ನವದೆಹಲಿ: ಭಾರತೀಯ ಗ್ರಾಮಸ್ಥರು ದಲೈ ಲಾಮಾ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಚೀನಾದ ಸೈನಿಕರು ಮತ್ತು ಕೆಲವು ನಾಗರಿಕರು ಲಡಾಖ್ ನ ಡೆಮ್ ಚುಕ್ ಪ್ರದೇಶದ ಸಿಂಧು ನದಿ ಪ್ರದೇಶದ ಬಳಿ ಬಂದು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ಜುಲೈ 6ರಂದು ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Watch: ಧರ್ಮಶಾಲಾದಲ್ಲಿ ಭಾರೀ ಮಳೆ, ಪ್ರವಾಹ ಪರಿಸ್ಥಿತಿ; ಕೊಚ್ಚಿಹೋದ ಕಾರುಗಳು
ಗಡಿ ಪ್ರದೇಶದ ಗ್ರಾಮದಲ್ಲಿ ದಲೈ ಲಾಲಾ ಅವರು ಜನ್ಮದಿನವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಚೀನಾದ ಸೈನಿಕರು ಮತ್ತು ಸ್ಥಳೀಯರನ್ನೊಳಗೊಂಡ ಐದು ವಾಹನಗಳಲ್ಲಿ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ದಲೈ ಲಾಮಾ ಅವರ 86ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಕೋರಿದ್ದರು. 2014ರಲ್ಲಿ ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ದಲೈ ಲಾಮಾ ಅವರ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.
86ನೇ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ದೂರವಾಣಿ ಕರೆ ಮೂಲಕ ದಲೈ ಲಾಮಾ ಅವರಿಗೆ ಶುಭಾಶಯ ಕೋರಿದ್ದು, ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮೋದಿ ಟ್ವೀಟ್ ಮಾಡಿದ್ದರು. ಭಾರತ ಮತ್ತು ಚೀನಾ ನಡುವೆ ಕಳೆದ ವರ್ಷ ಏಪ್ರಿಲ್-ಮೇ ತಿಂಗಳಿನಿಂದ ಬಿಕ್ಕಟ್ಟು ಆರಂಭವಾಗಿತ್ತು.