Advertisement

ಚಿಣ್ಣರ ಬಿಂಬ: ಮಕ್ಕಳ ಸಾಂಸ್ಕೃತಿಕ ಉತ್ಸವ 2017ಕ್ಕೆ ಚಾಲನೆ 

03:23 PM Nov 21, 2017 | Team Udayavani |

ಮುಂಬಯಿ: ಕರ್ಮಭೂಮಿ ಮತ್ತು ಮಾತೃಭೂಮಿಯ ವಿಕಸನಕ್ಕೆ ನಾವೆಲ್ಲರೂ ಪ್ರಯತ್ನಿಸ ಬೇಕು. ಅಂತಹ ಭಾಷಾಭಿಮಾನವನ್ನು ಹುಟ್ಟಿಸುವ ಕಾರ್ಯ ಪ್ರಕಾಶ್‌ ಭಂಡಾರಿ ಅವರ ನೇತೃತ್ವದ ಚಿಣ್ಣರ ಬಿಂಬ ಮಾಡುತ್ತಿದೆ. ಜೊತೆಗೆನೆ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವ ಕೆಲಸ ಪಾಲಕರದ್ದೂ ಆಗಿರುತ್ತದೆ. ಪಾಲಕರು ತಮ್ಮ ಕರ್ತವ್ಯದಿಂದ ಎಂದೂ ವಿಮುಖರಾಗಬಾರದು ಎಂದು ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ  ಅವರು ನುಡಿದರು. 

Advertisement

ಕಲ್ಯಾಣ್‌ನ ಮಾತೋಶ್ರೀ ಸಭಾಗೃಹದಲ್ಲಿ ಚಿಣ್ಣರ ಬಿಂಬ ಕಲ್ಯಾಣ್‌- ಡೊಂಬಿವಲಿ- ಭಿವಂಡಿ ಶಾಖೆಗಳ ಮಕ್ಕಳ ಸಾಂಸ್ಕೃತಿಕ ಉತ್ಸವ 2017 ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಣ್ಣರ ಬಿಂಬವು ಕಳೆದ ಹದಿನೈದು ವರ್ಷಗಳಿಂದ ಮಾಡುತ್ತಿರುವ ಸಾಂಸ್ಕೃತಿಕ ಆರಾಧನೆ ಮೆಚ್ಚುವಂತದ್ದು. ಇಂತಹ ಮಹಾನ್‌ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳು ಧನ್ಯರು. ಚಿಣ್ಣರ ಬಿಂಬದ ನಾಡು-ನುಡಿ ಸೇವೆಗೆ ಡೊಂಬಿವಲಿ ಕರ್ನಾಟಕ ಸಂಘದ ಪ್ರೋತ್ಸಾಹ ಸದಾಯಿದೆ. ತುಳು- ಕನ್ನಡಿಗರ ಮಕ್ಕಳು ಹೆಚ್ಚು ಹೆಚ್ಚಾಗಿ ಸಂಸ್ಥೆಯಲ್ಲಿ ಸೇರಿಕೊಂಡು ಸಂಸ್ಕಾರವಂತರಾಗಿ ಬೆಳೆದು ಭಾಷಾಭಿಮಾನವನ್ನು ಬೆಳೆಸಿಕೊಳ್ಳುವಂತಾಗಲಿ ಎಂದು ಹೇಳಿದರು. 

ಗೌರವ ಅತಿಥಿಗಳಾಗಿ ಹೊಟೇಲ್‌ ಉದ್ಯಮಿ ಕಲ್ಲಡ್ಕ ಕರುಣಾಕರ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್‌ ಭಂಡಾರಿ, ಹೊಟೇಲ್‌ ಉದ್ಯಮಿಗಳಾದ ವೇಣುಗೋಪಾಲ್‌ ರೈ, ವಿಜೀತ್‌ ಶೆಟ್ಟಿ, ತುಕರಾಮ್‌ ರೈ, ಚಿಣ್ಣರ ಬಿಂಬದ ರೂವಾರಿಗಳಾದ ಸುರೇಂದ್ರ ಕುಮಾರ್‌ ಹೆಗ್ಡೆ, ಕಾರ್ಯನಿರ್ವಾಹಕ ಸತೀಶ್‌ ಸಾಲ್ಯಾನ್‌, ಶಿಕ್ಷಕ ಮೇಘರಾಜ್‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸರಕಾರ ಮಾಡದೇ ಇರುವ ಕಾರ್ಯವನ್ನು ಚಿಣ್ಣರ ಬಿಂಬ ಮಾಡುತ್ತಿದೆ  ಅತಿಥಿ ಕಲ್ಲಡ್ಕ ಕರುಣಾಕರ ಶೆಟ್ಟಿ ಅವರು ಮಾತನಾಡಿ, ಒಂದು ಸರಕಾರ ಮಾಡದೇ ಇರುವ ಕಾರ್ಯವನ್ನು ಚಿಣ್ಣರ ಬಿಂಬ ಮಾಡುತ್ತಿದೆ. ನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ಸಂಪ್ರದಾಯಗಳು ಚಿಣ್ಣರ ಬಿಂಬದ ಮಕ್ಕಳಿಂದ ತಿಳಿಯಬಹುದು. ಈ ಕಾರ್ಯಕ್ಕೆ ನಾವೆಲ್ಲರೂ ಸದಾ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು. 

