Advertisement

ಪೂರ್ಣ ಸಂಘರ್ಷಕ್ಕೆ ಸಿದ್ಧರಾಗಿ: ಭಾರತಕ್ಕೆ ಚೀನ ಮಾಧ್ಯಮ ಎಚ್ಚರಿಕೆ

10:49 AM Jul 18, 2017 | udayavani editorial |

ಹೊಸದಿಲ್ಲಿ : ಸಿಕ್ಕಿಂನ ಡೋಕ್‌ಲಾಂ ಗಡಿಯಲ್ಲಿ ಭಾರತ ಮತ್ತು ಚೀನ ಸೇನೆಗಳ ಸುದೀರ್ಘ‌ ಮುಖಾಮುಖೀ ಮುಂದುವರಿದಿರುವಂತೆಯೇ ಇದೀಗ ಚೀನದ ಸರಕಾರಿ ಒಡೆತನದ ಪತ್ರಿಕೆ, “ಕಮ್ಯುನಿಸ್ಟ್‌ ದೇಶದೊಂದಿಗಿನ ವಿವಾದಿತ ಗಡಿಯ ಉದ್ದಕ್ಕೂ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಭಾರತ ಸಿದ್ಧವಾಗಿರಲಿ’ ಎಂಬ ಎಚ್ಚರಿಕೆಯನ್ನು ನೀಡಿದೆ. 

Advertisement

ಚೀನದ ಸರಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ “ಚೀನದೊಂದಿಗಿನ 3,488 ಕಿ.ಮೀ. ಉದ್ದದ ಗಡಿಯಲ್ಲಿ ಸಂಘರ್ಷದ ಹೊಸ ತಾಣಗಳನ್ನು ಚೀನ ತೆರೆಯಲಿದ್ದು ಭಾರತ ಪೂರ್ಣ ಪ್ರಮಾಣದ ಮಿಲಿಟರಿ ಸಂಘರ್ಷಕ್ಕೆ ಸಿದ್ದವಾಗಿರಬೇಕು’ ಎಂದು ಹೇಳಿದೆ. 

ಡೋಕ್‌ಲಾಂ ಗಡಿಯಲ್ಲಿ  ಭಾರತ ಸೇನೆಯೊಂದಿಗಿನ ಮುಖಾಮುಖೀ ಮುಂದುವರಿದಿರುವಂತೆಯೇ ಅತ್ತ ಟಿಬೆಟ್‌ನ ದುರ್ಗಮ ಪರ್ವತ ಪ್ರದೇಶದಲಿ ಚೀನ ತನ್ನ ದಾಳಿ ಸಾಮರ್ಥ್ಯವನ್ನು ಸಾಣೆಗೆ ಹಿಡಿಯುವ ಕ್ರಮವಾಗಿ ಲೈವ್‌ ಫೈರ್‌ ಕವಾತಯತುಗಳನ್ನು ನಡೆಸಿ ತನ್ನ ಬತ್ತಳಿಕೆಯಲ್ಲಿರುವ ಪ್ರಮುಖ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿ ಅವುಗಳ ಕ್ಷಮತೆ ಮತ್ತು ಪರಿಣಾಕಾರಿತ್ವವನ್ನು ಸಾಬೀತುಪಡಿಸಿಕೊಂಡಿ ಸಿದ್ದು ಇದರ ಬೆನ್ನಿಗೇ ಗ್ಲೋಬಲ್‌ ಟೈಮ್ಸ್‌ ಪತ್ರಿಕೆಯಲ್ಲಿ ಭಾರತಕ್ಕೆ ಯುದ್ಧದ ಬೆದರಿಕೆ ಒಡ್ಡುವ ಲೇಖನವನ್ನು ಪ್ರಕಟಿಸಲಾಗಿದೆ. 

“ಭಾರತದ ವಿರುದ್ಧ ಯುದ್ಧಕ್ಕೆ ಹೋಗಲು ಚೀನ ಭಯಪಡುವುದಿಲ್ಲ; ನಾವು ದೀರ್ಘಾವಧಿಯ ಯುದ್ದಕ್ಕೆ ಸಿದ್ಧರಾಗಿದ್ದೇವೆ’ ಎಂಬ ಎಚ್ಚರಿಕೆಯನ್ನು ಚೀನ ಈ ಲೇಖನಲ್ಲಿ ಭಾರತಕ್ಕೆ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next