Advertisement

ಹಿಂದೂ ರಾಷ್ಟ್ರೀಯವಾದಕ್ಕೆ ಚೀನ ಜೊತೆ ಯುದ್ಧ ಬೇಕು!

05:45 AM Jul 21, 2017 | |

ಹೊಸದಿಲ್ಲಿ: ಹಿಂದೂ ರಾಷ್ಟ್ರೀಯವಾದಕ್ಕೆ ಚೀನದೊಂದಿಗೆ ಯುದ್ಧ ಬೇಕು. ಅದಕ್ಕಾಗಿಯೇ ಡೋಕ್ಲಾಂ ಗಡಿಯಲ್ಲೀಗ ಸಮಸ್ಯೆ ಸೃಷ್ಟಿಯಾಗಿದೆ!

Advertisement

ಹೀಗೆಂದು ಹೇಳಿದ್ದು, ಚೀನದ ಸರಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌. ಡೋಕ್ಲಾಂ ಗಡಿ ವಿವಾದ ಬಗ್ಗೆ ಭಾರತವನ್ನು ಹೀಗಳೆವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿರುವ ಪತ್ರಿಕೆ, ಇದೀಗ ಹಿಂದೂ ರಾಷ್ಟ್ರೀಯವಾದವನ್ನು ಗುರಿ ಮಾಡಿಕೊಂಡಿದೆ. ಜೊತೆಗೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದೆ. 

“ಭಾರತವನ್ನು ಯುದ್ಧದ ಅಪಾಯದತ್ತ ದೂಡುತ್ತಿರುವ ಹಿಂದೂ ರಾಷ್ಟ್ರೀಯವಾದ’ ಎಂಬ ಶೀರ್ಷಿಕೆಯ ಲೇಖನದಲ್ಲಿ ಗಡಿಯಲ್ಲಿ ಚೀನವನ್ನು ಭಾರತ ಗುರಿಮಾಡಲು ಕಾರಣ, ಅಲ್ಲಿನ ಧಾರ್ಮಿಕ ರಾಷ್ಟ್ರೀಯವಾದ ಎಂದಿದೆ. ಜೊತೆಗೆ ಪ್ರಧಾನಿಯಾಗಿ ಮೋದಿ ಅವರ ಆಯ್ಕೆ ಹಿಂದೂ ರಾಷ್ಟ್ರೀಯವಾದಕ್ಕೆ ತುಪ್ಪ ಸುರಿಯಿತು ಎಂದು ಹೇಳಿದೆ. ಪ್ರಧಾನಿ ಮೋದಿ ಆಡಳಿತವನ್ನೂ ಟೀಕಿಸಲಾ ಗಿದ್ದು, “ಮೋದಿ ಸರಕಾರ ಧಾರ್ಮಿಕ ರಾಷ್ಟ್ರೀಯವಾದ ವಿಪರೀತಕ್ಕೆ ಹೋಗಿದ್ದರೂ ಅದರ ವಿರುದ್ಧ ಏನೊಂದೂ ಕ್ರಮ ಕೈಗೊ ಳ್ಳುತ್ತಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಮೇಲಿನ ಹಿಂಸಾ ಪ್ರಕರಣಗಳು ಹೆಚ್ಚಿದ್ದರೂ, ಅವುಗಳನ್ನು ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ’ ಎಂದು ಹೇಳಿದೆ. 

ಅಲ್ಲದೇ “ನವದೆಹಲಿ ಪಾಕಿಸ್ತಾನ ಮತ್ತು ಚೀನಗಳ ವಿರುದ್ಧ ಕಠಿನ ವಿದೇಶಿ ನೀತಿಗಳನ್ನು ಜಾರಿಗೊಳಿಸಿದ್ದು, ಇದರ ವಿರುದ್ಧ ಭಾರತದ ರಾಜಕಾರಣಿಗಳು ಮತ್ತು ವಿದೇಶಾಂಗ ಪರಿಣತರು, ಮಗುಮ್ಮಾಗಿ ದ್ದಾರೆ. ಅವರು ಭಾರತ-ಚೀನ ನೀತಿ ಯನ್ನು ಧಾರ್ಮಿಕ ರಾಷ್ಟ್ರೀಯವಾದ ಅಪಹರಿಸುವುದನ್ನು ತಡೆಯುತ್ತಿಲ್ಲ’ ಎಂದೂ ಆರೋಪಿಸಿದೆ.
 
ಭಿನ್ನ ಅಭಿಪ್ರಾಯಗಳನ್ನು ವಿವಾದ ಮಾಡದಿರಿ: ಗಡಿ ವಿವಾದವನ್ನು ಶಾಂತಿ ಯಿಂದ ಪರಿಹರಿಸುವ ಬಗ್ಗೆ ಭಾರತ ಮಾತನಾಡಿದ್ದು, ಭಿನ್ನ ಅಭಿಪ್ರಾಯಗಳನ್ನು ವಿವಾದ ಮಾಡುವುದು ಬೇಡ ಎಂದು ಚೀನಕ್ಕೆ ಕಿವಿಮಾತು ಹೇಳಿದೆ. ಸದ್ಯ ಉದ್ಭವವಾದ ಪರಿಸ್ಥಿತಿ ಕುರಿತಂತೆ ಹೊಸದಿಲ್ಲಿ ಭೂತಾನ್‌ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್‌ ಬಾಗ್ಲೆ ಹೇಳಿದ್ದಾರೆ. ಸಮಸ್ಯೆಯನ್ನು ಶಾಂತಿ ಯಿಂದ ಬಗೆಹರಿಸುವುದಕ್ಕೆ ನಾವು ಸಿದ್ಧರಿ ದ್ದೇವೆ. ಇದರೊಂದಿಗೆ ಜು.27ರಂದು ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಬ್ರಿಕ್ಸ್‌ ಸಮ್ಮೇಳನಕ್ಕಾಗಿ ಚೀನಕ್ಕೆ ತೆರಳವುದನ್ನು ಬಾಗ್ಲೆ ಖಚಿತಪಡಿಸಿದ್ದಾರೆ.

“ವಾಪಸ್‌ ಹೋಗದಿದ್ರೆ ಭಾರತೀಯ ಯೋಧರ ಸೆರೆ ಅಥವಾ ಸಾವು ಖಚಿತ!’ 
ಡೋಕ್ಲಾಂನಿಂದ ಭಾರತೀಯ ಸೈನಿಕರು ಹಿಂದೆ ಸರಿಯಬೇಕು. ಇಲ್ಲದಿದ್ದರೆ ಅವರನ್ನು ಬಂಧಿಸಬಹುದು ಅಥವಾ ಹತ್ಯೆಗೈಯ್ಯಬಹುದು ಎಂದು ಚೀನದ ಮಾಜಿ ವಿದೇಶಾಂಗ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂಬಯಿಯ ಚೀನ ಕಾನ್ಸುಲೇಟ್‌ನಲ್ಲಿ ಸೇವೆಯಲ್ಲಿದ್ದ ಅಧಿಕಾರಿ ಲಿಯು ಯೋಫಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತೀಯ ಸೈನಿಕರು ಚೀನ ಗಡಿಯನ್ನು ಉಲ್ಲಂ ಸಿದ್ದಾರೆ. ಆದ್ದರಿಂದ ಅವರೇ ಹಿಂದೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಇಲ್ಲದಿದ್ದರೆ, ಸೆರೆ ಅಥವಾ ಸಾವು ಖಚಿತ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next