Advertisement

ಕೆಲಸ ಕಳೆದುಕೊಂಡ ಚೀನಿ ಮಹಿಳಾ ಗಗನಯಾತ್ರಿಗೆ 3 ಆಫ‌ರ್‌

12:36 AM Dec 12, 2022 | Team Udayavani |

ವಯಸ್ಸಿನ ಕಾರಣದಿಂದ ಕೆಲಸ ಕಳೆದುಕೊಂಡ 50 ವರ್ಷದ ಚೀನಿ ಮಹಿಳಾ ಗಗನಯಾತ್ರಿಗೆ ಅಚ್ಚರಿ ಎಂಬಂತೆ ಮೂರು ಸಾಗರೋತ್ತರ ಏರ್‌ಲೈನ್ಸ್‌ಗಳಲ್ಲಿ ಉದ್ಯೋಗ ದೊರೆತಿದೆ.

Advertisement

ಹು ಉಪನಾಮದ ಮಹಿಳೆಯು ನಾರ್ವೆಯ ಏರ್‌ಲೈನ್ಸ್‌ನಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಉದ್ಯೋಗ ಕಳೆದುಕೊಂಡ ಕೂಡಲೇ ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುವುದನ್ನು ಕಲಿತುಕೊಂಡರು. ಜತೆಗೆ ಫಿನ್ನಿಶ್‌ ಭಾಷೆ ಕಲಿತರು.

ಚೀನ ಏರ್‌ಲೈನ್ಸ್‌ನಲ್ಲಿ 40 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುವುದಿಲ್ಲ.

ಹೀಗಾಗಿ ಅವರು ಅಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲಿಲ್ಲ.ಕೆಲಸ ಕಳೆದುಕೊಂಡ ಮಹಿಳೆಗೆ ಮೂರು ಹೊಸ ಉದ್ಯೋಗಗಳು ಕೈಬೀಸಿ ಕರೆಯುತ್ತಿರುವ ಇವರ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next