Advertisement

ನೋಡಿ, ಚಿನ್ನಸ್ವಾಮಿ ಇರೋದೇ ಹೀಗೆ!

05:13 PM Mar 04, 2017 | |

ವಿಶ್ವ ಕ್ರಿಕೆಟನ್ನು ಕಾಂಪೌಂಡಿನಾಚೆಗೆ ಆವಾಹಿಸಿಕೊಳ್ಳುವ ಬೆಂಗ್ಳೂರಿನಲ್ಲೀಗ ಇಂದಿನಿಂದ ಐದು ದಿನ ಕ್ರಿಕೆಟ್‌  ಜಾತ್ರೆ. ಭಾರತ ಆಸ್ಟ್ರೇಲಿಯಾ ಹುಡುಗರು ಸಿಲಿಕಾನ್‌ ಸಿಟಿಯ ಸುಡುವ ಬಿಸಿಲಿಗೆ ಸೆಡ್ಡು ಹೊಡೆದು, ಗುಡುಗು ಸಿಡಿಲು ಸೃಷ್ಟಿಸುವುದನ್ನು ನೋಡದಿದ್ರೆ ಭಾರಿ ನಷ್ಟವೇ. ಬೇರೆಲ್ಲ ಟೂರ್ನಿಗೆ ಹೋಲಿಸಿದರೆ ಈ ಸಲದ ಟೆಸ್ಟ್‌ ಮ್ಯಾಚಿನ ಟೇಸ್ಟೇ ಬೇರೆ.

Advertisement

ಚಿನ್ನಸ್ವಾಮಿ ಸ್ಟೇಡಿಯಮ್ಮಿನ ಸುತ್ತ ನಾಲ್ಕೂ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌  ಗಂಟೆಗಟ್ಟಲೆ ಬೇಕಾದ್ರೂ ಅಲ್ಲಿ ನಿಲ್ಲಿ. ಬೇಜಾರು ಪ್ಯಾಡು ಕಟ್ಟಿಕೊಂಡು ನಿಮ್ಮೊಳಗಿನ ಕ್ರೀಸಿಗೆ ದಾಂಗುಡಿ ಇಡೋದಿಲ್ಲ. ಕಾರಣ, ಬೇರೆಯೇ. ಸ್ಟೇಡಿಯಮ್ಮಿನ ಆ ಗೋಡೆಯಲ್ಲಿ ಮ್ಯಾಚು ಇಲ್ಲದಿದ್ರೂ ತೆಂಡೂಲ್ಕರನ ಹಾಲ್ನಗು ಉಕ್ಕುತ್ತದೆ. ದ್ರಾವಿಡ್‌ ಡೈವ್‌ ಹೊಡೆದಂತೆ, ಕಾಲರ್‌ ಏರಿಸಿಕೊಂಡ ಕೊಹ್ಲಿ ಜಿಗಿದು ಕುಣಿದಂತೆ, ಉದ್ದುದ್ದ ಕೂದಲಿನ ಗೇಲ್‌  ಗಾಳಿಯಲ್ಲಿ ಚೆಂಡಿನ ಮುತ್ತೂಂದನ್ನು ತೇಲಿಬಿಟ್ಟಂತೆ ರೀಲ್‌  ಸುತ್ತಿಕೊಳ್ಳುತ್ತೆ. ಪುಕ್ಕಟೆ ಕಾಣುವ ಈ ಕ್ರಿಕೆಟಿನ ಪಿಕ್ಚರು ಮುಗಿವಾಗ, ಟ್ರಾಫಿಕ್ಕಿನ ಬಲ್ಬಿನಲ್ಲಿ ಪಕ್ಕನೆ ಬೆಳಗೋದು ಹಸಿರು ಬಣ್ಣ! ಈ ಮಹದಾನಂದ ಸದಾ ನಾಟೌಟ್‌ !

