Advertisement
ಶಿಬಿರದ ಮಕ್ಕಳ ಭಜನ ಕಾರ್ಯಕ್ರಮದೊಂದಿಗೆ ಸ್ಪರ್ಧೆಯು ಪ್ರಾರಂಭಗೊಂಡಿತು. ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಸುಪ್ರಿತಾ ಕೊಠಾರಿ ಅವರು ಸ್ವಾಗತಿಸಿದರು. ಚಿಣ್ಣರ ಬಿಂಬದ ರೂವಾರಿಗಳಲ್ಲೊಬ್ಬರಾದ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಸಾಂತಿಂಜ ಜನಾರ್ದನ ಭಟ್ ಹಾಗೂ ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿಣ್ಣರ ಬಿಂಬದ ಮಕ್ಕಳು ಪ್ರಾರ್ಥನೆಗೈದರು.
Related Articles
Advertisement
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿಯನ್ನು ಪಡೆದ ಚಿಣ್ಣರ ಬಿಂಬದ ರೂವಾರಿಗಳಲ್ಲಿ ಒಬ್ಬರಾದ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರನ್ನು ಮೀರಾರೋಡ್ ಶಿಬಿರದ ಪರವಾಗಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರು, ಚಿಣ್ಣರ ಬಿಂಬ ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುವಂತೆ ಜೀವನದ ಮೌಲ್ಯಗಳನ್ನು ಎಳವೆಯಲ್ಲಿ ತಿಳಿಸಿಕೊಡುವ ಏಕೈಕ ಸಂಸ್ಥೆಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುವ ಮಕ್ಕಳಿಗೆ ಚಿಣ್ಣರ ಬಿಂಬದ ಸಮವಸ್ತÅ ಒಂದು ಮಾದರಿಯಾಗಿದೆ. ಕನ್ನಡದ ಅಕ್ಷರದ ಉಚ್ಚಾರವನ್ನು ಹೇಗೆ ಮಾಡಬೇಕು ಎಂಬ ವಿಷಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಶಿಬಿರದ ಮಕ್ಕಳನ್ನು ಗೌರವಿಸಲಾಯಿತು. ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನಿತ್ತು ಅಭಿನಂದಿಸ ಲಾಯಿತು. ತೀರ್ಪುಗಾರರನ್ನು ಚಿಣ್ಣರ ಬಿಂಬದ ಮಕ್ಕಳು ಗೌರವಿಸಿದರು.
ಶಿಬಿರದ ವಿದ್ಯಾರ್ಥಿಗಳಾದ ಪ್ರತೀಕ್ಷಾ ಶೆಟ್ಟಿ, ದೀಕ್ಷಿತಾ ಕೊಠಾರಿ ಕಾರ್ಯಕ್ರಮ ನಿರ್ವಹಿಸಿದರು. ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪ ಸ್ಥಿತರಿದ್ದರು. ಶಾಂತಾ ಆಚಾರ್ಯ, ಆಶಾಲತಾ ಕೊಠಾರಿ, ಸುಜಾತಾ ಶೆಟ್ಟಿ, ಪೂರ್ಣಿಮಾ ಪೂಜಾರಿ, ಸುಲೋಚನಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ರೂಪಾರೇಖಾ ನಾಯಕ್, ಸುಪ್ರೀತಾ ಶೆಟ್ಟಿ, ದೀಕ್ಷಾ ಶೆಟ್ಟಿ, ಶಶಿಕಲಾ ಶೆಟ್ಟಿ, ಲಕ್ಷ್ಮೀ ಶೆಟ್ಟಿ, ಶರ್ಮಿಳಾ ಶೆಟ್ಟಿ, ಸುಪ್ರೀತಾ ಸಾಲ್ಯಾನ್, ಸುರೇಶ್ ಕೊಠಾರಿ, ಗುಣಕಾಂತ್ ಕರ್ಜೆ ಮೊದ ಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಿಬಿರದ ಮುಖ್ಯಸ್ಥೆ ಸುಕನ್ಯಾ ಶೆಟ್ಟಿ ವಂದಿಸಿದರು. ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.