ಬೀಜಿಂಗ್: ವಿವಿಧ ನೀತಿ ಪರಿಷ್ಕರಣೆಗಳ ಮೂಲಕ ತನ್ನ ದೇಶದ ಜನಸಂಖ್ಯೆ ಹೆಚ್ಚಿಸಲು ಪರದಾಡುತ್ತಿರುವ ಚೀನದಲ್ಲಿ ದಶಕದಲ್ಲೇ ಮೊದಲ ಬಾರಿಗೆ ಜನಸಂಖ್ಯಾ ಕುಸಿತ ಪ್ರಾರಂಭವಾಗಿದ್ದು, ಈ ಪ್ರಕ್ರಿಯೆ ಚೀನದ ಆರ್ಥಿಕತೆಯ ಮೇಲೆ ದೀರ್ಘಾವಧಿಯ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.
2022ರಿಂದಲೇ ಜನಸಂಖ್ಯಾ ಕುಸಿತವನ್ನು ಚೀನ ದಾಖಲಿಸುತ್ತಿದ್ದು, 2022ರಲ್ಲಿನ ಜನನ ಪ್ರಮಾಣದ ದತ್ತಾಂಶಗಳ ವರದಿಯನ್ನು ಮುಂದಿನ ವಾರ ಸರಕಾರ ಬಿಡುಗಡೆಗೊಳಿ ಸಲಿದೆ. ಮೂಲಗಳ ಪ್ರಕಾರ 10 ದಶಲಕ್ಷದಷ್ಟು ಕಡಿಮೆ ಜನನ ಪ್ರಮಾಣವನ್ನು ದತ್ತಾಂಶ ತೋರಿಸಲಿದೆ ಎಂದು ಹೇಳಲಾಗಿದೆ.
ಈಗಾಗಲೇ ಸತತ 6 ವರ್ಷಗಳಿಂದ ಚೀನದಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದ್ದು, ಕೊರೊನಾದಿಂದಾಗಿ 2021ರಲ್ಲಿ ಮರಣ ಪ್ರಮಾಣ ಕೂಡ ಹೆಚ್ಚಾಗಿದೆ. ವಿಶ್ವಸಂಸ್ಥೆ ಕೂಡ ಚೀನ ಜನಸಂಖ್ಯಾ ಕುಸಿತ ಪ್ರಮಾಣವನ್ನು ಅಂದಾಜಿಸಲಾಗಿದ್ದು, 2050ರ ವೇಳೆಗೆ 110 ದಶಲಕ್ಷದಷ್ಟು ಜನಸಂಖ್ಯೆಯನ್ನು ಚೀನ ಕಳೆದುಕೊಳ್ಳಲಿದ್ದು, ಪ್ರಸಕ್ತ ಇರುವ ಜನ ಸಂಖ್ಯೆಯ ಅರ್ಧಕ್ಕೆ ತಲುಪಲಿದೆ ಎಂದಿದೆ.
ಚೀನಿ ವೃದ್ಧರು ಆತ್ಮಹತ್ಯೆಗೆ ಶರಣು !: ಚೀನದ ಗ್ರಾಮೀಣ ಭಾಗಗಳಲ್ಲಿ ಕೊರೊನಾದಿಂದ ಜನರು ಬಳಲುತ್ತಿದ್ದಾರೆ. ಔಷಧಗಳು, ಚಿಕಿತ್ಸೆ ಸಿಗದೇ ಸೋಂಕಿಗೆ ಒಳಗಾದ ವೃದ್ಧರು ಆತ್ಮಹೆತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪೂರ್ವ ಚೀನದ ಅನುØತಿ ಪ್ರಾಂತದಲ್ಲಿ ವೈದ್ಯರು ಹಗಲು ರಾತ್ರಿಗಳನ್ನೆದೆ ಶ್ರಮಿಸುತ್ತಿದ್ದರೂ, ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.
ಕಳೆದ ಬಾರಿ ಗ್ರಾಮೀಣ ಭಾಗಗಳಲ್ಲಿ ತಿಂಗಳಿಗೆ 100 ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈ ಬಾರಿ ತಿಂಗಳ ಮೊದಲಾರ್ಧದಲ್ಲೇ 500ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ವೈದ್ಯರುಗಳಿಲ್ಲದೇ, ಔಷಧಗಳ ಸಮರ್ಪಕ ಪೂರೈಕೆಗಳಿಲ್ಲದೆ, ಆಸ್ಪತ್ರೆಗಳನ್ನು ಮುಚ್ಚಲಾಗಿದೆ. ಚಿಕಿತ್ಸೆ ಸಿಗದೆ ಹಲವು ಮಂದಿ ವೃದ್ಧರು ಆತ್ಯಹತ್ಯೆಗೆ ಶರಣಾಗಿದ್ದಾರೆ.