ಸಬ್‌ ಏರ್‌ ಅಭಯ
ಬಿಸಿಲು, ಬೆವರು ಅಂತ ಮುಗಿಲು ನೋಡಿ ದಿಗಿಲು ಹೆಚ್ಚಿಸ್ಕೊಂಡಿದ್ದೀರಿ. ಮ್ಯಾಚು ಶುರು ಆಗುತ್ತೆ. ಇದ್ದಕ್ಕಿದ್ದಂತೆ ಜೋರು ಮಳೇನೂ ಬರುತ್ತೆ ಅಂದ್ಕೊಳ್ಳಿ  (ಆ ಸಾಧ್ಯತೆ ತುಂಬಾ ಕಡಿಮೆ. ಆದರೂ ಅಕಸ್ಮಾತ್‌ ಆಗಿಬಿಟ್ಟರೆ…). ಸ್ಟೇಡಿಯಮ್ಮಿನಲ್ಲಿ ನೀರು ನಿಂತ್ರೆ ಮ್ಯಾಚೇನು ರದ್ದಾಗೋದಿಲ್ಲ! ಕಾರಣ, ಮೈದಾನಕ್ಕೆ ಸಬ… ಏರ್‌ ಫಿಕ್ಸ್‌ ಆಗಿದೆ. ಎಷ್ಟೇ ಜೋರು ಮಳೆ ಬಂದ್ರೂ ಎರಡೇ ನಿಮಿಷದಲ್ಲಿ ಆ ನೀರನ್ನು ಗಟಗಟನೆ ಕುಡಿದು, ಏನೂ ಆಗೇ ಇಲ್ಲ ಎಂದು ತೇಗು ಹೊಮ್ಮಿಸುವಷ್ಟು ಶಕ್ತಿ ನಮ್ಮ ಚಿನ್ನಸ್ವಾಮಿ ಸ್ಟೇಡಿಯಮ್ಮಿಗಿದೆ. ಜಗತ್ತಿನ ಬೆರಳೆಣಿಕೆ ಫ‌ುಟ್ಬಾಲ್‌ ಮೈದಾನದಲ್ಲಿರುವ ಈ ತಂತ್ರಜ್ಞಾನ ಇದೇ ಮೊದಲ ಬಾರಿಗೆ ಕ್ರಿಕೆಟ್‌ ಫೀಲ್ಡಿಗೂ ಎಂಟ್ರಿ ಕೊಟ್ಟಿದೆ. ಪಂದ್ಯ ಆರಂಭಕ್ಕೂ ಮುನ್ನ ಇದರ ಮ್ಯಾಜಿಕ್ಕಿನ ಪ್ರಾತ್ಯಕ್ಷಿಕೆಯನ್ನು ಕೆ.ಎಸ್‌.ಸಿ.ಎ ನೀಡಿದರೂ ಅಚ್ಚರಿ ಇಲ್ಲ. ಹಾಗಾಗಿ, ಮೊದೆÉà ಹೋಗಿ ಸೀಟ್‌  ಬುಕ್‌ ಮಾಡ್ಕೊಳ್ಳಿ.

ಸೈನಿಕರ ಸಾಥ್‌ 
ಸಾಲು ಸಾಲು, ಸಹಸ್ರಾರುಗಟ್ಟಲೆ ಯೋಧರನ್ನು ನೋಡಲು ಕಾಶ್ಮೀರಕ್ಕೆ ಹೋಗಬೇಕಿಲ್ಲ. ಈ ಸಲ ಚಿನ್ನಸ್ವಾಮಿ ಸ್ಟೇಡಿಯಮ್ಮಿನಲ್ಲೇ  ಕಾಣಿಸ್ತಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆ.ಎಸ್‌.ಸಿ.ಎ) ದೇಶಕ್ಕೇ ಮಾದರಿ ಆಗುವಂತೆ 5000 ಯೋಧರಿಗೆ ಉಚಿತ ಪಾಸ್‌ ನೀಡಿದೆ. ಬುಲೆಟ್ಟು, ಬಾಂಬು ಅಂತೆಲ್ಲ ತಲೆ ಕೆಡಿಸಿಕೊಳ್ತಿ¨ªೋರು, ಇಂದು ಅವನ್ನೆಲ್ಲ ಪಕ್ಕಕ್ಕಿಟ್ಟು ಬ್ಯಾಟು, ಬಾಲು ನೋಡ್ತಿರ್ತಾರೆ. ಕ್ರಿಕೆಟ್‌ ಸಂಸ್ಥೆಯೊಂದು ಸೈನಿಕರಿಗೆ ಇಂಥ ಗೌರವ ನೀಡಿದ್ದು ಇದೇ ಮೊದಲು. 

ಟ್ರೆಕ್ಕಿಂಗ್‌ ಸ್ಪಿರಿಟ್ಟು: ವೀಕೆಂಡ್‌ನ‌ಲ್ಲಿ ಟ್ರೆಕ್ಕಿಂಗ್‌ ಹೋಗಿ, ಸೋಮವಾರ ಜೋಶ್‌ನಲ್ಲಿ ಕಂಪ್ಯೂಟರ್‌ ಮುಂದೆ ಕೂರೋದು ಬೆಂಗ್ಳೂರು ಐಟಿ ಜಗತ್ತಿನ ಲೈಫ್ ಸ್ಟೈಲು. ವಿರಾಟ್‌  ಕೊಹ್ಲಿ ಪಡೆ ಆ ಕೆಲ್ಸ ಮುಗಿಸಿಯೇ ಈಗ ಕ್ರಿಕೆಟ್‌ ಆಡಲು ಬಂದಿದೆ. ಪುಣೆಯಿಂದ 80 ಕಿ.ಮೀ. ದೂರದ ತಮ್ಬಿನಿ ಘಾಟ್‌ನಲ್ಲಿ ಟ್ರೆಕ್ಕಿಂಗ್‌ ಮುಗಿಸಿ, ಹೊಸ ಸ್ಪಿರಿಟ್ಟಿನಲ್ಲಿ ಬ್ಯಾಟ್‌ ಹಿಡಿಯಲಿದ್ದಾರೆ. ಫೋರು ಹೊಡೀತಾರೆ, ಸಿಕ್ಸರ್‌ ಬಾರಿಸ್ತಾರೆ, ನೀಟಾಗಿ ಎಣಿಸ್ಕೊಳ್ಳೋದು ನಿಮ್‌ಕೆಲ್ಸ.

