Advertisement

China: ಅಕ್ಸಾಯಿ ಚಿನ್‌ನಲ್ಲಿ ಚೀನ ಕಳ್ಳ ಸುರಂಗ

11:43 PM Aug 30, 2023 | Team Udayavani |

ಹೊಸದಿಲ್ಲಿ: ದೇಶದ ಅವಿಭಾಜ್ಯ ಅಂಗವಾಗಿ ರುವ ಅರುಣಾಚಲ ಪ್ರದೇಶವನ್ನು ತನಗೆ ಸೇರಿದ್ದು ಎಂದು ನಕ್ಷೆ ಪ್ರಕಟಿಸಿದ ಕಪಟಿ ಚೀನ, ಮತ್ತೂಂದು ದುಸ್ಸಾಹಸ ಪ್ರದರ್ಶಿ ಸಿದೆ. ಭಾರತಕ್ಕೆ ಬಹುತೇಕ ಸೇರಿರುವ ಅಕ್ಸಾಯಿ ಚಿನ್‌ನಲ್ಲಿ ರಹಸ್ಯವಾಗಿ ಸುರಂಗ ಮಾರ್ಗ ನಿರ್ಮಾಣ ಮಾಡುತ್ತಿರುವ ಬಗ್ಗೆ ಉಪಗ್ರಹ ಛಾಯಾಚಿತ್ರಗಳು ಮತ್ತು ಮಾಹಿತಿ ಗಳಿಂದ ದೃಢಪಟ್ಟಿದೆ. ಅಲ್ಲಿ ಯೋಧರಿಗೆ ನಿಲ್ಲಲು ಮತ್ತು ಭಾರೀ ಪ್ರಮಾಣ ದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಮಾಡುವ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದೂ ದೃಢಪಟ್ಟಿದೆ.

Advertisement

ಪೂರ್ವ ಲಡಾಖ್‌ನ ದೆಪ್ಸಾಂಗ್‌ ತಪ್ಪಲು ಪ್ರದೇಶದಿಂದ 60 ಕಿ.ಮೀ. ಉತ್ತರದಲ್ಲಿರುವ ನದಿಯ ಸಮೀಪ ಈ ರಹಸ್ಯ ಸುರಂಗ ಮತ್ತು ಬಂಕರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಟ್ಟು ಹನ್ನೊಂದು ಸ್ಥಳಗಳಲ್ಲಿ ಇಂಥ ಸುರಂಗ ಮತ್ತು ಬಂಕರ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ನದಿಯ ಎರಡೂ ಕಿನಾರೆಗಳಲ್ಲಿ ನಿರ್ಮಾಣ ಕಾರ್ಯ ಶುರುವಾಗಿದೆ. ರಕ್ಷಣ ಕ್ಷೇತ್ರದ ವಿಶೇಷ ತಜ್ಞರ ಪ್ರಕಾರ ಭಾರತೀಯ ಸೇನೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳಿಂದ ಹತಾಶೆಗೊಂಡ ಚೀನ ಇಂಥ ಕ್ರಮ ಕೈಗೊಂಡಿದೆ.

ಭಾರತೀಯ ವಾಯುಪಡೆ ಕೂಡ ಲಡಾಖ್‌ನಲ್ಲಿ ತನ್ನ ನೆಲೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ನ್ಯೋಮಾ ಎಂಬಲ್ಲಿ ಇರುವ ವಿಮಾನ ಇಳಿದಾಣ ಪ್ರದೇಶವನ್ನು ಅತ್ಯಾಧುನಿಕ ಗೊಳಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣ ವಿಶ್ಲೇಷಕ ಸ್ಯಾಮ್‌ ಟ್ರಿಕ್‌ “ಲಡಾಖ್‌ನಲ್ಲಿ ಭಾರತೀಯ ಸೇನೆ ನಡೆಸಲಿರುವ ಸಂಭಾವ್ಯ ದಾಳಿ ತಡೆಯುವ ನಿಟ್ಟಿನಲ್ಲಿ ಇಂಥ ಸಾಹಸ’ ಎಂದು ಹೇಳಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಕೂಡ ಲಡಾಖ್‌ ಪ್ರದೇಶದಲ್ಲಿ ಭಾರೀ ಪ್ರಮಾಣದ ಸೇನಾ ನಿಯೋಜನೆ ಮತ್ತು ಶಸ್ತ್ರಾಸ್ತ್ರ ಸಂಗ್ರಹಣೆಯನ್ನೂ ಮಾಡಿತ್ತು.

