ಬೀಜಿಂಗ್: ಭಾರತ-ಚೀನ ಗಡಿಯಲ್ಲಿನ ಪ್ರಕ್ಷುಬ್ಧ ವಾತಾವರಣದ ಅಡ್ಡ ಪರಿಣಾಮ ಈಗ ಅನಿವಾಸಿ ಭಾರತೀಯರು ಹಾಗೂ ಭಾಷಿಕರ ಮೇಲೆ ಆಗುತ್ತಿದ್ದು, ಆತಂಕ ಸೃಷ್ಟಿಯಾಗಿದೆ.
ಹೌದು, ಇದೀಗ ಮತ್ತೂಂದು ಘಟನೆ ಶಾಂಘೈನಿಂದ ವರದಿಯಾಗಿದೆ. ಚೀನ ವಿಮಾನಯಾನ ಸಂಸ್ಥೆ ಭಾರತೀಯ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ನಿಂದಿಸಿ ಅವಮಾನಗೊಳಿಸಿದ ಘಟನೆ ರವಿವಾರ ಇಲ್ಲಿನ ಪುಡಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇದೀಗ, ಈ ಸಂಬಂಧ ಭಾರತ ದೂರು ಸಲ್ಲಿಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ಕುರಿತು ಶಾಂಘೈ ವಿದೇಶಾಂಗ ವ್ಯವಹಾರಗಳ ಕಚೇರಿ ಹಾಗೂ ಚೀನ ವಿದೇಶಾಂಗ ಇಲಾಖೆಗೂ ಗೊತ್ತಾಗಿದೆ. ಅಲ್ಲದೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರು ನೀಡಲಾಗಿದ್ದು, ಅವರು ಈಗಾಗಲೇ ವಿಮಾನ ನಿಲ್ದಾಣ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಚೀನ ಈಸ್ಟರ್ನ್ ಏರ್‌ಲೈನ್ಸ್ ಈ ಆರೋಪವನ್ನು ತಳ್ಳಿಹಾಕಿದೆ. ಸಿಸಿಟಿವಿ ಫೂಟೇಜ್ ಪರೀಕ್ಷಿಸಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕವೂ ಇದಕ್ಕೆ ಕಾರಣ ಏನೆನ್ನುವುದನ್ನು ಖಚಿತ ಪಡಿಸಿಲ್ಲ. ಪ್ರಯಾಣಿಕರೊಂದಿಗೆ ಸಿಬಂದಿ ಅಹಿತಕರವಾಗಿ ವರ್ತಿಸಿರುವ ಘಟನೆ ನಡೆದಿಲ್ಲ ಎಂದು ವೈಮಾನಿಕ ಸಂಸ್ಥೆ ಹೇಳಿಕೊಂಡಿದೆ. ಚೀನ ವಿದೇಶಾಂಗ ಇಲಾಖೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.
ಡೋಕ್ಲಾಂನಿಂದ ಕಾಲ್ಕಿàಳಲು ಚೀನ ತಯಾರಿ?: ಉತ್ತರ ಕೊರಿಯಾಕ್ಕೆ ಅದರದೇ ಧಾಟಿಯಲ್ಲಿ ನೇರವಾಗಿ ಅಮೆರಿಕ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಇತ್ತ ಚೀನ ಕೂಡ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಭಾರತದ ಗಡಿಯಲ್ಲಿ ತಾನು ನಿಯೋಜಿಸಿ ರುವ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಸೇನಾ ಬಲದಲ್ಲಿ ವಿಶ್ವದ ಯಾವುದೇ ದೇಶವನ್ನು ಎದುರಿಸುವ ಶಕ್ತಿ ಹೊಂದಿರುವ ಅಮೆರಿಕ ಶನಿವಾರವಷ್ಟೇ ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಪ್ರೌಢಿಮೆ ಮೆರೆದಿದೆ ಎಂದು ಬೆಂಬಲಿಸಿ ಮಾತನಾಡಿತ್ತು. ಅದೇ ಸಂದರ್ಭದಲ್ಲಿ ಯುದೊœàನ್ಮಾದದಲ್ಲಿ ಇರುವ ಉತ್ತರ ಕೊರಿಯಾಕ್ಕೂ ಎಚ್ಚರಿಕೆ ರವಾನಿಸಿತ್ತು. ಇದರ ಸೂಕ್ಷ್ಮ ಅರಿತ ಚೀನ ಈಗ ಡೋಕ್ಲಾಂ ಗಡಿ ವಿವಾದಕ್ಕೆ ಸಂಬಂಧಿಸಿ ಮೃದು ಧೋರಣೆ ತಾಳಿದೆ ಎಂದು ವರದಿಯಾಗಿದೆ.
ಚೀನಕ್ಕೆ ಯುದ್ಧವಷ್ಟೇ ಗೊತ್ತು
“ಚೀನಕ್ಕೆ ಯುದ್ಧದ ಪರಿಭಾಷೆ ಮಾತ್ರ ಗೊತ್ತಿರುವುದು. ಶಾಂತಿಯ ಬಗ್ಗೆ ತಿಳಿದೇ ಇಲ್ಲ. ಅವರು ದಲೈ ಲಾಮಾ ಇಲ್ಲಿ ಇಲ್ಲ ಎಂದು ಭಾವಿಸಿರಬಹುದು’ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಾವು ಯೋಗದ ಭಾಷೆಯಲ್ಲಿ ಮಾತನಾಡು ತ್ತೇವೆ. ಆದರೆ ಇದು ಅರ್ಥವಾಗದೇ ಇರುವವರಿಗೆ ಯುದ್ಧದ ಭಾಷೆಯಲ್ಲೇ ಗೊತ್ತು ಮಾಡಬೇಕಾಗುತ್ತದೆ’ ಎಂದಿದ್ದಾರೆ. ಇದೇ ವೇಳೆ ಚೀನದೊಂದಿಗೆ ಯಾವುದೇ ಕ್ಷಣದಲ್ಲಿ ಯುದ್ಧ ನಡೆಯಬಹುದಾದ ಸಾಧ್ಯತೆ ಇರುವ ಕಾರಣ ಭಾರತ ಸಿದ್ಧವಿರಬೇಕು ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಲೈಲಾಮಾ ಮಾತನಾಡಿ, “ಭಯ ಕೆರಳಿಸುವಂತೆ ಮಾಡುತ್ತದೆ. ಕೆರಳುವುದು ಸಿಟ್ಟಿನ ಹುಟ್ಟಿಗೆ ಮೂಲವಾಗುತ್ತದೆ. ಸಿಟ್ಟು ಗಲಭೆಗೆ ಕಾರಣವಾಗುತ್ತದೆ’ ಎಂದು ಚೀನಕ್ಕೆ ಟಾಂಗ್ ನೀಡಿದ್ದಾರೆ.