Advertisement
ಪ್ರತಿಭಾ ಸ್ಪರ್ಧೆಯನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಪೇಜಾವರ ಮಠದ ಮುಖ್ಯ ಪ್ರಬಂಧಕ ರಾಮದಾಸ್ ಉಪಾಧ್ಯಾಯ ಅವರು, ಮಕ್ಕಳ ಭಜನೆ ಮತ್ತು ವಿಶೇಷವಾಗಿ ಶ್ಲೋಕ ಪಠಣೆಯನ್ನು ನಿರರ್ಗಳವಾಗಿ ಹೇಳುವುದನ್ನು ಕಂಡು ಆಶ್ಚರ್ಯಚಕಿತನಾದೆ. ಈ ಸಂಸ್ಥೆ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದು, ಅದರ ಬದಲಿಗೆ ತಮ್ಮ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡುತ್ತಿರುವ ಚಿಣ್ಣರ ಬಿಂಬದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದರ ಬಗ್ಗೆ ಹೆತ್ತವರು ಮಕ್ಕಳನ್ನು ಪ್ರೇರೇಪಿಸಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಇಂತಹ ಸಂಸ್ಕಾರಯುತ ಜೀವನವನ್ನು ಕಲಿಸಿಕೊಟ್ಟಾಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
Related Articles
Advertisement
ವೇದಿಕೆಯಲ್ಲಿ ಜಗದೀಶ್ ರಾವ್, ರಮೇಶ್ ರೈ, ರೇಣುಕಾ ಪ್ರಕಾಶ್ ಭಂಡಾರಿ, ವಿಜಯ ಕೋಟ್ಯಾನ್, ಶಿಬಿರದ ಮುಖ್ಯಸ್ಥೆ ಅಶ್ವಿನಿ ಶಶಿಧರ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸುನೀತಾ ಸಂತೋಷ್ ಶೆಟ್ಟಿ, ಭಜನೆ ಶಿಕ್ಷಕಿ ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು.
ಮಕ್ಕಳಿಗೆ ಭಜನೆ, ಶ್ಲೋಕ ಪಠಣೆ, ಭಾವಗೀತೆ, ಜಾನಪದ ಗೀತೆ, ಭಾಷಣ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ತೀರ್ಪುಗಾರರಾಗಿ ಉಮೇಶ್ ಜೋಯ್ಸ ಮತ್ತು ಅರುಣ್ ಜಿ. ದಾಸಪ್ಪ ಅವರು ಸಹಕರಿಸಿದರು. ಸ್ನಿಗಾœ ಶೆಟ್ಟಿ, ಜ್ಯೋತಿ ಸುಂಕದ ಹಾಗೂ ಶ್ರೇಯಾ ಶೆಟ್ಟಿಗಾರ್ ಪ್ರಾರ್ಥನೆಗೈದರು. ಅತಿಥಿ-ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇರಾದ ಮಕ್ಕಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.
ಪವಿತ್ರಾ ದೇವಾಡಿಗ, ಸುಸಮ್ಯಾ ರಾವ್, ಗಗನ್ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ಜೀವನ್ ಗೌಡ, ಪ್ರಣವ್ ಕುಲಾಲ್, ವಿಘ್ನೇಶ್ ಪೂಜಾರಿ ಅತಿಥಿಗಳನ್ನು ಹಾಗೂ ತೀರ್ಪುಗಾರರನ್ನು ಪರಿಚಯಿಸಿದರು. ಕಾಂತಿ ಶೆಟ್ಟಿ, ಸರಳಾ ರಾವ್, ಪದ್ಮಿನಿ ಕುಂಟೂರು, ನಮಿತಾ ಆಚಾರ್ಯ, ಅಕ್ಷತಾ ಶೆಟ್ಟಿಗಾರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸುಮಿತ್ರಾ ದೇವಾಡಿಗ ವಂದಿಸಿದರು. ಮಕ್ಕಳು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.