Advertisement
ಶಾಂಘೈ ಸಹಕಾರ ಸಂಘ (ಎಸ್‌ಸಿಒ)ದ ಭದ್ರತಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಬಾಹ್ಯ ಶಕ್ತಿಗಳು ನಮ್ಮ ದೇಶಗಳಲ್ಲಿ ವರ್ಣ ಕ್ರಾಂತಿ (ಆಡಳಿತ ವಿರೋಧಿ ಪ್ರತಿಭಟನೆ)ಗೆ ಪ್ರಚೋದನೆ ನೀಡುವುದನ್ನು ನಾವು ತಡೆಯಬೇಕು. ಕೆಲವು ಶಕ್ತಿಗಳು ಇಂಥ ಪ್ರತಿಭಟನೆ, ಚಳವಳಿಗಳಿಗೆ ಕುಮ್ಮಕ್ಕು ಕೊಟ್ಟು ಸರಕಾರಗಳನ್ನು ಅಸ್ಥಿರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಅದಕ್ಕೆ ನಾವು ಅವಕಾಶ ನೀಡಬಾರದು’ ಎಂದಿದ್ದಾರೆ.
Related Articles
Advertisement
ಸರಕು ಸಾಗಣೆಗೆ ಮುಕ್ತ ಅವಕಾಶ ಸಿಗಲಿಎಸ್ಸಿಒ ಸದಸ್ಯ ರಾಷ್ಟ್ರಗಳ ನಡುವಿನ ಪೂರೈಕೆ ಸರಪಳಿಯು ಮತ್ತಷ್ಟು ದೃಢವಾಗಬೇಕೆಂದರೆ ಈ ಎಲ್ಲ ರಾಷ್ಟ್ರಗಳು ಪರಸ್ಪರ ಸರಕು ಸಾಗಣೆಗೆ ಅವಕಾಶ ಕಲ್ಪಿಸಬೇಕು ಎಂದು ಶೃಂಗದಲ್ಲಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಫ್ಘಾನಿಸ್ಥಾನಕ್ಕೆ ಭಾರತದಿಂದ ಸರಕುಗಳನ್ನು ಸಾಗಿಸಲು ಪಾಕಿಸ್ಥಾನವು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದಿವೆ. ಮೋದಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕ್ ಪಿಎಂ ಶೆಹಬಾಜ್ ಷರೀಫ್, “ನಾವು ಹೆಚ್ಚು ರಚನಾತ್ಮಕ ಸಂಪರ್ಕದತ್ತ ಹೆಜ್ಜೆಯಿಟ್ಟರೆ ಸರಕು ಸಾಗಣೆಗೆ ಮುಕ್ತ ಅವಕಾಶ ತನ್ನಿಂತಾನೇ ಲಭ್ಯವಾಗುತ್ತದೆ’ ಎಂದಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಅವರು ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎಡೋìಗನ್‌ರೊಂದಿಗೂ ಮಾತುಕತೆ ನಡೆಸಿದ್ದಾರೆ. ಪೇಚಿಗೆ ಸಿಲುಕಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್!
ರಷ್ಯಾ ಅಧ್ಯಕ್ಷ ಪುತಿನ್ ಜತೆಗೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧರಾಗುವ ವೇಳೆ ಇಯರ್‌ಫೋನ್ ಅನ್ನು ಕಿವಿಗೆ ಸಿಲುಕಿಸಲಾಗದೇ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಮಾತುಕತೆ ಆರಂಭವಾಗುವ ವೇಳೆ ಇಯರ್‌ಫೋನ್ ಅನ್ನು ಕಿವಿಗೆ ಸಿಲುಕಿಸಲು ಶೆಹಬಾಜ್ ಯತ್ನಿಸಿದರಾದರೂ ಅದು ಕೆಳಕ್ಕೆ ಬಿತ್ತು. ಮುಜುಗರಕ್ಕೊಳಗಾದ ಅವರು, “ಯಾರಾದರೂ ನನಗೆ ಸಹಾಯ ಮಾಡುತ್ತೀರಾ’ ಎಂದು ಕೇಳಿದಾಗ ಅಲ್ಲಿದ್ದ ಸಿಬಂದಿ ಬಂದು ಸರಿಪಡಿಸಿದರು. ಪಕ್ಕದಲ್ಲಿ ಕುಳಿತಿದ್ದ ಪುತಿನ್ ಅವರು ಇದನ್ನೆಲ್ಲ ಮುಗುಳ್ನಗುತ್ತಾ ವೀಕ್ಷಿಸುತ್ತಿದ್ದರು.