ಸಾಮಾನ್ಯ ಕ್ರಮವಂತೆ!: ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ತನ್ನ ನಕ್ಷೆಗೆ ಸೇರಿಸಿದ್ದನ್ನು ಚೀನ ತಣ್ಣಗೆ ಸಮರ್ಥಿಸಿಕೊಂಡಿದೆ. ಮಂಗಳವಾರ ಕೇಂದ್ರ ಸರಕಾರ ಚೀನ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಿಸಿಕೊಂಡು ನಕ್ಷೆಗೆ ಆಕ್ಷೇಪ ಮಾಡಿತ್ತು. ಅದಕ್ಕೆ ಬುಧವಾರ ಬೀಜಿಂಗ್‌ನಲ್ಲಿ ಪ್ರತಿಕ್ರಿಯೆ ನೀಡಿದ ಚೀನ ವಿದೇಶಾಂಗ ಸಚಿವಾಲಯದ ವಕ್ತಾರರು, ನಕ್ಷೆ ಬಿಡುಗಡೆ ಮಾಡುವ ಪ್ರಕ್ರಿಯೆ ಹೊಸತೇನೂ ಅಲ್ಲ. ಇವೆಲ್ಲ ಮಾಮೂಲಿ ಪ್ರಕ್ರಿಯೆ ಎಂದು ನಿರ್ಲಕ್ಷ್ಯದ ಉತ್ತರ ನೀಡಿದೆ.

ಕಾಂಗ್ರೆಸ್‌-ಚೀನ ನಡುವೆ ಒಪ್ಪಂದ ಆಗಿದೆಯಾ?
ಹೊಸದಿಲ್ಲಿ: ಲಡಾಖ್‌ನ ಹೆಚ್ಚಿನ ಪ್ರದೇಶವನ್ನು ಚೀನ ಅತಿಕ್ರಮಿಸಿಕೊಂಡಿದೆ ಎಂಬ ವಯನಾಡ್‌ ಸಂಸದ ರಾಹುಲ್‌ ಗಾಂಧಿಯವರ ಹೇಳಿಕೆ ಪೂರ್ಣ ಸುಳ್ಳು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಟೀಕಿಸಿದ್ದಾರೆ. ಹೊಸದಿಲ್ಲಿ ಯಲ್ಲಿ ಮಾತನಾಡಿದ ಅವರು, “ನಮ್ಮ ದೇಶದ ನೆಲವನ್ನು ಚೀನ ಅತಿ ಕ್ರಮಿಸಿದ್ದು ಜವಾಹರ್‌ಲಾಲ್‌ ನೆಹರೂ ಕಾಲದಲ್ಲಿ ಎಂಬ ವಿಚಾರ ವನ್ನು ರಾಹುಲ್‌ ಗಾಂಧಿ ತಿಳಿದ ು ಕೊಳ್ಳಲಿ. ಅನಂತರ ಆ ಪ್ರದೇಶದಲ್ಲಿ ಚೀನ ತನ್ನ ಕುತ್ಸಿತ ಚಟುವಟಿಕೆಗಳನ್ನು ನಡೆಸುತ್ತಿತ್ತು. ಚೀನ ನಮ್ಮ ದೇಶದ ನೆರೆಯ ರಾಷ್ಟ್ರ ವಾಗಿ ರುವುದು ಮತ್ತು ಸ್ವಾತಂತ್ರಾéನಂತರ ಕಾಂಗ್ರೆಸ್‌ ನಡೆಸಿದ ಪಾಪವೇ ಹಾಲಿ ಸಮಸ್ಯೆಗೆ ಕಾರಣ. ಟಿಬೆಟ್‌ ವಿಚಾರದಿಂದ ಶುರುವಾಗಿ ಇದುವರೆಗೆ ಅವರು ಇದೇ ನಿಲುವನ್ನೇ ಅನುಸರಿಸಿದರು’ ಎಂದು ಆರೋಪಿಸಿದರು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಿಗೆ ನೀತಿ ನಿಯಮಗಳ ಅರಿವೇ ಇಲ್ಲ ಎಂದರು ಸಚಿವ ಜೋಶಿ.