Advertisement

ಮಕ್ಕಳ ಶಿಳ್ಳೆ ಚಪ್ಪಾಳೆ
ಕ್ರಿಕೆಟ್‌ ಮಧ್ಯೆ ಮಕ್ಕಳ ಚಿಲಿಪಿಲಿಯೂ ಕೇಳುÕತ್ತೆ! ಕೆ.ಎಸ್‌.ಸಿ.ಎ ಆಯ್ದ ಶಾಲೆಯ ಮಕ್ಕಳಿಗೂ ಉಚಿತ ಪಾಸ್‌ ನೀಡಿದೆ. ಆ ಮಕ್ಕಳ ಶಿಳ್ಳೆ, ಚಪ್ಪಾಳೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಖುಷಿ ಬೋನಸ್‌ ಅಲ್ವೇ?

ಬಹುದಿನಗಳ ನಂತರ
ಕಳೆದ ಏಳೆಂಟು ತಿಂಗಳಿನಿಂದ ಚಿನ್ನಸ್ವಾಮಿ ಸ್ಟೇಡಿಯಮ್ಮಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಜರುಗಿಲ್ಲ. ಸಹಜವಾಗಿ ನಮಗೆ ಕ್ರಿಕೆಟಿನ ಮೇಲೆ ವಿರಹ ಹುಟ್ಟಿಯೇ ಇರುತ್ತೆ. ಅದನ್ನೆಲ್ಲ ನೀಗಿಸಿಕೊಂಡು, ಆನಂದ ಉಕ್ಕಿಸಿಕೊಳ್ಳುವ ಟೈಂ ಇದು.

ಯಾಕೆ ಮ್ಯಾಚ್‌ ನೋಡಿ ಅಂದ್ರೆ…
ಉಚಿತ ಪಾಸ್‌ನಲ್ಲಿ 5000 ಸೈನಿಕರು ಬಂದು ಮ್ಯಾಚ್‌ ನೋಡ್ತಾರೆ.
ಬೆಂಗ್ಳೂರಿನ ಪಂದ್ಯ ಅಂದ್ರೆ ಕೊಹ್ಲಿ ಸದಾ ಮಿಂಚಿಂಗ್‌. ಈ ಸಲವೂ ಮೋಸ ಇಲ್ಲ.
ಕೋಚ್‌ ಕುಂಬ್ಳೆ, ಕನ್ನಡಿಗ ಆಟಗಾರರಾದ ಕೆಎಲ್‌  ರಾಹುಲ್‌ , ಕರುಣ ನಾಯರ್‌ ಕಮಾಲ್‌  ಇರುತ್ತೆ.

ಸಖತ್‌ ಟ್ರೆಕ್ಕಿಂಗ್‌ ಮುಗಿಸಿ, ಕೊಹ್ಲಿ ಪಡೆ ಫ್ರೆಶ್‌ ಆಗಿ ಆಡುವ ವಿಶ್ವಾಸ. ಟೆಸ್ಟ್‌ ಮ್ಯಾಚ್‌ ಆಗಿರೋ ಕಾರಣ ಆಟಗಾರರು ಅಷ್ಟೊಂದು ಒತ್ತಡದಲ್ಲಿ ಇರೋದಿಲ್ಲ. ಆಟೋಗ್ರಾಫ್ ಕೇಳಿದ್ರೆ ನೋ ಅನ್ನೋಲ್ಲ. ಮಳೆ ಬಂದ್ರೂ ಸಬ… ಏರ್‌ ಮ್ಯಾಚ್‌ ಕ್ಯಾನ್ಸಲ್‌ ಮಾಡೋಕೆ ಬಿಡೋಲ್ಲ.

ಪಂದ್ಯ ಆರಂಭ
ಬೆಳಗ್ಗೆ 9.30, ಚಿನ್ನಸ್ವಾಮಿ ಸ್ಟೇಡಿಯಂ

ಎಲ್ಲಿಯ ತನಕ?
ಮಾ.4ರಿಂದ 8ರ ವರೆಗೆ

ಟಿಕೆಟ್‌ ಬೆಲೆ
200 ರೂ.ನಿಂದ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next