ಅತಿಥಿಗಳನ್ನು ಶ್ರದ್ಧಾ ಬಂಗೇರ, ಶ್ರೀ ರಕ್ಷಾ ಹೆಗ್ಡೆ ಅವರು ಪರಿಚಯಿಸಿದರು. ಥಾಣೆ ಶಿಬಿರದ ವಿದ್ಯಾರ್ಥಿನಿ ಕೀರ್ತಿ ಹರೀಶ್‌ ಅವರು ಪ್ರಾರ್ಥನೆಗೈದು ಪ್ರಾಸ್ತಾವಿಕವಾಗಿ ನುಡಿದರು. ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಚಿಣ್ಣರ ಬಿಂಬದ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ರವಿ ಹೆಗ್ಡೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಆನಂತರ ಮಕ್ಕಳಿಗೆ ಛದ್ಮವೇಷ, ಭಾಷಣ, ಸಂಗೀತ, ಏಕಪಾತ್ರಾಭಿನಯ, ಪಾಲಕರಿಗೆ ಚರ್ಚಾ ಕಾರ್ಯಕ್ರಮ ನಡೆಯಿತು. 

Advertisement

ಡೊಂಬಿವಲಿ ಶಿಬಿರದ ಮುಖ್ಯಸ್ಥೆಯರಾದ ಮಂಜುಳಾ ಎಸ್‌. ಶೆಟ್ಟಿ, ಶಿಕ್ಷಕಿ ಸಂಧ್ಯಾ ಜೈನ್‌, ದೀಪಾ ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆಯರಾದ ಶಾಂತಾ ಅಮೀನ್‌, ಸುನೀತಾ ಶೆಟ್ಟಿ, ಶಶಿ ಶೆಟ್ಟಿ, ಕಲ್ಯಾಣ್‌ ಶಿಬಿರದ ಮುಖ್ಯಸ್ಥೆ ರೇಖಾ ಆಚಾರ್ಯ, ಶಿಕ್ಷಕಿ ಮಂಗಳಾ ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆ ಶುಭಲಕ್ಷಿ³à ಕೊಪ್ಪಲ್‌, ಭಜನ ಮುಖ್ಯಸ್ಥೆ ಆಶಾ ನಾಯ್ಕ, ವಿಭಾಗದ ಮುಖ್ಯಸ್ಥರಾದ ಗೋಪಾಲ್‌ ಶೆಟ್ಟಿ, ಸವಿತಾ ಶೆಟ್ಟಿ, ಕಾರ್ಯಕತೆರ್ಯರಾದ ಗೌರಿ ಶೆಟ್ಟಿ, ಆಶಾ ಶೆಟ್ಟಿ, ಸುಧೀರ್‌ ಭಂಡಾರಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಚಿಣ್ಣರಲ್ಲಿ ನಾಗರೀಕತೆ ರೂಪಿಸುವಲ್ಲಿ ತಾಯ್ನಾಡ ಭಾಷೆಯ ಪಾತ್ರ ಮಹತ್ತರವಾದುದು. ಇಂತಹ ಕಾರ್ಯವನ್ನು ಚಿಣ್ಣರ ಬಿಂಬ ಮಾಡುತ್ತಿರುವುದು ಅಭಿನಂದನೀಯ. ಈ ಸಂಸ್ಥೆಯ ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಪ್ರೋತ್ಸಾಹ, ಸಹಕಾರವಿರಲಿ. ಪ್ರತಿಯೋರ್ವ ತನ್ನ ಭಾಷೆ ಮತ್ತು ಸಂಸ್ಕೃತಿಯ ಮೇಲೆ ವ್ಯಾಮೋಹವನ್ನು ಹೊಂದಿರಬೇಕು. ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚಾರ -ವಿಚಾರಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವ ಕೆಲಸವನ್ನು ಚಿಣ್ಣರ ಬಿಂಬ ಮಾಡುತ್ತಿದೆ. ಇಂತಹ ಉತ್ತಮ ಉದ್ಧೇಶವನ್ನು ಹೊಂದಿರುವ ಸಂಸ್ಥೆ ನನ್ನ ಬೆಂಬಲ, ಸಹಕಾರ ಸದಾಯಿದೆ 
– ಗುರುದೇವ್‌ ಭಾಸ್ಕರ್‌ ಶೆಟ್ಟಿ (ಹೊಟೇಲ್‌ ಉದ್ಯಮಿ). 

ನಾಡು-ನುಡಿಯ ಅಂದ-ಚಂದ ಮಕ್ಕಳಲ್ಲಿ ಕಾಣುವಾಗ ಮನಸ್ಸಿಗೆ ಬಹಳಷ್ಟು ಸಂತೋಷವಾಗುತ್ತಿದೆ. ಇಂತಹ ಒಂದು ಉತ್ತಮ ಕಾರ್ಯದಲ್ಲಿ ತೊಡಗಿರುವ ಪ್ರಕಾಶ್‌ ಭಂಡಾರಿ ಮತ್ತು ಅವರ ತಂಡದ ಕಾರ್ಯ ಅಭಿನಂದನೀಯವಾಗಿದೆ. ಇಂತಹ ಒಂದು ವ್ಯವಸ್ಥಿತವಾದ ಸಂಸ್ಥೆ ನಾವು ಸಣ್ಣವರಿದ್ದಾಗ ಇರಲಿಲ್ಲ. ಆದ್ದರಿಂದ ನಮ್ಮ ಮಕ್ಕಳನ್ನು ಈ ಸಂಸ್ಥೆಗೆ ಕಳುಹಿಸಿ ನಾಡಿನ ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಮಿಳಿತಗೊಳ್ಳುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ 
– ರಾಜೀವ ಭಂಡಾರಿ (ಕಾರ್ಯಾಧ್ಯಕ್ಷರು : ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ). 

Advertisement

Udayavani is now on Telegram. Click here to join our channel and stay updated with the latest news.

Next