Advertisement

ಒಪ್ಪಂದ ಮಾಡಿಕೊಂಡಿವೆಯೇ?: ದೇಶದ ರಕ್ಷಣ ಪಡೆಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾತನಾಡುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಚೀನದ ಕಮ್ಯೂನಿಸ್ಟ್‌ ಪಾರ್ಟಿ ನಡುವೆ 2008ರಲ್ಲಿ ಒಪ್ಪಂದ ವಾಗಿ ದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ. ಅದರಲ್ಲಿ ದೇಶದ ಹಿತಾಸಕ್ತಿಗೆ ವಿರುದ್ಧ ವಾಗಿ ಕೆಲಸ ಮಾಡುವಂಥ ಅಂಶಗಳಿ ವೆಯೇ ಎಂದು ಪಕ್ಷದ ವಕ್ತಾರ ಗೌರವ್‌ ಭಾಟಿಯಾ ಪ್ರಶ್ನೆ ಮಾಡಿದ್ದಾರೆ. ನೆಹರೂ ಪ್ರಧಾನಿ ಯಾಗಿದ್ದಾಗ ಚೀನ ಸೇನೆ ದೇಶದ 43 ಸಾವಿರ ಚದರ ಕಿ.ಮೀ. ಪ್ರದೇಶವನ್ನು ವಶಪಡಿಸಿಕೊಂಡಿತು. ರಾಹುಲ್‌ ಗಾಂಧಿ ಯವರು ಈ ವಿಚಾರಕ್ಕೆ ಸಂಬಂಧಿ ಸಿದಂತೆ ನೆಹರೂ ಅವರನ್ನು ದೇಶ ದ್ರೋಹಿ ಎಂದು ಪರಿಗಣಿಸುವರೇ ಎಂದು ಪ್ರಶ್ನಿಸಿದರು.

2008ರಲ್ಲಿ ಕಾಂಗ್ರೆಸ್‌ ಮತ್ತು ಚೀನದ ಕಮ್ಯೂನಿಸ್ಟ್‌ ಪಕ್ಷದ ನಡುವೆ ಆಗಿರುವ ಒಪ್ಪಂದದ ಬಗ್ಗೆ ನಾಯಕರು ವಿವರಗಳನ್ನು ಬಹಿರಂಗಪಡಿಸಲಿ. ಒಪ್ಪಂದದಲ್ಲಿ ರಾಹುಲ್‌ ಅವರು ದೇಶದ ವಿರುದ್ಧ ಗೂಢಚರ್ಯೆ ಮಾಡುವ‌ ಮತ್ತು ಯೋಧರ ಸ್ಥೈರ್ಯ ಕುಗ್ಗಿಸುವಂತೆ ಮಾತನಾಡುವಂತೆ ಮಾಡುವ ಅಂಶ ಒಳಗೊಂಡಿರಬಹುದು. ಜತೆಗೆ ದೇಶದ ಪ್ರಧಾನಿಯನ್ನು ಅವಹೇಳನ ಮಾಡುವ ವಿಚಾರವೂ ಇದೆಯೇ ಎಂದು ಭಾಟಿಯಾ ಪ್ರಶ್ನೆ ಮಾಡಿದ್ದಾರೆ.

ಚೀನ ಹಿಡಿತ ಇಡೀ ಲಡಾಖ್‌ಗೆ ಗೊತ್ತಿದೆ: ರಾಹುಲ್‌
ಅರುಣಾಚಲ ಪ್ರದೇಶ ಚೀನ ವ್ಯಾಪ್ತಿಗೆ ಸೇರಿದ ಬಗ್ಗೆ ನಕ್ಷೆ ಬಿಡುಗಡೆ ಮಾಡಿರುವ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕು ಎಂದು ವಯನಾಡ್‌ ಸಂಸದ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಲಡಾಖ್‌ನಲ್ಲಿ ಒಂದು ಇಂಚು ನೆಲವನ್ನೂ ಚೀನ ಅತಿಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ಹೇಳುತ್ತಿರುವುದೆಲ್ಲ ಸುಳ್ಳು. ಅಲ್ಲಿನ ಪ್ರದೇಶ ಚೀನ ವಶದಲ್ಲಿರುವುದು ಲಡಾಖ್‌ನ ಎಲ್ಲರಿಗೂ ಗೊತ್ತು. ಮ್ಯಾಪ್‌ ವಿಚಾರ ನಿಜಕ್ಕೂ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಪ್ರತಿಕ್ರಿಯೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next