Advertisement

ಡಿಜಿಬೌತಿಯಲ್ಲಿ ಚೀನಾದ ಸೇನಾನೆಲೆ – ಭಾರತಕ್ಕೆ ಹೊಸ ತಲೆನೋವು

10:19 PM Aug 05, 2023 | Team Udayavani |

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಲವರ್ಧನೆ ಮಾಡಿಕೊಳ್ಳುತ್ತಿರುವ ಚೀನಾ ಈಗ ಕಾಂಬೋಡಿಯಾದ ಡಿಜಿಬೌತಿಯಲ್ಲಿ ಸರ್ವ ಸುಸಜ್ಜಿತ ಬಂದರು ಅಭಿವೃದ್ಧಿ ಮಾಡುತ್ತಿದೆ. ಇದು ಭಾರತಕ್ಕೆ ನಿಸ್ಸಂದೇಹವಾಗಿ ಮುಂದಿನ ವರ್ಷಗಳಲ್ಲಿ ಪ್ರತಿಕೂಲವಾಗಿ ಪರಿಣಮಿಸುವ ಸಾಧ್ಯತೆಗಳು ಇವೆ.

Advertisement

ಕಾಂಬೋಡಿಯಾ ವ್ಯಾಪ್ತಿಯಲ್ಲಿ ಕೃತಕ ದ್ವೀಪಗಳನ್ನು ನಿರ್ಮಾಣ ಮಾಡುವ ಮೂಲಕ ಅಲ್ಲಿ ಬಂದರು ನಿರ್ಮಾಣ ಮಾಡುತ್ತಿದೆ ಎಂದು ವರದಿಯಾಗಿದೆ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಈ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಉಪಗ್ರಹಗಳ ಮೂಲಕ ದೊರೆತ ಫೋಟೋಗಳ ಪ್ರಕಾರ ಅಲ್ಲಿ ಈಗಾಗಲೇ ಪೂರ್ಣಪ್ರಮಾಣದ ಸೇನಾ ನೆಲೆ ನಿರ್ಮಾಣವಾಗಿದೆ. ಜತೆಗೆ ಅಗತ್ಯ ಕಟ್ಟಡಗಳೂ ತಲೆಎತ್ತಿವೆ.

ಹೊಸ ಮಿಲಿಟರಿ ನೆಲೆ ಆಫ್ರಿಕಾ ಖಂಡದ ಈಶಾನ್ಯ ಭಾಗದಲ್ಲಿದೆ. ಇದರಿಂದಾಗಿ ಹಿಂದೂ ಮಹಾಸಾಗರ ಪ್ರದೇಶಕ್ಕೆ ಮಿಲಿಟರಿ ಹಡಗುಗಳನ್ನು ಕಳುಹಿಸಲು ಡ್ರ್ಯಾಗನ್‌ ಸರ್ಕಾರಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ಯುನೈಟೆಡ್‌ ಕಿಂಗ್‌ಡಮ್‌ನ ಚಿಂತನಾ ಗುಂಪು ಕ್ಯಾಥಮ್‌ ಹೌಸ್‌ ಕಳೆದ ವಾರ ಫೋಟೋಗಳ ಸಹಿತ ವರದಿಯನ್ನು ಪ್ರಕಟಿಸಿತ್ತು.

ಭಾರತಕ್ಕೆ ತೊಂದರೆ ಹೇಗೆ?
ಸದ್ಯದ ಮಾಹಿತಿ ಪ್ರಕಾರ ಚೀನಾ ನೌಕಾಪಡೆ 350 ಯುದ್ಧ ಹಡಗುಗಳನ್ನು ಹೊಂದಿದೆ. ಮುಂದಿನ 3 ವರ್ಷಗಳಲ್ಲಿ ಅದು 460ಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಚೀನಾದಿಂದ ಉಂಟಾಗುವ ಸಂಭಾವ್ಯ ತೊಂದರೆ ಎದುರಿಸುವ ನಿಟ್ಟಿನಲ್ಲಿಯೇ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹಗಳಲ್ಲಿ ಗಸ್ತು ನಿಯೋಜನೆಗಾಗಿ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಆಸಕ್ತಿ ವಹಿಸಿದೆ. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಕೂಡ ಕಡಲು ಸಂಬಂಧಿ ಭದ್ರತೆಗಾಗಿ ವಿಚಕ್ಷಣಾ ವಿಮಾನಗಳನ್ನು ನಿಯೋಜನೆ ಮಾಡಿದೆ. ಈ ವರ್ಷದ ಜುಲೈನಲ್ಲಿ ಚೀನಾದಿಂದ ಭದ್ರತೆ ಎದುರಿಸುತ್ತಿರುವ ವಿಯೆಟ್ನಾಂಗೆ ಐಎನ್‌ಎಸ್‌ ಕೃಪಾಣ್‌ ಅನ್ನು ಉಡುಗೊರೆಯಾಗಿ ನೀಡಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next