Advertisement

ಗಂಟೆಗೆ 28,968 ಕಿಮೀ ವೇಗದಲ್ಲಿ ಭೂಮಿಗೆ ಹಿಂತಿರುಗಲಿದೆ ಚೀನಿ ರಾಕೆಟ್ ಲಾಂಗ್ ಮಾರ್ಚ್..!?

03:49 PM May 07, 2021 | Team Udayavani |

ವಾಷಿಂಗ್ಟನ್: ನಿಯಂತ್ರಣ ತಪ್ಪಿ ಭೂಮಿಗೆ ಅಪ್ಪಳಿಸಲಿರುವ ಚೀನಿ ರಾಕೆಟ್  ಲಾಂಗ್ ಮಾರ್ಚ್ 5ಬಿ ಜಗತ್ತಿನ ಯಾವುದೇ ಜಾಗದಲ್ಲೂ ಬಂದು ಬೀಳಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

Advertisement

10 ಮಹಡಿಯ ಕಟ್ಟಡದ ಎತ್ತರವೂ, 23 ಟನ್ ಭಾರವಿರುವ ರಾಕೆಟ್ ಶನಿವಾರ ಅಥವಾ ಆದಿತ್ಯವಾರ ಭೂಮಿಗೆ ಬೀಳಬಹುದು ಎಂದು ವಿಜ್ಞಾನಿಗಳು ಹೇಳಿದ್ದು,   ಯಾವ ಪ್ರದೇಶದಲ್ಲಿ ಬಂದು ಬೀಳುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡದಿರುವುದು ಜಗತ್ತಿನಾದ್ಯಂತ ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ನಡುವೆ ಮತ್ತೊಂದು ವಿಚಾರ ಆತಂಕ ಸೃಷ್ಟಿಸಿದೆ.

ಓದಿ : ಬಡ ಜನರಿಗೆ ಊಟ ವಿತರಣೆ ಮಾಡಿದ ನಗರಸಭಾ ಉಪಾಧ್ಯಕ್ಷೆ ಅನುಷಾ

ಇನ್ನು, ಚೀನಿ ರಾಕೆಟ್ ಫೆಸಿಫಿಕ್ ನಲ್ಲಿ ಬೀಳಬಹುದು ಎಂದು ಹೇಳಲಾಗುತ್ತಿದೆಯಾದರೂ, ಜನ ವಾಸವಿರುವ ಯಾವ ಪ್ರದೇಶಕ್ಕೂ ಕೂಡ ಬಂದು ಬೀಳಬಹುದು ಎಂಬ ಆತಂಕ ಹುಟ್ಟಿಕೊಂಡಿದ್ದು, ಜನನಿಬಿಡ ನಗರ ಪ್ರದೇಶಗಳಲ್ಲಿ ಬಂದು ಬೀಳುವುದೆಂದು ಖಾತರಿಯಾದರೆ ತಕ್ಷಣ ಜನರನ್ನು ಸ್ಥಳಾಂತರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಎದ್ದಿದೆ.

ಚೀನಾದ ಹೊಸ ಬಾಹ್ಯಾಕಾಶ ನೆಲೆಯನ್ನು ಸ್ಥಾಪಿಸುವ ಉದ್ದೇಶದಿಂದ, ಅದರ ಭಾಗವಾಗಿ ಎಪ್ರಿಲ್ 29ರಂದು ಟಿಯಾನ್ಹೆ ಮೊಡ್ಯೂಲ್ ಜೊತೆಗೆ ಆಕಾಶದೆಡೆಗೆ ಹಾರಿತ್ತು ರಾಕೆಟ್ ಲಾಂಗ್ ಮಾರ್ಚ್. ನೆಲೆಗೆ ಅವಶ್ಯಕವಾದ ಅತ್ಯಂತ ಭಾರವಿರುವ ಸಾಮಗ್ರಿಗಳನ್ನು ತಲುಪಿಸುವುದಾಗಿತ್ತು ರಾಕೆಟ್ ಬಳಕೆಯ ಉದ್ದೇಶ. 11 ರಾಕೆಟ್ ಗಳು ಬಾಹ್ಯಾಕಾಶ ತಲುಪಿದರೆ ಮಾತ್ರ ಈ ನೆಲೆಯ ನಿರ್ಮಾಣ ಪೂರ್ಣಗೊಳ್ಳುವುದು.

Advertisement

ಇನ್ನು, ಅಮೇರಿಕಾದ ಶಿಕಾಗೋದಿಂದ ನ್ಯೂಯಾರ್ಕ್ ವರೆಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ‌. ಎಲ್ಲಿ ರಾಕೆಟ್ ಬಂದಪ್ಪಳಿಸುತ್ತದೆ ಎಂಬ ಪ್ರಶ್ನೆಗೆ ಚೀನಾ ಉತ್ತರಿಸಿಲ್ಲ.

ಆಫ್ರಿಕಾದ ಸುಡಾನ್ ನಲ್ಲಿ ಎಂದು ಅಮೇರಿಕದ ಏರೋಸ್ಪೇಸ್ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದು, ಆದರೆ, ಹವಾಮಾನದ ಬದಲಾವಣೆ ರಾಕೆಟ್ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಅಮೇರಿಕನ್ ಹಾಗೂ ರಷ್ಯನ್ ಏಜೆನ್ಸಿಗಳು ಈ ಚೀನಾದ ರಾಕೆಟ್ ಮೇಲೆ ಕಣ್ಣಿಟ್ಟಿದೆ. ಗಂಟೆಗೆ 28,968 ಕಿಮೀ ವೇಗದಲ್ಲಿ ರಾಕೆಟ್ ಭೂಮಿಗೆ ಹಿಂತಿರುಗಲಿದೆ ಎಂದು ವರದಿಯಾಗಿದೆ.

ಓದಿ : ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

Advertisement

Udayavani is now on Telegram. Click here to join our channel and stay updated with the latest news.

Next