Advertisement
ಹೌದು.. ದಿನಬೆಳಗಾದರೆ ಕೋತಿಗಳ ಹಾವಳಿಯಿಂದ ಹೈರಾಣಾಗಿದ್ದ ಕೇರಳ-ತಮಿಳುನಾಡು ಗಡಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೋತಿಗಳ ಹಾವಳಿ ತಡೆಗೆ ಹೊಸ ಮಾರ್ಗವೊಂದನ್ನು ಕಂಡುಹಿಡಿದಿದ್ದಾರೆ ಅದು ಚೀನಾದ ಹಾವುಗಳು. ಅದರಂತೆ ಪೊಲೀಸ್ ಠಾಣೆಯ ಸುತ್ತ ಚೀನಾ ಹಾವುಗಳನ್ನು ಬಿಟ್ಟಿದ್ದಾರೆ. ಅರೆ.. ಇದೇನಿದು ಕೋತಿಗಳಿಗಿಂತ ಹಾವುಗಳೇ ಹೆಚ್ಚು ಅಪಾಯಕಾರಿ ಅಂತದರಲ್ಲಿ ಠಾಣೆಯ ಸುತ್ತ ಹಾವುಗಳನ್ನು ಬಿಟ್ಟು ಜೇವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರಾ ಎಂದು ಅಂದುಕೊಳ್ಳಬೇಡಿ, ಇದು ನಿಜ ಹಾವಲ್ಲ ಬದಲಾಗಿ ಚೀನಾ ಹಾವನ್ನೇ ಹೋಲುವ ಪ್ಲಾಸ್ಟಿಕ್ ಹಾವುಗಳು.
ಕೋತಿಗಳ ತೊಂದರೆ ಇದ್ದ ಪ್ರದೇಶದಲ್ಲಿ ಈಗ ಪ್ಲಾಸ್ಟಿಕ್ ಹಾವುಗಳ ಕಾರುಬಾರು ಜೋರಾಗಿದೆ ಹಾಗಾಗಿ ಅಲ್ಲಿನ ಕೆಲವು ಜನರು ಪ್ಲಾಸ್ಟಿಕ್ ಹಾವುಗಳ ಮಾರಾಟ ಮಾಡುವ ವ್ಯಾಪಾರವನ್ನೇ ಮಾಡಿಕೊಂಡಿದ್ದಾರಂತೆ.
Related Articles
Advertisement