Advertisement

ಚನ್ನಮ್ಮನ ಕಿತ್ತೂರು ರಾಷ್ಟ್ರೀಯ ಸ್ಮಾರಕವಾಗಲಿ

04:35 PM Jun 07, 2018 | |

ಹುಬ್ಬಳ್ಳಿ: ಚನ್ನಮ್ಮನ ಕಿತ್ತೂರನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಹರಿಹರದಿಂದ ಕಿತ್ತೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ
ಸ್ವಾಮೀಜಿ ತಿಳಿಸಿದರು.

Advertisement

ಪಾದಯಾತ್ರೆ ಮೂಲಕ ಹುಬ್ಬಳ್ಳಿಗೆ ಬಂದ ಸಂದರ್ಭದಲ್ಲಿ ಮೂರುಸಾವಿರಮಠದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಮ್ಮ ಸ್ವಾತಂತ್ರ್ಯ ಹೋರಾಟದ ಮೊದಲ ಹೋರಾಟಗಾರ್ತಿ ಎಂದು ಘೋಷಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಮೇ 31ರಿಂದ ಪಾದಯಾತ್ರೆ ಆರಂಭಗೊಂಡಿದ್ದು, ಜೂನ್‌ 10ರಂದು ಕಿತ್ತೂರಿನಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಾಧೀಶರು, ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದು, ಪಾದಯಾತ್ರೆಗೆ ಎಲ್ಲೆಡೆ ಜನರು ಹೃದಯಪೂರ್ವಕ ಸ್ವಾಗತ ನೀಡುತ್ತಿದ್ದಾರೆ ಎಂದರು. 

ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಪಂಚಮಸಾಲಿ ಪೀಠಗಳ ವಿಲೀನದ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ನನಗೆ ಸಮಯ ಬೇಕು. ನಾನು ಸಂಕಲನ ಮಾಡಲು ಬಂದಿದ್ದೇನೆಯೇ ಹೊರತು ವ್ಯವಕಲನ ಮಾಡಲು ಬಂದಿಲ್ಲ. ಪೀಠವನ್ನು ಅಧ್ಯಾತ್ಮಿಕ ಕೇಂದ್ರವನ್ನಾಗಿ ಬೆಳೆಸುವುದು ನನ್ನ ಹೆಬ್ಬಯಕೆಯಾಗಿದೆ ಎಂದು ತಿಳಿಸಿದರು.

ಯೋಗ ದಿನದ ವಿಶೇಷ: ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶೇಷವಾಗಿ ಆಚರಿಸಲಾಗುವುದು. ಜೂನ್‌ 21ರಂದು ಬೆಳಗ್ಗೆ ಬೆಳಗ್ಗೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯ ಅತಿಥಿಯಾಗಿ ಶತಾಯುಷಿ ಅಮ್ಮಾ ನಾನಂಬಳ್‌ ಪಾಲ್ಗೊಳ್ಳುವರು. ಅದೇ ದಿನ ಸಂಜೆ ಹರಿಹರದ ಪೀಠದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

Advertisement

ಜೂನ್‌ 20ರಂದು ಸಂಜೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯೋಗ ಪಟುಗಳಾದ ಕೂಡೋ, ಇಸ್ರೋ ಮಾಜಿ ಮುಖ್ಯಸ್ಥ ಎ.ಎಸ್‌.ಕಿರಣಕುಮಾರ, ಅರ್ಜೆಂಟಿನಾದ ವಿಕ್ಟರ್‌ ಟ್ರಾವಿಯಾನೊ ಅವರಿಗೆ ಯೋಗರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ
ನೀಡಲು ಡಾ| ಪ್ರಕಾಶ ಆಮ್ಟೆ, ಸಿಂಧೂತಾಯಿ ಸತ್ಕಾಳ, ಓಂಸ್ವಾಮಿ ಬರಲಿದ್ದಾರೆ ಎಂದರು.

ಯೋಗದ ವ್ಯಾಪ್ತಿ ಹೆಚ್ಚುತ್ತಿದೆ. ವಿಶ್ವದ 196 ದೇಶಗಳಲ್ಲಿ ಯೋಗ ಮಾಡುತ್ತಿರುವುದು ಯೋಗದ ಮಹತ್ವ ತಿಳಿಸುತ್ತದೆ. ನಾನು ಪ್ರಪಂಚದ 80 ದೇಶಗಳಿಗೆ ಭೇಟಿ ನೀಡಿ ಯೋಗ ತರಬೇತಿ ನೀಡಿದ್ದೇನೆ ಎಂದು ನುಡಿದರು

ಉಕ ಅಭಿವೃದ್ಧಿಗೆ ಒತ್ತು ನೀಡಲಿ
ರಾಜ್ಯ ರಾಜಕೀಯ ಸ್ಥಿತಿಗತಿ ಬಗ್ಗೆ ಹೆಚ್ಚಿಗೆ ಏನೂ ಹೇಳ ಬಯಸುವುದಿಲ್ಲ. ಉತ್ತರ ಕರ್ನಾಟಕ ಹಿಂದುಳಿದಿರುವುದರಿಂದ ಅಧಿಕಾರದಲ್ಲಿದ್ದವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು ಎಂದು ಶ್ರೀ ವಚನಾನಂದ ಸ್ವಾಮೀಜಿ
ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next