚೆಂಡಿನ ಟೆಸ್ಟ್ ಪಂದ್ಯಗಳನ್ನು ಆಡಲು ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಗಂಗೂಲಿ ತಿಳಿಸಿದ್ದಾರೆ.
ಗಂಗೂಲಿತಾನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆಗೆ ಮಾತನಾಡಿದ್ದೇನೆ. ಗಾಯದ ನಂತರ ಭಾರತ ರಾಷ್ಟ್ರೀಯ ತಂಡದ ಎಲ್ಲ ಕ್ರಿಕೆಟಿಗರೂ, ಎನ್ ಸಿಎಗೇ ಚಿಕಿತ್ಸೆಗೆ ತೆರಳಬೇಕು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಒಂದು ವೇಳೆ ಬೇರೆ ಯಾರಾದರೂ ಅವರಿಗೆ ಚಿಕಿತ್ಸೆ ನೀಡುವುದಿದ್ದರೂ, ಅವರು ಎನ್‌ಸಿಎಗೆ ಬಂದೇ ಚಿಕಿತ್ಸೆ ನೀಡಬೇಕು ಎಂದು ಗಂಗೂಲಿ ಹೇಳಿದ್ದಾರೆ. ಇತ್ತೀಚೆಗೆ ವೇಗಿ ಜಸ್ಪ್ರೀತ್ ಬುಮ್ರಾ ಎನ್ ಸಿಎನಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ ನಂತರ ಈ ಘಟನೆ ನಡೆದಿದೆ. ತಮ್ಮ ಬೆನ್ನು ನೋವಿನ ಹಿನ್ನೆಲೆಯಲ್ಲಿ ಬುಮ್ರಾ ಖಾಸಗಿಯಾಗಿ ಇಂಗ್ಲೆಂಡ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಎನ್ ಸಿಎಗೆ ತೆರಳಲು ನಿರಾಕರಿಸಿದ್ದರು. ಇದರಿಂದ ಸಿಟ್ಟಾದ ದ್ರಾವಿಡ್, ಬುಮ್ರಾಗೆ ಅಂತಿಮಪರೀಕ್ಷೆ ನಡೆಸಿ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಾದ ತುಸು ಜೋರಾಗಿತ್ತು. ಆದ್ದರಿಂದ ಗಂಗೂಲಿ ಮಧ್ಯಪ್ರವೇಶಿಸಿ, ಅಂತಿಮ ತೀರ್ಮಾನ ನೀಡಿದ್ದಾರೆ