ಹೊಸದಿಲ್ಲಿ: ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಆಕಾಶದಲ್ಲಿ ಜ್ವಲಂತ ಬೆಳಕಿನ ಗೆರೆ ಕಂಡುಬಂದಿದೆ. ಮೊದಲು ಇದನ್ನು ಉಲ್ಕಾಪಾತ ಎಂದು ಭಾವಿಸಲಾಗಿತ್ತು. ಆದರೆ ಉಲ್ಕಾಪಾತದಂತೆ ಕಾಣಿಸಿಕೊಂಡ ಗೆರೆಯು ಚೀನಾದ ರಾಕೆಟ್ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸಿದ ಅವಶೇಷವಾಗಿದೆ ಎಂದು ಯುಎಸ್ ವಿಜ್ಞಾನಿಗಳು ತಿಳಿಸಿದ್ದಾರೆ.
ಫೆಬ್ರವರಿ 2021 ರಲ್ಲಿ ಉಡಾವಣೆಯಾದ ಚೀನಾದ ಚಾಂಗ್ ಝೆಂಗ್ 5 ಬಿ ರಾಕೆಟ್ ಶನಿವಾರ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದೆ. ಇವು ಭಾರತದ ಮೇಲೆ ಆಕಾಶದಲ್ಲಿ ಸುಟ್ಟುಹೋಯಿತು. ರಾಕೆಟ್‌ನಿಂದ ಹೆಚ್ಚಿನ ಅವಶೇಷಗಳು ಮರು-ಪ್ರವೇಶದಲ್ಲಿ ಸುಟ್ಟುಹೋಗುತ್ತವೆ ಮತ್ತು ಯಾವುದೇ ಹಾನಿ ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
“ಇದು ಚೀನೀ ರಾಕೆಟ್ ಹಂತದ ಮರುಪ್ರವೇಶವಾಗಿದೆ ಎಂದು ನಾನು ನಂಬುತ್ತೇನೆ, ಫೆಬ್ರವರಿ 2021 ರಲ್ಲಿ ಪ್ರಾರಂಭಿಸಲಾದ ಚಾಂಗ್ ಝೆಂಗ್ 3B ಸರಣಿ ಸಂಖ್ಯೆ Y77 ನ ಮೂರನೇ ಹಂತ” ಎಂದು ಮಸಾಚುಸೆಟ್ಸ್‌ನ ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್ ನ ಮೆಕ್‌ಡೊವೆಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಯವರು ದುರಹಂಕಾರಿಗಳು; ನಮಗೆ ಒಂದು ಅವಕಾಶ ನೀಡಿ: ಗುಜರಾತ್ ನಲ್ಲಿ ಕೇಜ್ರಿವಾಲ್
ಮಹಾರಾಷ್ಟ್ರದ ನಾಗ್ಪುರ ಮತ್ತು ಮಧ್ಯಪ್ರದೇಶದ ಝಬುವಾ, ಬರ್ವಾನಿ ಜಿಲ್ಲೆಗಳಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಉಲ್ಕೆಗಳ ರೀತಿ ರಾತ್ರಿಯ ಆಕಾಶದಲ್ಲಿ ನೋಡುವ ಬೆರಗುಗೊಳಿಸುವ ಬೆಳಕಿನ ಪ್ರಕಾಶಮಾನವಾದ ಗೆರೆಗಳು ಕಂಡುಬಂದಿತ್ತು.