Advertisement
ಚಿಣ್ಣರ ಬಿಂಬದ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಚಿಣ್ಣರ ಬಿಂಬದ ಮುಖ್ಯ ಉದ್ದೇಶ ಕೇವಲ ಕನ್ನಡ ಕಲಿಸುವುದು ಮಾತ್ರವಲ್ಲ ಅದರೊಟ್ಟಿಗೆ ಮುಖ್ಯವಾಗಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸು ವುದು. ಮಕ್ಕಳಿಗೆ ಜೀವನದಲ್ಲಿ ಶಿಸ್ತಿನ ಮಹತ್ವಗೊತ್ತಿರಬೇಕು. ಆವಾಗಲೇ ಅವರ ಬಾಳ್ವೆ ಉತ್ತಮ ರೀತಿಯಲ್ಲಿ ಸಾಗಲು ಸಾಧ್ಯ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಪ್ರತಿ ವರ್ಷ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನವನ್ನು ಪ್ರತಿ ಶಿಬಿರದಲ್ಲಿ ನೀಡಲಾಗುತ್ತದೆ. ಆದರೆ ಇಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ. ಪಾಲಕರು ಆಸಕ್ತಿ ವಹಿಸಿ ಮಕ್ಕಳಿಗೆ ಮನವರಿಕೆ ಮೂಡಿಸಿ ಅಭ್ಯಾಸ ಮಾಡಿಸಬೇಕು. ಸ್ಪರ್ಧೆಯಲ್ಲಿ ಭಾವಹಿಸುವಾಗ ಕೇವಲ ಕಂಠಪಾಠ ಮಾಡಿ ಹೇಳುವುದಕ್ಕಿಂತ ವಿಷಯದ ಅರ್ಥವನ್ನು ತಿಳಿದುಕೊಂಡು ಕಲಿತರೆ ಅಂತಹ ಮಕ್ಕಳು ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಬಲ್ಲರು. ದಿ| ಪ್ರೊ. ಸೀತಾರಾಮ ಶೆಟ್ಟಿಯವರಿಂದ ಆರಂಭಗೊಂಡ ಘೋಡ್‌ಬಂದರ್ ಶಿಬಿರವು ಈ ಪರಿಸರದ ಎಲ್ಲಾ ಕನ್ನಡಿಗರಿಂದಾಗಿ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಈ ಶಿಬಿರದಲ್ಲಿ ಇನ್ನಷ್ಟು ಹೆಚ್ಚು ಮಕ್ಕಳು ಸೇರ್ಪಡೆಯಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸು ವಂತಾಗಲಿ ಎಂದು ಹಾರೈಸಿ ಮಕ್ಕಳ ಜೊತೆ ಸಂವಾದವನ್ನು ನಡೆಸಿದರು.
Related Articles
Advertisement
ಇನ್ನೋರ್ವ ತೀಫುìಗಾರರಾದ ಸೂರಪ್ಪ ಕುಂದರ್ ಅವರು ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುತ್ತಿರುವ ಮಕ್ಕಳು ಕನ್ನಡಭಾಷೆಯಲ್ಲಿ ಹಾಡಿ, ಅಭಿನಯಿಸಿ, ಚರ್ಚಿ ಸುವುದನ್ನು ನೋಡಿ ತುಂಬಾ ಸಂತೋಷ ವಾಯಿತು. ಮಕ್ಕಳಿಗೆ ಇಂತಹ ವೇದಿಕೆಯನ್ನು ಒದಗಿಸಿ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಚಿಣ್ಣರ ಬಿಂಬ ಮತ್ತು ಅದರ ರೂವಾರಿ ಪ್ರಕಾಶ್ ಭಂಡಾರಿಯವರ ಕಾರ್ಯ ಶ್ಲಾಘನೀಯವಾದುದು. ಚಿಣ್ಣರಬಿಂಬವು ಇನ್ನಷ್ಟು ಯಶಸ್ಸನ್ನು ಪಡೆ ಯಲಿ ಎಂದು ಶುಭಕೋರಿದರು. ಉದ್ಯಮಿ ಲಕ್ಷ್ಮಣ ಮಣಿಯಾನಿ, ವಸಂತ ಸಾಲ್ಯಾನ್, ವಲಯ ಮುಖ್ಯಸ್ಥೆ ನೀತಾ ಆರ್. ಶೆಟ್ಟಿ, ಮುಖ್ಯಸ್ಥೆ ಸುಮತಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಜಯಲಕ್ಷಿ¾à ಶೆಟ್ಟಿ, ಹರೀಶ್ ಸಾಲ್ಯಾನ್, ಪ್ರಶಾಂತ್ ನಾಯಕ್, ಪ್ರತಿಭಾ ಶೆಟ್ಟಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಶಿಖಾ ಕೆ. ಆಳ್ವರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶೂಲ್ ಶೆಟ್ಟಿ ಮತ್ತು ಸಾಯಿ ನಿಶಾಂತ್ ಸಾಲ್ಯಾನ್ ಅವರು ಅತಿಥಿಗಳನ್ನು ಪರಿಚಯಿಸಿದರು. ಸುಮಲತಾ ಶೆಟ್ಟಿ ಮತ್ತು ಜಯಲಕ್ಷ್ಮೀ ಶೆಟ್ಟಿ ತೀರ್ಪುಗಾರರನ್ನು ಪರಿಚಯಿಸಿದರು. ಅನ್ಸಾ ಶೆಟ್ಟಿ, ವಿಶ್ವ ಶೆಟ್ಟಿ, ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕುಮುದಾ ಕೆ. ಆಳ್ವ, ಸುಮಲತಾ ಶೆಟ್ಟಿ, ರೂಪಾ ಪೂಜಾರಿ, ಮಾಯಾ ಮನೋಜ್, ನಿತ್ಯಾನಂದ ಬೆಳುವಾಯಿ, ಸೀತಾರಾಮ ಶೆಟ್ಟಿ, ಚಂದ್ರಕಲಾ ಬಂಗೇರ, ಶಾಲಿನಿ ಆಚಾರ್, ಅಮಿತಾ ರೈ, ಲತಾ ಶೆಟ್ಟಿ, ಜಯಶ್ರೀ ಶೆಟ್ಟಿ, ಪ್ರವೀಣ ಸಾಲ್ಯಾನ್, ಗೀತಾ, ಪ್ರವೀತಾ ಸಾಲ್ಯಾನ್, ಉಷಾ, ಸ್ವಪ್ನ ಭಟ್ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಿಬಿರ ಮುಖ್ಯಸ್ಥೆ ಸುಮತಿ ಶೆಟ್ಟಿ ವಂದಿಸಿದರು.